ವಶಕ್ಕೆ ಪಡೆದ ವಾಹನಗಳ ಹರಾಜು ಹಾಕಿ
Team Udayavani, Mar 10, 2018, 3:59 PM IST
ಕೊಳ್ಳೇಗಾಲ: ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿರುವ ವಾಹನ, ಇನ್ನಿತರ ವಸ್ತುಗಳನ್ನು ಕೋರ್ಟ್ ಅನುಮತಿ ಪಡೆದು ಹರಾಜು ಹಾಕುವಂತೆ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ನಗರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಠಾಣೆಗೆ ಭೇಟಿ ನೀಡಿ ಬಳಿಕ, ಆವರಣ ದಲ್ಲಿದ್ದ ಬೈಕ್, ಸೈಕಲ್, ಇನ್ನಿತರ ವಾಹನಗಳನ್ನು ವೀಕ್ಷಣೆ ಮಾಡಿದರು. ಕೂಡಲೇ ಕೋರ್ಟ್ ಅನುಮತಿ ಪಡೆದು ವಾಹನಗಳನ್ನು ಹರಾಜು ಹಾಕುವಂತೆ ಸೂಚಿಸಿದರು. ಈ ಹಿಂದೆ ಭೇಟಿ
ನೀಡಿದ್ದ ವೇಳೆ ಸೂಚನೆ ನೀಡಿದ್ದರೂ ವಾಹನ ತೆರವು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ದಾಸನಪುರ ಕಾವೇರಿ ನದಿಯಲ್ಲಿ ಅಕ್ರಮಮರಳು ಸಾಗಾಣಿಕೆಗೆ ಬಳಸಲಾಗಿದ್ದ 18 ಕೊಪ್ಪರಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಅವುಗಳನ್ನು ಹರಾಜು ಮಾಡಿ, ಬಂದ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕೆಂದು ಸ್ಥಳದಲ್ಲಿದ್ದ ಪೊಲೀಸ್ ಉಪಅಧೀಕ್ಷಕ ಪುಟ್ಟಮಾದಯ್ಯಗೆ ಸೂಚಿಸಿದರು.
ಜನಸ್ನೇಹಿ ಪೊಲೀಸ್ ಕೇಂದ್ರಕ್ಕೆ ಭೇಟಿ: ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಸಲುವಾಗಿ ನಗರ ಠಾಣೆಯಲ್ಲೂ ತೆರೆಯಲಾಗಿರುವ ಜನಸ್ನೇಹಿ ಕೇಂದ್ರಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆ ಭೇಟಿ ನೀಡುವ ಎಲ್ಲಾ ದೂರುದಾರರ ಸಹಿ ಮತ್ತು ವಿಳಾಸವನ್ನು ಕರಾರುವಕ್ಕಾಗಿ ಗಣಕಯಂತ್ರದಲ್ಲಿ ನಮೂದಿಸಿರುವುದನ್ನು ವೀಕ್ಷಣೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಾಕಷ್ಟು ಪ್ರಮಾಣದಲ್ಲಿ ನೋಂದಣಿ ಆಗದೆ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಾಚು ತಪ್ಪದೆ ನೋಂದಣಿ ಮಾಡಿಕೊಳ್ಳಬೇಕು ಎಂದು ಗಣಕ
ಯಂತ್ರದಲ್ಲಿನ ತಂತ್ರಾಂಶ ವೀಕ್ಷಣೆ ಮಾಡಿದರು.
ಸಂಚಾರಿ ಠಾಣೆ ಆರಂಭಕ್ಕೆ ಮನವಿ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಸಂಚಾರ ನಿಯಮ ಪಾಲನೆ ಮತ್ತು ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಸಂಚಾರಿ ಪೊಲೀಸ್ ಠಾಣೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ದೂರು ಕೇಳಿ ಬಂದಿದ್ದು, ಪೊಲೀಸ್ ತರಬೇತಿ ಪೂರ್ಣಗೊಂಡ ಬಳಿಕ ಸಿಬ್ಬಂದಿ ಭರ್ತಿ ಮಾಡಿ, ಸರ್ಮಪಕ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ತರಹದ ಸಮಸ್ಯೆಗಳು ಎದುರಾದಲ್ಲಿ ಕೂಡಲೇ ಠಾಣೆಗೆ ದೂರು ನೀಡುವ ಪ್ರವೃತ್ತಿಯನ್ನು ಬೆಳೆಸಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಎಎಸ್ಪಿ ಡಾ.ಗೀತಾ, ಸರ್ಕಲ್ ಇನ್ಸ್‌ಪೆಕ್ಟರ್ ರಾಜಣ್ಣ, ನಗರ ಠಾಣೆ ಎಸ್‌ಐ ವೀಣಾನಾಯಕ್, ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಬೋನಿಗೆ ಬಿದ್ದ 3-4 ವರ್ಷದ ಗಂಡು ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Eshwar Khandre: ಅರಣ್ಯದೊಳಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ
Gundlupete: ಬಂಡೀಪುರದಲ್ಲಿ ವಾಹನಗಳ ಅಡ್ಡಗಟ್ಟಿದ ಕಾಡಾನೆ: ಆತಂಕ
Gundlupete: 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಈಶ್ವರ್ ಖಂಡ್ರೆ
Gundlupete: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.