ಕೆರೆ ಮುಚ್ಚಿ ಸ್ಮಶಾನ ನಿರ್ಮಾಣ: ಆಕ್ರೋಶ
Team Udayavani, Feb 16, 2022, 1:48 PM IST
ಯಳಂದೂರು: ತಾಲೂಕಿನ ಬನ್ನಿಸಾರಿಗೆ ಗ್ರಾಮದ ಬಳಿ ಇರುವ ಕೆರೆಯನ್ನು ಮುಚ್ಚಿ ಸ್ಮಶಾನವನ್ನು ನಿರ್ಮಿಸಲು ಮುಂದಾಗಿರುವ ಕಂದಾಯ ಇಲಾಖೆಯ ಕ್ರಮಕ್ಕೆ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬನ್ನಿಸಾರಿಗೆ ಗ್ರಾಮದ ಹೊರ ವಲಯದಲ್ಲಿರುವ ಸರ್ವೆ ನಂ 987 ರಲ್ಲಿರುವ 1.18 ಎಕರೆ ಸರ್ಕಾರಿಜಮೀನಿದೆ. ಇಲ್ಲೇ 30 ಗುಂಟೆ ಜಮೀನಿನಲ್ಲಿ 2005ರಲ್ಲಿ ಸ್ಮಶಾನ ಸ್ಥಳವೆಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ, ಸರ್ಕಾರ ಈ ಸ್ಥಳದಲ್ಲಿ ಸ್ಮಶಾನ ಮಾಡಲು ಇಲ್ಲಿರುವ ಮಂಚೇಗೌಡನಕಟ್ಟೆಯನ್ನು ಆರಿಸಿಕೊಂಡಿರುವ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
8 ಕಟ್ಟೆ ಮುಚ್ಚಲಾಗಿದೆ: ಗ್ರಾಮ ವ್ಯಾಪ್ತಿಯಲ್ಲಿ ಇದುವರೆಗೂ 1 ರಿಂದ 2 ಎಕರೆ ಪ್ರದೇಶ ವ್ಯಾಪ್ತಿ ಯಲ್ಲಿದ್ದ ಒಟ್ಟು 8 ಕೆರೆಕಟ್ಟೆಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮುಚ್ಚಿಹೋಗಿವೆ. ಗ್ರಾಮ ವ್ಯಾಪ್ತಿಯ ಪುಟ್ಟರಂಗನಕೆರೆ, ಹೊಸಕೆರೆಯಪ್ಪ, ಮರಣಿಕಟ್ಟೆ, ಅರಳಿಕಟ್ಟೆ, ಅಲಿಗರಯ್ಯನಕಟ್ಟೆ, ಮಗನಕಟ್ಟೆ, ಚಿಕ್ಕಯ್ಯಮ ಕಟ್ಟೆ, ಲಕ್ಕಯ್ಯನಕಟ್ಟೆಗಳನ್ನು ಪ್ರಭಾವಿಗಳು ಒತ್ತು ವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡದವರು ವಾಸವಾಗಿರುವ ಈ ಸ್ಥಳದಲ್ಲಿದ್ದ ಕಟ್ಟೆಯನ್ನೂ ಮುಚ್ಚಲುಯತ್ನಿ ಸುತ್ತಿರುವ ಅಧಿಕಾರಿಗಳ ಕ್ರಮ ಹಲವು ಅನುಮಾನ ಗಳಿಗೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.