![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 29, 2019, 3:00 AM IST
ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಕಗೊಂಡ ಪ್ಯಾನೆಲ್ ವಕೀಲರಿಗೆ ಸೇವಾ ಮನೋಭಾವ ತುಂಬಾ ಮುಖ್ಯ. ಹಣಗಳಿಕೆಯ ಉದ್ದೇಶವನ್ನು ಮೀರಿ ಸಾಮಾನ್ಯರಿಗೂ ನ್ಯಾಯ ದೊರೆಯುವಂತೆ ಮಾಡುವುದು ಪ್ಯಾನೆಲ್ ವಕೀಲರ ಕರ್ತವ್ಯವಾಗಿರುತ್ತದೆ ಎಂದು ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿನಯ್ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ರಾಜ್ಯ ಕಾನೂನು ಸೇವೆಗಳರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಅಭಿಯೋಜನಾ ಇಲಾಖೆ ಸಂಯುಕ್ತಾಶ್ರಯದಲ್ಲಿ 2019ನೇ ಸಾಲಿನಲ್ಲಿ ಹೊಸದಾಗಿ ನೇಮಕಗೊಂಡ ಪ್ಯಾನೆಲ್ ವಕೀಲರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರಗಳು ಸಹಕಾರಿ: ಪ್ಯಾನೆಲ್ ವಕೀಲರು ಅವರ ಕಾರ್ಯಾವಧಿಯಲ್ಲಿ ವಿವಿಧ ರೀತಿಯ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ಸಮರ್ಥವಾಗಿ ಮುನ್ನಡೆಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ. ಕೇವಲ ಉಪನ್ಯಾಸ ರೀತಿಯ ಮಾದರಿಯಾಗಿರದೇ, ವಿಚಾರ ವಿನಿಮಯಕ್ಕೆ ಅವಕಾಶವಿರುವುದರಿಂದ ನಿಮ್ಮ ಎಲ್ಲಾ ಅನುಮಾನಗಳು ಈ ಕಾರ್ಯಾಗಾರದ ಮುಖೇನ ಪರಿಹಾರಗೊಳ್ಳಲಿವೆ ಎಂದು ತಿಳಿಸಿದರು.
ನೈಪುಣ್ಯತೆ ಇರಬೇಕು: ನಗರದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಗಣಪತಿ ಜಿ ಬಾದಾಮಿ ಮಾತನಾಡಿ, ಯಾವುದೇ ಪ್ರಕರಣವನ್ನು ಬಗೆಹರಿಸಲು ಪ್ಯಾನೆಲ್ ವಕೀಲರು ಮುಂದಾಗಬೇಕು. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ಪ್ರಕರಣಗಳ ಇತ್ಯರ್ಥಕ್ಕೆ ಅಗತ್ಯವಿರುವ ನೈಪುಣ್ಯತೆ ಇಂತಹ ಕಾರ್ಯಾ ಗಾರಗಳಿಂದ ದೊರೆಯಲಿದೆ ಎಂದು ಹೇಳಿದರು.
ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿ: ಇಂದಿಗೂ ಎಷ್ಟೋ ಜನರಿಗೆ ಕಾನೂನಿಗೆ ಬಗೆಗೆ ಸಂಪೂರ್ಣ ಮಾಹಿತಿ ಇಲ್ಲ. ಆಸ್ತಿ ವಿವಾದ, ವಿವಾಹ ವಿಚ್ಛೇದನ ಮುಂತಾದ ವಿಚಾರಗಳನ್ನು ಯಾವುದೇ ಕಾನೂನಿನ ಭದ್ರತೆ ಇಲ್ಲದೇ ತಮ್ಮಲ್ಲೇ ಬಗೆಹರಿಸಿಕೊಳ್ಳುವ ಪದ್ಧತಿ ಇದೆ. ಈ ಹಿಂಜರಿಕೆ ಮೊದಲು ಹೋಗಬೇಕು. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ತೀರ್ಪುಗಳ ಬಗ್ಗೆ ಅರಿತು ಕೊಂಡಿರಬೇಕು: ನಗರ ಉಪ- ವಿಭಾಗದ ಪೊಲೀಸ್ ಡಿವೈಎಸ್‌ಪಿ ಜೆ. ಮೋಹನ್ ಮಾತನಾಡಿ ಕಲಿಕೆ ಎಂಬುದು ನಿರಂತರವಾದದ್ದು. ವಕೀಲರಾದವರು ಕಾನೂನಿನಲ್ಲಾದ ಹೊಸ ತಿದ್ದುಪಡಿಗಳು, ಐತಿಹಾಸಿಕ ತೀರ್ಪುಗಳು ಮುಂತಾದವುಗಳ ಬಗ್ಗೆ ಅರಿತುಕೊಂಡಿರಬೇಕು. ಆಗಲೇ ಯಾವುದೇ ಪ್ರಕರಣವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂದರು.
ಒಳ್ಳೆಯ ಸೇವೆ ಒದಗಿಸಬೇಕು: ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ. ಜಿ. ವಿಶಾಲಾಕ್ಷಿ ಮಾತನಾಡಿ, ದೇಶದ ಕಟ್ಟಕಡೆಯ ನಾಗರಿಕನಿಗೂ ನ್ಯಾಯ ಸಿಗಬೇಕು ಎಂದು ನಮ್ಮ ಸರ್ವೋತ್ಛ ನ್ಯಾಯಾಲಯ ಪ್ರತಿಪಾದಿಸುತ್ತದೆ. ಅದರಂತೆ ವಕೀಲರು ತಮ್ಮ ಜ್ಞಾನವನ್ನು ಸಾಮಾನ್ಯರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬೇಕು. ತನ್ಮೂಲಕ ಸಾಮಾನ್ಯರಿಗೂ ಒಳ್ಳೆಯ ಸೇವೆ ಒದಗಿಸಬೇಕು ಎಂದು ಹೇಳಿದರು.
ಸಾಮಾನ್ಯರ ನೆರವಿಗೆ ನಿಲ್ಲಬೇಕು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಬಗೆಗೆ ಅರಿವಿರಬೇಕಾಗುತ್ತದೆ. ಕೇವಲ ಹಕ್ಕುಗಳನ್ನಷ್ಟೇ ಕೇಳದೇ ನಾವು ಮಾಡಬೇಕಿರುವ ಕರ್ತವ್ಯಗಳನ್ನು ನಿರ್ವಹಿಸಬೇಕು. ಪ್ಯಾನೆಲ್ ವಕೀಲರು ಈ ಗುಣವನ್ನು ರೂಢಿಸಿಕೊಂಡು ಸಾಮಾನ್ಯರ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ನ್ಯಾಯಿಕ ದಂಡಾಧಿಕಾರಿ ಸ್ಮಿತಾ, ಬೆಂಗಳೂರಿನ ವಕೀಲೆ ಮತ್ತು ವಿಶೇಷ ತರಬೇತುದಾರರಾದ ರಮಾ, ಜಿಲ್ಲಾ ಸರ್ಕಾರಿ ವಕೀಲ ಎಚ್. ಎನ್ ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಹರವೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.