ಶ್ಯಾನಡ್ರಹಳಿ ಕೆರೆಗೆ ನೀರು ಹರಿಸಿ: ಶಾಸಕ
Team Udayavani, Oct 26, 2021, 2:19 PM IST
ಗುಂಡ್ಲುಪೇಟೆ: ತಾಲೂಕಿನ ಶ್ಯಾನಡ್ರಹಳ್ಳಿ ಕೆರೆಗೆ ಸೋಮವಾರದಿಂದಲೇ ನೀರು ಬಿಡುವಂತೆ ನೀರಾವರಿ ಇಲಾಖೆ ಎಂಜಿನಿಯರ್‌ಗೆ ಶಾಸಕ ಸಿ. ಎಸ್.ನಿರಂಜನಕುಮಾರ್ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶ್ಯಾನಡ್ರಹಳ್ಳಿ ಗ್ರಾಮಸ್ಥರು ಮಾತನಾಡಿ, ಕಳೆದ ವರ್ಷವೇ ಕೆರೆಗೆ ನೀರು ತುಂಬಿಸುವ ಭರವಸೆ ಇತ್ತು. ಆದರೆ ನಾನಾ ಕಾರಣದಿಂದ ವಂಚಿತವಾಗಿದೆ. ಪ್ರಸ್ತುತ ಬಲಚವಾಡಿ ಕೆರೆ ತುಂಬಿ ಕೋಡಿ ಬೀಳುವ ಹಂತ ತಲುಪಿರುವ ಹಿನ್ನೆಲೆ ಶ್ಯಾನಡ್ರಹಳ್ಳಿ ಕೆರೆಗೂ ನೀರು ಬಿಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ದೂರವಾಣಿ ಮೂಲಕ ನೀರಾವರಿ ಇಲಾಖೆ ಎಂಜಿನಿಯರ್ ಜತೆ ಮಾತನಾಡಿ, ಇಂದಿನಿಂದಲೇ ಕೆರೆಗೆ ನೀರು ಹರಿಸಬೇಕು. ಎಲ್ಲಾ ಕೆರೆಗಳು ಪೂರ್ತಿ ತುಂಬುವ ತನಕ ಕಾಯುವುದು ಬೇಡ. ಶೇ.75 ರಷ್ಟು ಭಾಗ ತುಂಬಿದರೆ ಮುಂದಿನ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದರು.
ಸಾಲ ನೀಡಿ: ಶಿವಪುರ ಆದಿ ಜಾಂಬವ ಮಹಿಳಾ ಸ್ವ ಸಹಾಯ ಸಂಘಕ್ಕೆ ಸಾಲ ನೀಡುವಂತೆ ಗುಂಡ್ಲು ಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿ ಯಾಗೆ ಹಲವು ಅರ್ಜಿ ಹಾಕಿದ್ದರೂ ಮ್ಯಾನೇ ಜರ್ ತಿರಸ್ಕಾರ ಮಾಡುತ್ತಿದ್ದಾರೆ. ಸಾಲ ಕೊಡಿಸಿಕೊಡುವಂತೆ ಶಾಸಕರಲ್ಲಿ ಸಂಘದ ಮಹಿಳೆಯರು ಮನವಿ ಮಾಡಿದರು. ಈ ವೇಳೆ ಶಾಸಕರು, ಸಾಲ ನೀಡಲು ಅಗತ್ಯವಾಗಿ ಬೇಕಾದ ದಾಖಲೆ ಪರಿಶೀಲನೆ ನಡೆಸಿ ಶೀಘ್ರ ಸಾಲ ಮಂಜೂರು ಮಾಡುವಂತೆ ಬ್ಯಾಂಕ್ ಮ್ಯಾನೇಜರ್‌ಗೆ ತಿಳಿಸಿದರು.
ವಾಟರ್‌ವೆುನ್ ಬದಲಾಯಿಸಿ: ಮನೆ ನಿರ್ಮಾಣ ಕುರಿತು ಪರಮಾಪುರ ಗ್ರಾಮದ ಪರಶಿವಮೂರ್ತಿ ಅರ್ಜಿ ಸಲ್ಲಿಸಿದರು. ಆರ್ ಟಿಸಿಯಲ್ಲಿ ಹೆಸರು ಬದಲಾವಣೆಯಾಗಿದ್ದು, ಸರಿಪಡಿಸುವಂತೆ ಇಂಗಲವಾಡಿ ಗ್ರಾಮದ ರೈತ ಮನವಿ ಮಾಡಿದರು. ಜಮೀನು ಖಾತೆ ಕೋರಿ ಚಿಕ್ಕಾಟಿ ರೈತ ತಿಳಿಸಿದರು. ಸಾಗುವಳಿ ನೀಡುವಂತೆ ಒಣಕನಪುರ ರೈತ ಕೋರಿದರು. ಮಲ್ಲಯ್ಯನ ಪುರ ವಾಟರ್‌ವೆುನ್ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ ಬದಲಾವಣೆಗೆ ಒತ್ತಾಯಿಸಿದರು.
ಅಂಗನವಾಡಿ ಸಹಾಯಕಿ ಕೆಲಸಕ್ಕೆ ವೈಯಕ್ತಿಕ ಸಮಸ್ಯೆಯಿಂದ 6 ತಿಂಗಳು ಗೈರಾದ ಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಆ ಸ್ಥಾನಕ್ಕೆ ಯಾರೂ ಇಲ್ಲದ ಕಾರಣ ಮತ್ತೆ ಸಹಾಯಕಿ ಹುದ್ದೆ ನೀಡುವಂತೆ ಸೀಗೆವಾಡಿ ಗ್ರಾಮದ ಮಹಿಳೆ ಮನವಿ ನೀಡಿದರು.
ಸ್ಪಂದಿಸಿ: ಸಾರ್ವಜನಿಕರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ಕಳೆದ ಸಭೆಯಲ್ಲಿ ಸೂಚನೆ ನೀಡಿದ ಕೆಲಸವನ್ನು ಇಲಾಖೆ ಅಧಿಕಾರಿಗಳು ಬಗೆ ಹರಿಸಲು ಮುಂದಾಗುತ್ತಿಲ್ಲ. ಸಾರ್ವಜನಿಕರು ಯಾವುದೇ ದೂರು ತಂದರೂ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಸಿ.ಜಿ.ರವಿಶಂಕರ್, ತಾಪಂ ಇಒ ಶ್ರೀಕಂಠರಾಜೇಅರಸ್, ಪಿಡಬ್ಲ್ಯುಡಿ ಇಲಾಖೆ ರವಿಕುಮಾರ್, ಬಿಸಿಯೂಟ ಮಂಜಣ್ಣ, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಜಯಕುಮಾರ್, ಸರ್ವೇ ಇಲಾಖೆ ರಮೇಶ್ ನಾಯಕ, ಕುಡಿಯುವ ನೀರುಸರಬರಾಜು ಇಲಾಖೆ ಪಲ್ಲವಿ, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಆರ್‌ಐ ರವಿಕುಮಾರ್, ಶ್ರೀನಿವಾಸ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.