![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 21, 2024, 11:40 PM IST
ಚಾಮರಾಜನಗರ: ತಾಲೂಕಿನ ಉಡಿಗಾಲದಲ್ಲಿ ಗುರುವಾರ ಸಂಜೆ ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಗುಂಡ್ಲುಪೇಟೆ ತಾಲೂಕಿನ ಕೋಡಸೋಗೆ ಶಾಂತಪ್ಪ ಅವರ ಮಗಳು ಅನ್ವಿತಾ (4) ಮೃತಪಟ್ಟಿದ್ದಾಳೆ.
ಅನ್ವಿತಾಳ ದೊಡ್ಡಪ್ಪನ ಮನೆ ಉಡಿಗಾಲದಲ್ಲಿ ಇದ್ದು ಅಲ್ಲೇ ಇರುವ ಚಂದನಾ ಕಾನ್ವೆಂಟ್‌ನಲ್ಲಿ ದಾಖಲಾಗಿದ್ದಳು. ಶಾಲಾ ವಾಹನದಲ್ಲಿ ಹೋಗಿ ಬರುತ್ತಿದ್ದಳು. ಎಂದಿನಂತೆ ಚಾಲಕ ಮಗುವನ್ನು ಮನೆ ಮುಂದೆ ನಿಲ್ಲಿಸಿ, ಇಳಿಸಿದ್ದಾನೆ.
ಬಾಲಕಿ ಬಸ್‌ನಿಂದ ಇಳಿದು ಹಿಂಬದಿ ನಿಂತಿದ್ದಳು. ಇದನ್ನು ಗಮನಿಸದ ಚಾಲಕ ವಾಹನವನ್ನು ಹಿಂದಕ್ಕೆ ತೆಗೆಯಲು ಮುಂದಾದಾಗ ಬಾಲಕಿಗೆ ಢಿಕ್ಕಿಯಾಗಿ ಹಿಂಬದಿಯ ಚಕ್ರ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
You seem to have an Ad Blocker on.
To continue reading, please turn it off or whitelist Udayavani.