3ನೇ ದಿನವೂ ದೊರಕದ ಫ‌ಲಿತಾಂಶ

Team Udayavani, Jul 1, 2020, 6:13 AM IST

3ne-dina

ಚಾಮರಾಜನಗರ: ಜಿಲ್ಲೆಯ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಸೀಲ್‌ಡೌನ್‌ ಆಗಿರುವುದರಿಂದ ಸತತ 3ನೇ ದಿನವೂ ಪ್ರಕರಣಗಳ ಫ‌ಲಿತಾಂಶ ದೊರಕಲಿಲ್ಲ. ಈ ರೀತಿ ವಿಳಂಬವಾದರೆ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿರುವವರಲ್ಲಿ  ಸೋಂಕಿತರಿದ್ದು ಅವರು ಎಲ್ಲೆಡೆ ಓಡಾಡಿದರೆ ಸೋಂಕು ಹರಡುವುದಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ. ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್‌ ಪರೀಕ್ಷಾ ಪ್ರಯೋಗಾಲಯದ ತಂತ್ರಜ್ಞೆಯೋರ್ವ ರಿಗೆ ಸೋಂಕು  ತಗುಲಿರುವ ಕಾರಣ ಸೀಲ್‌ಡೌನ್‌ ಆಗಿದೆ.

ಹೀಗಾಗಿ ಕಳೆದ ಶನಿವಾರ (ಜೂ.27) ದಿಂದ ಪ್ರಯೋಗಾಲಯದಲ್ಲಿ ಕೋವಿಡ್‌ನ‌ ಗಂಟಲು ಮಾದರಿ ಪರೀಕ್ಷೆಗಳು ನಡೆಯುತ್ತಿಲ್ಲ. ನಗರದ ಪೇಟೆ ಶಾಲೆಯ ಆವರಣದಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಂಕಿತರ ಗಂಟಲು ದ್ರವ ಸಂಗ್ರಹಣೆ ನಡೆಯುತ್ತಿದೆ. ಆದರೆ ಈ ಮಾದರಿಗಳ ಪರೀಕ್ಷೆ ಸ್ಥಗಿತವಾಗಿದೆ. ಶನಿವಾರ ಭಾನುವಾರದ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಪ್ರತಿ ದಿನ ಸರಾಸರಿ ಸುಮಾರು 500  ಮಾದರಿಗಳ ಸಂಗ್ರಹವಾಗುತ್ತದೆ. ಈಗಾಗಲೇ 1,678 ಮಾದರಿಗಳನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ 1 ಸಾವಿರ ಮಾದರಿಗಳು ನಗರದಲ್ಲೇ ಉಳಿದಿವೆ.

ವರದಿಗಾಗಿ ಕಾಯುತ್ತಿದ್ದೇವೆ: ಪರೀಕ್ಷೆ ಮಾಡಿಸಿಕೊಂಡು ಮೂರ್‍ನಾಲ್ಕು ದಿನಗಳಿಂದ ಮನೆಯಲ್ಲೇ ಉಳಿದಿರುವ ಇಬ್ಬರು ಉದಯವಾಣಿಯೊಂದಿಗೆ ಮಾತನಾಡಿ, ನಾವು ಪರೀಕ್ಷೆ ಫ‌ಲಿತಾಂಶ ಬರುತ್ತದೆಂದು ಭಾನುವಾರದಿಂದ ಕಾಯುತ್ತಿದ್ದೇವೆ. ಮಂಗಳವಾರವೂ ಪರೀಕ್ಷೆಯ ವರದಿ ಬಂದಿಲ್ಲ. ಬೇರೆಯವರಿಗೆ ಸೋಂಕು ಹರಡೀತು ಎಂಬ ಮುಂದಾಲೋಚನೆಯಿಂದ ಮನೆಯಲ್ಲೇ ಉಳಿದಿದ್ದೇವೆ. ಮನೆಯ ಲ್ಲೂ ಇತರರಿಂದ ಅಂತರ ಕಾಪಾಡಿ ಕೊಂಡು ಪ್ರತ್ಯೇಕ  ಕೋಣೆಯಲ್ಲಿದ್ದೇವೆ. ಫ‌ಲಿತಾಂಶ ಬಂದು ನೆಗೆಟಿವ್‌ ಆದರೆ ನಿರಾಳವಾಗಬಹುದು. ಪಾಸಿಟಿವ್‌ ಬಂದರೆ ಆಸ್ಪತ್ರೆಗಾದರೂ ದಾಖಲಾಗ ಬಹುದು. ಆದರೆ ಫ‌ಲಿತಾಂಶವೇ ಬಾರದೇ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಎಂದು ಅಳಲು  ತೋಡಿಕೊಂಡರು.

ಕಂಟೈನ್‌ಮೆಂಟ್‌ ವಲಯದಲ್ಲಿ ಕೇಳುವವರಿಲ್ಲ: ಇನ್ನೊಂದೆಡೆ, ನಗರದಲ್ಲಿ ಕಂಟೈನ್‌ಮೆಂಟ್‌ ವಲಯಗಳೆಂದು ಸೀಲ್‌ಡೌನ್‌ ಮಾಡಿರುವ ಪ್ರದೇಶಗಳಲ್ಲಿ ಉಸ್ತುವಾರಿ ನೋಡಿಕೊಳ್ಳುವವರಿಲ್ಲದೇ ಅನಾಥ ವಾಗಿವೆ. ನಗರದ ಭ್ರಮರಾಂಬ  ಬಡಾವಣೆ 6ನೇ ಕ್ರಾಸ್‌ನಲ್ಲಿ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಿ ಎರಡು ಬ್ಯಾರಿಕೇಡ್‌ ಹಾಕಲಾಗಿದೆ. ಒಂದೆರಡು ದಿನ ಅಲ್ಲಿ ಉಸ್ತುವಾರಿ ಸಿಬ್ಬಂದಿ, ಪೊಲೀಸ್‌, ಹೋಂ ಗಾರ್ಡ್‌ ಇದ್ದರು. ಆದರೆ ಮಂಗಳವಾರ  ಮಧ್ಯಾಹ್ನದವರೆಗೆ ಹೋಂ ಗಾರ್ಡ್‌ ಮಾತ್ರ ಇದ್ದರು. ಸೀಲ್‌ ಡೌನ್‌ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ ಇರಲಿಲ್ಲ. ಸೀಲ್‌ಡೌನ್‌ ಪ್ರದೇಶದ ಜನರ ಅವಶ್ಯಕತೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆ ಪ್ರದೇಶದ  ನಾಗರಿಕರು ಆರೋಪಿಸಿದ್ದಾರೆ.

* ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

BJP-BRS

Party Donation: ಬಿಜೆಪಿಗೆ 2,244 ಕೋ.ರೂ. ದೇಣಿಗೆ ಕಳೆದ ಬಾರಿಗಿಂತ ಶೇ. 212 ಏರಿಕೆ

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

Madhya Pradesh: ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ಭೂಪ!

Madhya Pradesh: ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ಭೂಪ!

Dam: ವಿಶ್ವದ ಅತಿದೊಡ್ಡ ಅಣೆಕಟ್ಟೆ ಕಟ್ಟಲು ಮುಂದಾದ ಚೀನ

Dam: ವಿಶ್ವದ ಅತಿದೊಡ್ಡ ಅಣೆಕಟ್ಟೆ ಕಟ್ಟಲು ಮುಂದಾದ ಚೀನ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

BJP-BRS

Party Donation: ಬಿಜೆಪಿಗೆ 2,244 ಕೋ.ರೂ. ದೇಣಿಗೆ ಕಳೆದ ಬಾರಿಗಿಂತ ಶೇ. 212 ಏರಿಕೆ

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

Madhya Pradesh: ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ಭೂಪ!

Madhya Pradesh: ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ಭೂಪ!

Dam: ವಿಶ್ವದ ಅತಿದೊಡ್ಡ ಅಣೆಕಟ್ಟೆ ಕಟ್ಟಲು ಮುಂದಾದ ಚೀನ

Dam: ವಿಶ್ವದ ಅತಿದೊಡ್ಡ ಅಣೆಕಟ್ಟೆ ಕಟ್ಟಲು ಮುಂದಾದ ಚೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.