ಇಲಾಖೆ ಅಧಿಕಾರಿಗಳು ಕ್ರಿಯಾತ್ಮಕ ಆಡಳಿತ ನೀಡಿ
Team Udayavani, Jun 23, 2019, 3:00 AM IST
ಸಂತೆಮರಹಳ್ಳಿ: ಪ್ರತಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಅವರು ಇರುವ ಸ್ಥಳಕ್ಕೆ ತೆರಳಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡುವ ಕ್ರಿಯಾತ್ಮಕ ಆಡಳಿತ ಮಾಡಬೇಕು ಎಂದು ಶಾಸಕ ಎನ್. ಮಹೇಶ್ ಸಲಹೆ ನೀಡಿದರು.
ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮೊದಲ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಗ್ರಾಪಂಗಳಲ್ಲೂ ಜನಸಂಪರ್ಕ ಸಭೆ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಜನಸಂಪರ್ಕ ಸಭೆ ನಡೆಸಲಾಗುವುದು. ಪ್ರತಿ ಸಭೆಯಲ್ಲೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರ ಕುಂದು-ಕೊರತೆ ಆಲಿಸಿ, ಅರ್ಜಿ ಸ್ವೀಕರಿಸಿ ಸಾಧ್ಯವಾದರೆ ಅಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.
ದುಗ್ಗಹಟ್ಟಿ ಗ್ರಾಪಂಗೆ 12.98 ಕೋಟಿ ರೂ. ಅನುದಾನ: ಈ ಸಾಲಿನಲ್ಲಿ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12.98 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮೆಳ್ಳಹಳ್ಳಿ ಅಗರ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಶಿಕ್ಷಣ ಇಲಾಖೆಗೆ 2.25 ಲಕ್ಷ ರೂ. ಹಣವೂ ಸೇರಿದೆ. ಕಬಿನಿ ಕಾಲುವೆಯಲ್ಲಿ ಆಗಸ್ಟ್ ತಿಂಗಳಲ್ಲಿ ನೀರು ಹರಿಸಲಾಗುತ್ತದೆ.
ಹಾಗಾಗಿ ಈ ಕಾಲುವೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡಿಸಬೇಕು. ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಾವುದವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ತಿಗೂ ಕ್ರಮ ವಹಿಸುವ ಭರವಸೆ ನೀಡಿದರು.
ವಸತಿ ಯೋಜನೆಗೆ 1600 ಕೋಟಿ ರೂ. ಹಣ ಬೇಕು: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ರಾಜ್ಯಾದ್ಯಂತ 2.36 ಲಕ್ಷ ಮನೆಗಳಿಗೆ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 1.60 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ಅಂದಾಜು 1600 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಗಮನಕ್ಕೆ ಈ ವಿಷಯ ಬಂದಿದೆ.
ಆದರೆ ಸರ್ಕಾರದಲ್ಲಿ ಕೇವಲ 600 ಕೋಟಿ ರೂ. ಹಣವಿದ್ದು ಬೇರೆ ಮೂಲಗಳಿಂದ ಇದಕ್ಕೆ ಹಣ ಹಾಕುವಂತೆ ಒತ್ತಾಯಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ವಸತಿ ಸಮಸ್ಯೆಗಳು ಬಗೆಹರಿಯಲಿದ್ದು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ತಾಪಂ ಸದಸ್ಯೆ ಪಲ್ಲವಿ ಮಹೇಶ್, ಗ್ರಾಪಂ ಅಧ್ಯಕ್ಷೆ ಜಿ.ಎಚ್. ಪುಟ್ಟಮ್ಮಣಿ ಉಪಾಧ್ಯಕ್ಷ ಮಾದೇಶ್ ಸದಸ್ಯರಾದ ವೆಂಕಟರಂಗಶೆಟ್ಟಿ, ಜವರಶೆಟ್ಟಿ, ಮಹೇಶ್, ತಹಶೀಲ್ದಾರ್ ವರ್ಷಾ, ಉಪ ತಹಶೀಲ್ದಾರ್ ವೈ.ಎನ್. ನಂಜಯ್ಯ, ಇಒ ಬಿ.ಎಸ್. ರಾಜು ಪಿಡಿಒ ಶಿವಕುಮಾರ್,
ಅಬಕಾರಿ ಇಲಾಖೆಯ ಚೆಲುವರಾಜು, ಸಮಾಜ ಕಲ್ಯಾಣ ಇಲಾಖೆಯ ಮೇಘಾ, ಮೀನುಗಾರಿಕೆ ಇಲಾಖೆಯ ಕೆ.ಬಿ. ಶ್ವೇತಾ ಇಲಾಖೆಯ ಆರ್‌ಎಫ್ಒ ಮಹಾದೇವಯ್ಯ, ರಾಜೇಂದ್ರ ಎಇಇ ರವಿಕುಮಾರ್, ಕೋದಂಡರಾಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಹಾದೇವಸ್ವಾಮಿ ಇತರರು ಇದ್ದರು.
140 ಅರ್ಜಿಗಳು ಸಲ್ಲಿಕೆ: ಸಾರ್ವಜನಿಕರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಿಗೆ 140 ಮಂದಿ ಅರ್ಜಿಗಳನ್ನು ಸಲ್ಲಿಸಿದರು. ಇದರಲ್ಲಿ ತಾಲೂಕು ಪಂಚಾಯಿತಿಗೆ 85, ಕಂದಾಯ ಇಲಾಖೆಗೆ 35, ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ವಿಕಲಚೇತನ ಇಲಾಖೆ ಹಾಗೂ ಬ್ಯಾಂಕ್‌ಗಳಿಗೆ ತಲಾ 2, ಸೆಸ್ಕ್ 3, ಅರಣ್ಯ ಆರೋಗ್ಯ, ಶಿಕ್ಷಣ ಇಲಾಖೆಗೆ ತಲಾ ಒಂದೊಂದು ಅರ್ಜಿಗಳು ಸಲ್ಲಿಕೆಯಾದವು.
ಇದನ್ನು ಸ್ಥಳದಲ್ಲೇ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಯಿತು. ಅಲ್ಲದೆ ಈ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸ್ಥಳದಲ್ಲೇ ವೃದ್ಧಾಪ್ಯ, ವಿಕಲಚೇತನ, ಪಶು ಸಂಗೋಪನೆ ಇಲಾಖೆಯ ಹಾಗೂ ಇತರೆ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.