ಸಿದ್ದಪ್ಪಾಜಿ ಜಾತ್ರೆ: ಭಕ್ತರಿಂದ ಪಂಕ್ತಿ ಸೇವೆ

Team Udayavani, Jan 25, 2019, 6:44 AM IST

kolle.jpg

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ ಪ್ರಮುಖ ಆಚರಣೆಯಾದ ಪಂಕ್ತಿಸೇವೆ ನಾಲ್ಕನೇ ದಿನವಾದ ಗುರುವಾರ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಆಗಮಿಸಿ ಪವಾಡ ಪುರುಷ ಸಿದ್ದಪ್ಪಾಜಿ ಗದ್ದುಗೆಯ ದರ್ಶನ ಪಡೆದರು. ಗುಡಾರ ಹಾಕಿದ್ದವರು ಕಂಡಾಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಹೊರಗಡೆಯಿಂದ ಸಿದ್ಧಪಡಿಸಿಕೊಂಡು ಬಂದಿದ್ದ ಮಾಂಸಾಹಾರವನ್ನು ಎಡೆ ಇಟ್ಟು ನೈವೇದ್ಯ ಮಾಡಿ ಸಮರ್ಪಿಸಿದರು. ಬಳಿಕ ಪದ್ಧತಿಯಂತೆ ಪಂಕ್ತಿ ಸೇವೆ ಮಾಡಿ ಹರಕೆ ತೀರಿಸಿದರು.

ಜಾತ್ರೆಯ ಆವರಣದಿಂದ ಸ್ವಲ್ಪ ದೂರ ಇರುವ ಖಾಸಗಿ ಜಮೀನುಗಳಲ್ಲಿ ಕುರಿ, ಮೇಕೆ, ಕೋಳಿಗಳನ್ನು ಕಡಿದು ಬಾಡೂಟ ತಯಾರಿಸಿ ಬಂಧು ಬಾಂಧವರ ಜತೆ ಊಟಮಾಡುವುದು ಪಂಕ್ತಿ ಸೇವೆ ಆಚರಣೆ.

ನಿರ್ಬಂಧ: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಾಣಿಗಳ ಸಾಗಾಣಿಕೆಗೆ ನಿರ್ಬಂಧ ಹೇರಿತ್ತು. ಆರು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಎಲ್ಲೆಡೆ ಬಂದೋಬಸ್ತ್ ಮಾಡಲಾಗಿತ್ತು. ಭಕ್ತಾದಿ ಗಳು ದೇವಸ್ಥಾನದ ಹೊರ ವಲಯದಲ್ಲಿರುವ ಆಜುಬಾಜಿನ ಜಮೀನುಗಳಲ್ಲಿ ತಾತ್ಕಾಲಿಕ ಬಿಡಾರಗಳನ್ನು ಹೂಡಿ ದೇವಸ್ಥಾನದಿಂದ ತೀರ್ಥವನ್ನು ತಂದು ಕುರಿ, ಕೋಳಿಗಳನ್ನು ಕತ್ತರಿಸಿ ಮಾಂಸಹಾರ ತಯಾರಿಸಿ ಫ‌ಂಕ್ತಿ ಭೋಜನ ನೆರವೇರಿಸಿದರು.

ಜಾತಿ, ಧರ್ಮ ಭೇದವಿಲ್ಲದೇ ಪಂಕ್ತಿ ಭೋಜನೆ ನಡೆಸುವುದೇ ಜಾತ್ರಾ ಮಹೋತ್ಸವದ ಪ್ರಮುಖ ಉದ್ದೇಶವಾಗಿದ್ದು, ಜಾತ್ರೆಯ ನಾಲ್ಕನೇ ದಿನ ಪಂಕ್ತಿ ಸೇವೆಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸಿ, ತಮ್ಮ ಹರಕೆ ತೀರಿಸಿದರು.

ಪೊಲೀಸ್‌, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳು ಹರಕೆಗೆಂದು ತಂದಿದ್ದ 3 ಕುರಿ, 32 ಆಡು, 80 ಕೋಳಿಗಳನ್ನು ವಶಪಡಿಸಿ ಕೊಂಡರು.

ಪೂಜೆ: ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೇವಸ್ತಾನದ ಹಳೇಮಠ ಮತ್ತು ಹೊಸಮಠಗಳಲ್ಲಿ ಭಕ್ತರು ದೇವಸ್ಥಾನದ ಮುಂದೆ ದೂಪಹಾಕಿ, ಬಿಡಾರಗಳಲ್ಲಿ ತಯಾರಿಸಿದ್ದ ಫ‌ಂಕ್ತಿಭೋಜನ ನೆರವೇರಿಸಿ ತಮ್ಮ ಹರಕೆ ಪೂರೈಸಿಕೊಂಡರು.

ತಪಾಸಣೆ: ದೇವಸ್ಥಾನಕ್ಕೆ ತೆರಳುವ ಸುಮಾರು 6 ಕಡೆಗಳಿಂದ ಬರುವ ವಾಹನ ಗಳನ್ನು ತಪಾಸಣೆ ಮಾಡಿದ ಅಧಿಕಾರಿ ಗಳು ವಾಹನಗಳಲ್ಲಿ ಕುರಿ, ಕೋಳಿ ಕಂಡು ಬಂದ ಕೂಡಲೇ ವಶಕ್ಕೆ ಪಡೆಯುತ್ತಿದ್ದರು. ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ದೇವಸ್ಥಾನಕ್ಕೆ ಬರುತ್ತಿದ್ದ ಮತ್ತಷ್ಟು ಭಕ್ತರು ಜಾತ್ರೆಗೆ ಬರಲು ಹಿಂಜರಿಯುತ್ತಿದ್ದರು.

ಆದರೂ ಸಂಪ್ರದಾಯದಂತೆ ದೇವಾಲಯಕ್ಕೆ ಹೋಗಲೇ ಬೇಕು ಎಂದು ಹಲವಾರು ಭಕ್ತರು ಕತ್ತರಿಸಿದ ಮಾಂಸವನ್ನು ಬೇರೆಡೆಗಳಿಂದ ತಂದು ಹೊರ ವಲಯಗಳಲ್ಲಿ ಕದ್ದುಮುಚ್ಚಿ ಅಡುಗೆ ತಯಾರಿಸುತ್ತಿದ್ದರು. ಶುಕ್ರವಾರ ಮುತ್ತುರಾಯನ ಸೇವೆ ಯೊಂದಿಗೆ ಬೃಹತ್‌ 5 ದಿನದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಟಾಪ್ ನ್ಯೂಸ್

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಬೈಕ್ – ಆಂಬ್ಯುಲೆನ್ಸ್ ನಡುವೆ ಅಪಘಾತ: ಬೈಕ್ ಸವಾರ ಸಾವು

Road Mishap: ಬೈಕ್ – ಆಂಬ್ಯುಲೆನ್ಸ್ ನಡುವೆ ಅಪಘಾತ: ಸವಾರ ಸಾವು

12

Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿ ಆನೆ ದಾಳಿ:ವಿಡಿಯೋ ವೈರಲ್

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.