ಶಿಕ್ಷಕನಿಂದ ಅಸಭ್ಯ ವರ್ತನೆ: ಬಿಇಒಗೆ ದೂರು
Team Udayavani, Dec 10, 2022, 4:23 PM IST
ಮಂಡ್ಯ: ಮಕ್ಕಳನ್ನು ಭವಿಷ್ಯದ ಸತøಜೆಗಳನ್ನಾಗಿ ರೂಪಿಸಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಡ್ಯ ತಾಲೂಕಿನ ಬೇಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹಲವು ಬಾರಿ ದೂರು ಸಲ್ಲಿಕೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಮಹದೇವು ಎಂಬಾತನೇ ಈ ಕೃತ್ಯ ನಡೆಸಿ ದ್ದಾನೆ. ವಿದ್ಯಾರ್ಥಿನಿಯರ ಜತೆ ಅಸಭ್ಯ ವಾಗಿ ವರ್ತಿಸುವುದಲ್ಲದೆ, ಅವರ ಮೈ, ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸ್ವತಃ ವಿದ್ಯಾರ್ಥಿನಿಯರೇ ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿ ದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಈ ರೀತಿಯಾಗುತ್ತಿದ್ದು ಪೋಷಕರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಬಿಇಒಗೆ ಕರೆ: ಆದರೆ, ಅಧಿಕಾರಿಗಳು ಈವ ರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಪೋಷಕರು ಎಸ್‌ಡಿಎಂಸಿ ಗಮನಕ್ಕೆ ತಂದಿಲ್ಲದೆ, ಸ್ಥಳೀಯ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಶುಕ್ರವಾರ ಇದ್ದಕ್ಕಿದ್ದಂತೆ ಎಸ್‌ಡಿಎಂಸಿ ಸಭೆ ಸೇರಿ ಈ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ, ಶಿಕ್ಷಕ ಮಹದೇವು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಂದು ಹಂತದಲ್ಲಿ ಹಲ್ಲೆ ಮಾಡಲೂ ಮುಂದಾಗಿದ್ದಾರೆ. ತಕ್ಷಣ ಪಂಚಾಯ್ತಿ ಸದಸ್ಯರು ತಡೆದು ಬಿಇಒಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಇಒ ಸೌಭಾಗ್ಯ ಅವರು ಪೋಷಕರ ದೂರನ್ನು ಆಲಿಸಿದರಲ್ಲದೆ, ಶಿಕ್ಷಕ ಮಹದೇವು ಅವರನ್ನು ಶುಕ್ರವಾರದಿಂದಲೇ ಕಡ್ಡಾಯ ರಜೆ ಮೇಲೆ ತೆರಳುವಂತೆ ಆದೇಶ ಹೊರಡಿಸಿದರು.
ಡಿಡಿಪಿಐ ಜತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಕ್ಕಳ ಪೋಷಕರಿಗೆ ಭರವಸೆ ನೀಡಿದರು. ಈ ಬಗ್ಗೆ ಅಸಮಾಧಾನಗೊಂಡ ಪೋಷಕರು, ಮಹದೇವು ಅವರನ್ನು ಅಮಾನತು ಮಾಡಬೇಕು. ಬೇರೆ ಯಾವುದೇ ಶಾಲೆಗೆ ಕಳುಹಿಸಬಾರದೆಂದು ಪಟ್ಟು ಹಿಡಿದರು.
ನಂತರ ಮಾತನಾಡಿದ ಬಿಇಒ, ಅವರನ್ನು ಅಮಾನತು ಮಾಡುವ ಅಧಿ ಕಾರ ನನಗಿಲ್ಲ. ಡಿಡಿಪಿಐ ಜತೆ ಚರ್ಚೆ ಮಾಡಿ ವಿವರಣೆ ನೀಡುತ್ತೇನೆ. ಖಂಡಿತವಾಗಿಯೂ ಶಿಕ್ಷಕ ಮಹದೇವು ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಸಮಾಧಾನಪಡಿಸಿದರು.
ಡಿಡಿಪಿಐಗೆ ವರದಿ ಸಲ್ಲಿಸುವೆ: ಇದು ವಿದ್ಯಾರ್ಥಿನಿಯರ ವಿಚಾರವಾ ಗಿರುವುದರಿಂದ ಗ್ರಾಮಸ್ಥರು ತುಂಬಾ ಆಕ್ರೋಶಗೊಂಡಿದ್ದರು. ಕೂಡಲೇ ನಾನು ಸ್ಥಳಕ್ಕೆ ಹೋಗಿ ಎಲ್ಲರನ್ನೂ ಸಮಾಧಾನಪಡಿಸಿ ವರದಿ ತೆಗೆದುಕೊಂಡು ಬಂದಿದ್ದೇನೆ. ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಮಂಡ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.