61ನೇ ವಯಸ್ಸಿನಲ್ಲಿ 200 ಕಿ.ಮೀ. ಕಾಲ್ನಡಿಗೆ, ದಂಡಿ ಸತ್ಯಾಗ್ರಹ.
Team Udayavani, Oct 3, 2021, 5:57 PM IST
ಗುಂಡ್ಲುಪೇಟೆ: ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜೀವನ, ಆದರ್ಶ ತತ್ವಗಳು, ಅಹಿಂಸಾ ಹೋರಾಟವನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಮಹಾತ್ಮರ ವಿಚಾರಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವಾಗಲಿ ಎಂದರು. ಮುಖ್ಯ ಭಾಷಣ ಮಾಡಿದ ಶಿಕ್ಷಕ ನಾಗರಾಜ ಶರ್ಮನ್, ಬಾಲ್ಯದಲ್ಲಿ ಗಾಂಧಿ ಸಾಧಾರಣ ಬುದ್ಧಿ ಮತ್ತೆಯ ಬಾಲನಾಗಿದ್ದರು. ಆಭರಣ ಕದಿಯುವ ಸನ್ನಿವೇಶವೂ ಅವರ ಜೀವನದಲ್ಲಿ ನಡೆದು ಹೋಗಿತ್ತು.
ಇದನ್ನೂ ಓದಿ:- ಎತ್ತಿನ ಭುಜದ ಮ್ಯಾಲೆ ಸವಾರಿ..! ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಸ್ಪಾಟ್
ಆದರೆ ನಂತರದಲ್ಲಿ ಶಾಂತಿ, ಅಹಿಂಸೆ, ಸತ್ಯಾಗ್ರಹವನ್ನು ಜಗತ್ತಿಗೆ ತಿಳಿಸಿದರು. ಪರಿಚಯವೇ ಇಲ್ಲದ ಬಾಲಕ ನಂತರದಲ್ಲಿ ಎಂ.ಕೆ.ಗಾಂಧಿ, ಇಂಡಿಯಾ ಎಂಬ ಎರಡು ಪದಗಳು ಅವರ ವಿಳಾಸವಾಗಿ ಬದಲಾಯಿತು ಎಂದರು.
ನುಡಿದಂತೆ ನಡೆದ ಕಾರಣಕ್ಕೆ ಸಮಾಜಕ್ಕೆ ಅವರು ನನ್ನ ಜೀವನವೇ ನನ್ನ ಸಂದೇಶ ಎಂದು ತಿಳಿಸಿದರು. 61ನೇ ವಯಸ್ಸಿನಲ್ಲಿ ಸಾಬರಾಮತಿಯಿಂದ ದಂಡಿ ಸತ್ಯಾಗ್ರಹದ ವರೆಗಿನ 200 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಮೂಲಕ ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾರಿದರು. ಈ ಕಾರಣಕ್ಕೆ ಇಂದು ನೂರಕ್ಕೂ ಹೆಚ್ಚು ದೇಶಗಳಲ್ಲಿ ಅವರ ಪ್ರತಿಮೆಗಳಿವೆ.
ಸರ್ವಕಾಲಕ್ಕೂ ಅವರು ಭಾರತದ ನಿಜ ಪ್ರತಿನಿಧಿ, ಬ್ರಾಂಡ್ ಅಂಬಾಸಿಡರ್ ಎಂದು ಬಣ್ಣಿಸಿದರು. ಈ ವೇಳೆ ಜಿ.ಪಿ.ರವಿಕುಮಾರ್, ಇರ್ಫಾನ್, ಮಾರ್ಟಿನಾಡೀನಾ ಇವರು ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ವಾಚಿಸಿದರು. ಪುರಸಭಾ ಉಪಾಧ್ಯಕ್ಷೆ ದೀಪಿಕ ಅಶ್ವಿನ್, ತಹಶೀಲ್ದಾರ್ ಸಿ.ಜಿ.ರವಿಶಂಕರ್, ಇಒ ಜಿ.ಶ್ರೀಕಂಠರಾಜೇಅರಸ್, ಮುಖ್ಯಾಧಿಕಾರಿ ಹೇಮಂತ್ ರಾಜ್, ಪುರಸಭೆ ಸದಸ್ಯರಾದ ಜಿ.ಎಸ್.ಮಧು ಸೂದನ್, ಸಾಜೀದ ಬೇಗಂ, ನಿರ್ಮಲ, ನಾಗೇಶ್, ಶ್ರೀನಿವಾಸನಾಯಕ(ಕಣ್ಣಪ್ಪ), ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಬಿಇಒ ಶಿವಮೂರ್ತಿ, ಸಿಪಿಐ ಲಕ್ಷ್ಮೀಕಾಂತ್, ಪಿಐ ಎಸ್.ಮಹದೇವಸ್ವಾಮಿ ಇತರರಿದ್ದರು.
ವಾರಕ್ಕೊಮ್ಮೆ ಉಪವಾಸಕ್ಕೆ ಶಾಸ್ತ್ರೀ ಕರೆ..
ಅಮೆರಿಕದಿಂದ ಬರುವ ಗೋಧಿಗೆ ಕಾಯಬೇಕಾದ ಪರಿಸ್ಥಿತಿಯಲ್ಲಿದ್ದ ಕಾರಣಕ್ಕೆ ಸ್ವತಃ ಉಪವಾಸ ವ್ರತ ಆಚರಿಸುವ ಮೂಲಕ ವಾರಕ್ಕೊಂದು ದಿನ ಉಪವಾಸಕ್ಕೆ ಕರೆಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರೀ, ದೇಶಕ್ಕೆ ಯೋಧ ಮತ್ತು ರೈತ ಏಕೆ ಅಗತ್ಯ ಎಂಬುದನ್ನು ತಿಳಿದಿದ್ದ ಅವರು ಜೈ ಜವಾನ್-ಜೈ ಕಿಸಾನ್ ಎಂಬ ಸಂದೇಶ ಸಾರಿದವರು.
ರೈಲು ಅಪಘಾತವಾದ ಕಾರಣಕ್ಕೆ ಸಚಿವರಾಗಿದ್ದ ಅವರು ನೈತಿಕತೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಇವರೇ ಮೊದಲಿಗರು. ಹಳ್ಳಿಗಳ ಉದ್ಧಾರದ ಕನಸು ಕಂಡಿದ್ದ ಅವರು ಕ್ಷೀರ ಕ್ರಾಂತಿಗೆ ನಾಂದಿಯಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದವರು ಎಂದು ಶಿಕ್ಷಕ ನಾಗರಾಜ ಶರ್ಮನ್ ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.