ಧಾನ್ಯಗಳಲ್ಲಿ ಶಿವಲಿಂಗ ದರ್ಶನಕ್ಕೆ ಸಿದ್ದತೆ


Team Udayavani, Feb 20, 2020, 3:00 AM IST

dhanyagallali

ಕೊಳ್ಳೇಗಾಲ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ಧಾನ್ಯಗಳಲ್ಲಿ ಶಿವಲಿಂಗ ದರ್ಶನಕ್ಕೆ ಬರದಿಂದ ಸಿದ್ಧಗೊಳ್ಳುತ್ತಿದೆ. ಪಟ್ಟಣದ ಈಶ್ವರೀಯ ವಿಶ್ವವಿದ್ಯಾನಿಲಯವು ಮೊಟ್ಟ ಮೊದಲ ಬಾರಿಗೆ ಮಹಾಶಿವರಾತ್ರಿ ಪ್ರಯುಕ್ತ ಧಾನ್ಯಗಳಲ್ಲಿ ಶಿವಲಿಂಗ ದರ್ಶನ ಸಿದ್ಧಪಡಿಸುತ್ತಿದ್ದು, ಸಾರ್ವಜನಿಕರು ವೀಕ್ಷಣೆ ಮಾಡಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ವಿನೂತನ ರೀತಿಯಲ್ಲಿ ಶಿವಲಿಂಗ ದರ್ಶನ ಮಾಡಿ, ಸಾರ್ವಜನಿಕರ ಮನಗೆದ್ದಿದೆ. ಈ ಬಾರಿ ಮತ್ತಷ್ಟು ಹಬ್ಬವನ್ನು ಆಕರ್ಷಣೆಯಾಗಿ ಆಚರಿಸುವ ಸಲುವಾಗಿ ಧಾನ್ಯಗಳಲ್ಲಿ ಶಿವಲಿಂಗ ದರ್ಶನಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿದೆ.

84 ವರ್ಷದಿಂದ ಅಲೌಕಿಕ ಕರ್ತವ್ಯ: ಜ್ಯೋತಿರ್‌ ಬಿಂದು ಸ್ವರೂಪಿ ಪರಾಪಿತ ಪರಮಾತ್ಮ ಶಿವನು ಈ ಭೂಮಿಯ ಮೇಲೆ ಅವತರಿಸಿದ್ದಾನೆ. ಪರಮಾತ್ಮ ಶಿವನು ಮನಷ್ಯರಾತ್ಮರ ಕಲ್ಯಾಣಾರ್ಥವಾಗಿ ಸರ್ವರಿಗೂ ಸತ್ಯ, ಜ್ಞಾನವನ್ನು ನೀಡುತ್ತಾನೆ. ಸುಖ, ಶಾಂತಿ, ಸಂಪನ್ನ ಸತ್ಯಯುಗೀ ದೈವಿ ಪ್ರಪಂಚದ ಪುನರ್‌ ಸ್ಥಾಪನೆ ನಿಶ್ಯಬ್ಧವಾಗಿ ನಡೆಯುತ್ತಿದೆ. ಕಳೆದ 84 ವರ್ಷಗಳಿಂದ ಈ ಅಲೌಕಿಕ ಕರ್ತವ್ಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಸಾಗುತ್ತಿದೆ.

ಸುಖ, ಶಾಂತಿ ಅನುಭವಿಸಿ: ಶಿವರಾತ್ರಿಯ ಹಬ್ಬದ ದಿನದಂದು ಎಲ್ಲಾ ರೀತಿಯ ಮನೋದೌರ್ಬಲ್ಯಗಳನ್ನು ದೂರ ಮಾಡಿರಿ, ಪರಮಾತ್ಮ ಶಿವನನ್ನು ಸ್ಮರಿಸಿ ಸಂಪೂರ್ಣ ಸುಖ, ಶಾಂತಿಯನ್ನು ಅನುಭವಿಸಿರಿ, ಅಜ್ಞಾನ, ಅಂದಕಾರವನ್ನು ಮನದಿಂದ ತೆಗೆಯಿರಿ. ಜ್ಞಾನದ ಅಣತೆಯನ್ನು ಹಚ್ಚಿರಿ, ಮನುಷ್ಯ ಅರಿತು ಸದಾ ಶಿವನನ್ನು ಜೊತೆಗಾರರನ್ನಾಗಿಮಾಡಿಕೊಳ್ಳಿರಿ. ಆಗಮಾತ್ರ ಸತ್ಯ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತದೆ.

ವೀಕ್ಷಣೆಗೆ ಅವಕಾಶ: ಮಹಾಶಿವರಾತ್ರಿ ಪ್ರಯುಕ್ತ ನಡೆಯುವ ಧಾನ್ಯಗಳ ಶಿವಲಿಂಗ ದರ್ಶನಕ್ಕೆ ಅವಕಾಶವಿದೆ. ಜನರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಈಶ್ವರೀಯ ಸಂದೇಶವನ್ನು ತಿಳಿಯಲು ಕೆಲವೇ ದಿನಗಳು ಬಾಕಿ ಇದ್ದು, ಇದನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

ರಾಜಯೋಗದಿಂದ ಸುಖ, ಶಾಂತಿ: ಮನುಷ್ಯನ ಅಂತರಿಕ ಸುಖ, ಶಾಂತಿ ಮತ್ತು ಆನಂದ ಪ್ರಾಪ್ತಿ ರಾಜಯೋಗದಿಂದ ಸಿಗುತ್ತದೆ. ಇಲ್ಲಿ ಹೇಳಿಕೊಡುವ ರಾಜಯೋಗದಿಂದ ಏಕಾಗ್ರತೆ, ಸ್ಮರಣೆ ಶಕ್ತಿ ಮತ್ತು ಮನೋಬಲದ ವೃದ್ಧಿಗೆ ಪೂರಕವಾಗುತ್ತದೆ. ಸದ್ಗುಣಗಳು ಹಾಗೂ ವಿಶೇಷತೆಗಳ ಆಧಾರದಿಂದ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲಿದೆ. ಸಂಬಂಧಗಳಲ್ಲಿ ಮಧುರತೆಯ ಮೂಲಕ ಗೃಹಸ್ತರಲ್ಲಿ ನೆಮ್ಮದಿ ಕಾಣಲು ಸಾಧ್ಯವಿದೆ.

ಶಿವಲಿಂಗ ದರ್ಶನದಲ್ಲಿ ಅಧಿಕಾರಿಗಳು ಭಾಗಿ: ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಧಾನ್ಯಗಳಲ್ಲಿ ಶಿವಲಿಂಗ ದರ್ಶನ ದೊರೆಯಲಿದೆ. ಫೆ.24ರಂದು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಶಿವಲಿಂಗ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ಕುಮಾರ್‌, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಬೋಯಲ್‌ ನಾರಾಯಣರಾವ್‌, ಕೇರಳದ ರಾಜಯೋಗಿನಿ ಬಿ.ಕೆ.ಮೀನಾಜಿ ಭಾಗವಹಿಸಲಿದ್ದಾರೆ.

ಮನುಷ್ಯನ ಸಮಸ್ಯೆಗಳನ್ನು ಶಮನ ಮಾಡಿಕೊಳ್ಳಲು ಮತ್ತು ಮಾನಸಿಕ ಒತ್ತಡಗಳನ್ನು ಬಿಡುಗಡೆ ಮಾಡಿ, ಜೀವನದಲ್ಲಿ ಸುಖ, ಶಾಂತಿ, ಆನಂದವನ್ನು ರಾಜಯೋಗ ಕೊಡುತ್ತದೆ.
-ಬಿ.ಕೆ.ಪ್ರಭಾಮಣಿ, ಮುಖ್ಯ ಸಂಚಾಲಕಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ

* ಡಿ.ನಟರಾಜು

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephanat-1

Chamarajanagara: ವಕ್ರದಂತ ಹೊಂದಿದ್ದ ಕಾಡಾನೆ ಸ್ವಾಭಾವಿಕ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

5

Gundlupete: ಎರಡು ಬೈಕ್ ಗಳ ನಡುವೆ ಅಪಘಾತ; ಇಬ್ಬರು ಸಾವು

10-gundlupete

Gundlupete: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.