Fishing: ಹೊಗೇನಕಲ್‌ನಲ್ಲಿ ಮೀನುಗಾರಿಕೆ ಕಲ್ಪಿಸಿ
Team Udayavani, Oct 26, 2023, 3:50 PM IST
ಗುಂಡ್ಲುಪೇಟೆ: ಹೊಗೇನಕಲ್ ನದಿ ಭಾಗದಲ್ಲಿ ಮೀನುಗಾರಿಕೆ ನಡೆಸಲು ಅರಣ್ಯ ಇಲಾಖೆ ಅನುಮತಿ ನಿರಾಕರಿಸುತ್ತಿದೆ. ಇದರಿಂದ 200ಕ್ಕೂ ಅಧಿಕ ಕುಟುಂಬಸ್ಥರು ಬೀದಿಗೆ ಬೀಳು ವಂತಾಗಿದೆ ಎಂದು ಒಳನಾಡು ಬಂದರು ಮತ್ತು ಮೀನು ಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಮುಂದೆ ಮೀನುಗಾರರು ಅಳಲು ತೋಡಿಕೊಂಡರು.
ಭರವಸೆ: ಪಟ್ಟಣದ ಹೊರ ವಲಯದ ಮೀನು ಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮೀನು ಗಾರರ ಜತೆ ನಡೆದ ಸಂವಾದದಲ್ಲಿ ಮಾತ ನಾಡಿದ ಮೀನುಗಾರರು, ಹೊಗೇನಕಲ್ ವ್ಯಾಪ್ತಿ ಯ ತಮಿಳುನಾಡು ಭಾಗದಲ್ಲಿ ಮೀನುಗಾರಿಕೆ ಅವ ಕಾಶವಿದೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಅರಣ್ಯಧಿ ಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಸಂಬಂಧಿಸಿದ ಇಲಾಖೆ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಏತ ನೀರಾವರಿ ಕೆರೆಗಳಲ್ಲಿ ಮೀನು ಸಾಕಣೆಗೆ ಮೀನುಗಾರರ ಸಂಘಕ್ಕೆ ನೀಡಬೇಕು. ಒಂದು ಹೆಕ್ಟೇರ್‌ಗೆ 3 ಸಾವಿರ ಹಣವಿದ್ದು ಕಡಿಮೆ ಮಾಡಬೇಕು. ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ನೀರು ತುಂಬಿಸಿ ಮೀನುಗಾರಿಕೆಗೆ ಉತ್ತೇಜನ ನೀಡಬೇಕು. ಹಾಗೆಯೇ ಪೊದೆ ತೆರವು ಹಾಗೂ ಹೂಳು ತೆಗೆಸುವಂಂತೆ ಮನವಿ ಮಾಡಿದರು.
ತಾಲೂಕಿನಲ್ಲಿ ಉಪ್ಪಾರ ಸಮುದಾಯ ಮೀನುಗಾರಿಕೆ ನಡೆಸುತ್ತಿದ್ದು, 2 ಮೀನುಗಾರಿಕೆ ಸಹಾಯಕ ಸಂಘ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಎರಡು ಕೆರೆ ಗುತ್ತಿಗೆ ನೀಡಿದ್ದು, ಮತ್ತೂಂದು ಕೆರೆಯನ್ನು ಕಡಿಮೆ ದರಕ್ಕೆ ಗುತ್ತಿಗೆಗೆ ನೀಡುವಂತೆ ಅಣ್ಣೂರುಕೇರಿ ಗ್ರಾಮದ ಮಹದೇವಶೆಟ್ಟಿ ಮನವಿ ಮಾಡಿಕೊಂಡರು.
ಐಸ್ ಖರೀದಿಸಲು ಮೈಸೂರಿಗೆ ಹೋಗ ಬೇಕಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಐಸ್ ಫ್ಯಾಕ್ಟರಿ ತೊರೆಯುವಂತೆ ಮೀನುಗಾರರು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು, ಶೇ.50 ಸಬ್ಸಿಡಿ ನೀಡಲಾಗುತ್ತದೆ. ಸಹಕಾರ ಸಂಘಗಳಿಗೆ ಅಗತ್ಯ ಸಾಲ ಒದಗಿಸಲಾಗುವುದು. ಬಳಕೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಮನೆ ಮಂಜೂರಾತಿ: ಪಟ್ಟಣ ವ್ಯಾಪ್ತಿಯಲ್ಲಿ ಮೀನು ಮಾರಾಟಕ್ಕೆ ಮಳಿಗೆಗಳಲ್ಲಿ ಅವಕಾಶ ಮಾಡಿಕೊಡಬೇಕು. ಮೀನು ಕೊಂಡೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಿ, ಸಮರ್ಪಕ ದೋಣಿ, ಬಲೆ ಕೊಡಿಸಬೇಕು. ಜತೆಗೆ ಮನೆ ಮಂಜೂರಾತಿ ಮಾಡಿಕೊಡುವಂತೆ ಮನವಿ ಮಾಡಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ತಾಲೂಕು ವ್ಯಾಪ್ತಿಯ ಮೀನುಗಾರಿಗೆ ಉತ್ತೇಜನ ನೀಡಲು ಕೆರೆಗಳಲ್ಲಿ ತುಂಬಿರುವ ಹೂಳನ್ನು ಸಣ್ಣ ನೀರಾವರಿ ಸೇರಿ ಆಯಾ ಇಲಾಖೆ ವ್ಯಾಪ್ತಿಯ ಬರುವ ಅಧಿಕಾರಿಗಳಿಗೆ ಸೂಚಿಸಿ ತೆಗೆಸಲಾಗುವುದು. ಜತೆಗೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದೆಂದರು.
ಮೀನುಗಾರಿಕೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಜಂಟಿ ನಿರ್ದೇಶಕ ಗಣೇಶ್, ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್ವರ್, ಚಾಮರಾಜನಗರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಪ್ರಶಾಂತ್, ತಾಲೂಕು ಸಹಾಯಕ ನಿರ್ದೇಶಕ ವಿವೇಕ್, ಪುರಸಭೆ ಸದಸ್ಯ ಎನ್.ಕುಮಾರ್ ಇತರರಿದ್ದರು.
ಮೀನುಗಾರರ ಹಿತಕಾಯಲು ಸರ್ಕಾರ ಬದ್ಧ : ಮೀನುಗಾರರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಒಳನಾಡು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಪಟ್ಟಣದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮಾತನಾಡಿ, ಮೀನುಗಾರಿಕೆ ಮಾಡುವವರಿಗೆ ಸೂರು ಕಲ್ಪಿಸಬೇಕು ಎಂದು ಉದ್ದೇಶದಿಂದ ಆಶ್ರಯ ಮನೆ ಯೋಜನೆಯಡಿ ಮನೆ ಮಂಜೂರಾತಿಗೆ ಸಿದ್ಧತೆ ನಡೆಸ ಲಾಗುತ್ತಿದೆ. ತಾಲೂಕಿನಲ್ಲಿ 15 ಮಂದಿಗೆ ಮನೆ ಮಂಜೂರು ಮಾಡಲಾಗುವುದೆಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಮೀನು ಸಾಕಣೆ ಮತ್ತು ಮಾರಾಟ ಕಡಿಮೆ ಇರುವ ಹಿನ್ನೆಲೆ ಸಮುದ್ರದ ಮೀನು ತಂದು ಇಲ್ಲಿ ಮಾರಾಟ ಮಾಡಬಹುದಾ ಎಂಬುದರ ಮಾಹಿತಿ ಪಡೆದು ಸಮುದ್ರದ ಮೀನು ತರಲು ಪ್ರಯತ್ನಿಸಲಾಗುವುದು. ಅಷ್ಟೇ ಅಲ್ಲದೆ ಮೀನುಗಾರಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.