ಅಂಗಡಿ ಮಾಲೀಕರು ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಿ
Team Udayavani, Aug 22, 2019, 3:00 AM IST
ಸಂತೆಮರಹಳ್ಳಿ: ಪ್ರತಿ ಅಂಗಡಿಯಲ್ಲೂ ಸಿ.ಸಿ. ಕ್ಯಾಮೆ ರಾಗಳನ್ನು ಅಳವಡಿಸಿಕೊಂಡರೆ ವರ್ತಕರಿಗೆ ಹೆಚ್ಚಿನ ಉಪಯೋಗ ವಾಗುವ ಜೊತೆಗೆ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರಿಗೂ ಸಹಾಯವಾಗಲಿದೆ ಎಂದು ಸಿಪಿಐ ಎ.ಕೆ.ರಾಜೇಶ್ ಹೇಳಿದರು. ಯಳಂದೂರು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಕರೆದಿದ್ದ ವರ್ತಕರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕಡ್ಡಾಯವಾಗಿ ಕ್ಯಾಮೆರಾ ಅಳವಡಿಸಿ: ಕರ್ನಾಟಕ ಪಬ್ಲಿಕ್ ಸೇಫ್ಟಿ ಕಾಯ್ದೆ 2018 ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ. ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂ ಸಿದ್ದಲ್ಲಿ ದಂಡ ವಿಧಿಸುವ ಅಧಿಕಾರವೂ ಇದೆ. ಹಾಗಾಗಿ ಆದಷ್ಟು ಬೇಗ ಎಲ್ಲರೂ ತಮ್ಮ ಅಂಗಡಿ ಮುಂಗಟ್ಟೆಗಳಿಗೆ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದರು.
ಎಲ್ಲರೂ ಸಹಕರಿಸಿ: ಇತ್ತೀ ಚೆಗೆ ಅಪರಾಧಗಳ ಸಂಖ್ಯೆ ಅಧಿಕವಾಗುತ್ತಿದೆ. ಇದನ್ನು ಕಂಡುಹಿಡಿಯುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಾರ್ವಜನಿಕರ ಬೆಂಬಲ ಸಿಕ್ಕರೆ ನಮ್ಮ ಕೆಲಸ ಸುಲಭವಾಗುವ ಜೊತೆಗೆ ಒಂದು ಸಾಮಾಜಿಕ ಕಾರ್ಯವನ್ನು ಮಾಡಿದ ಆತ್ಮತೃಪ್ತಿ ಇರುತ್ತದೆ ಹಾಗಾಗಿ ಎಲ್ಲರೂ ಸಹಕರಿಸಬೇಕು ಎಂದರು.
ಖೋಟಾ ನೋಡು ಹಾವಳಿ ತಡೆಗೆ ಸಹಕರಿಸಿ: ಪಿಎಸ್‌ಐ ಡಿ.ಆರ್.ರವಿಕುಮಾರ ಮಾತನಾಡಿ, ಇತ್ತೀಚೆಗೆ ಖೋಟಾ ನೋಟುಗಳ ಚಲಾವಣೆ ಹೆಚ್ಚಾಗಿದೆ. ಇದನ್ನು ಬೇಧಿಸುವಲ್ಲಿ ಪೊಲೀಸರಿಗೆ ವರ್ತಕರ ನೆರವು ಅಧಿಕವಾಗಿ ಬೇಕಾಗುತ್ತದೆ. ಇಂತಹ ನೋಟುಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಕರೆ ಮಾಡಿ ಅವರನ್ನು ಹಿಡಿಯಲು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಕುಡಿದ ಮತ್ತಿನಲ್ಲಿ ನಡೆಯುವ ಪ್ರಕರಣಗಳನ್ನು ಬೇಧಿಸಲು ನಮಗೆ ಸಿ.ಸಿ. ಕ್ಯಾಮೆರಾಗಳು ನೆರವಾಗುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪಟ್ಟಣದ ಅಗ್ರಹಾರ ಬೀದಿ ಹಾಗೂ ಸಂತೆಮಾಳದಲ್ಲಿ ಅನೇಕ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ಬಸ್ ನಿಲ್ದಾಣದಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು ಎಂದು ಕೆಲ ವರ್ತಕರು ಆಗ್ರಹಿಸಿದರು.
ಪೊಲೀಸರ ಭರವಸೆ: ಇದಕ್ಕೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಆದಷ್ಟು ಬೇಗ ಪಪಂನ ನೆರವಿನೊಂದಿಗೆ ಬಸ್ ನಿಲ್ದಾಣದಲ್ಲಿ ಕ್ಯಾಮೆರಾ ಅಳವಡಿಸಲು ಈಗಾಗಲೇ ಮಾತುಕತೆ ನಡೆದಿದ್ದು ಶೀಘ್ರದಲ್ಲೇ ಇದು ನೆರವೇರಲಿದೆ. ಇದರೊಂದಿಗೆ ಕಳ್ಳತನದ ಅಪರಾಧ ತಡೆಗಟ್ಟುವಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಆದಷ್ಟು ಬೇಗ ಇದನ್ನು ಬೇಧಿಸಲಾಗುವುದು ಎಂದು ಭರವಸೆ ನೀಡಿದರು. ವರ್ತಕರ ಸಂಘದ ಅಧ್ಯಕ್ಷ ನಯಾಜ್‌ಖಾನ್, ವೈ.ಜಿ. ನಿರಂಜನ್, ಶ್ರೀನಿವಾಸ, ನಾಸೀರ್‌ಷರೀಫ್, ಮಹೇಂದ್ರ, ಶ್ರೀನಿವಾಸ, ರವಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.