![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 8, 2020, 6:03 AM IST
ಚಾಮರಾಜನಗರ: ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ನಗರದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಮೊದಲೇ ಜನರಿಗೆ ಮಾಹಿತಿ ನೀಡಬೇಕು.
ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ, ಸಾಧ್ಯವಾಗದಿದ್ದಲ್ಲಿ ಕಚೇರಿಯಲ್ಲಿ ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ತಿಳಿಸಿದರು. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಪರಿಕರಗಳಿಗೆ ಕೊರತೆಯಾಗಬಾರದು. ಮೇವು ದಾಸ್ತಾನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ರಾಸುಗಳಿಗೆ ಕಾಲಕಾಲಕ್ಕೆ ಲಸಿಕೆ, ಔಷಧೋಪಚಾರ ಮಾಡಬೇಕು.
ಕುಡಿಯುವ ನೀರಿಗೂ ತೊಂದರೆಯಾಗ ಬಾರದು ಎಂದು ಅಶೋಕ್ ತಿಳಿಸಿದರು. ಶಾಸಕರಾದ ನರೇಂದ್ರ, ನಿರಂಜನಕುಮಾರ್ ಮಾತ ನಾಡಿ, ರೈತರ ಬೇಡಿಕೆಗಳಿಗೆ ಅನುಸಾರವಾಗಿ ಬಿತ್ತನೆ ಬೀಜ ಪೂರೈಕೆ ಮಾಡಬೇಕಿದೆ. ರೈತರ ಬಿತ್ತನೆ ಬೇಡಿಕೆಗಳ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದು, ಅದಕ್ಕ ನುಗುಣವಾಗಿ ಕೃಷಿ ಇಲಾಖೆ ಪೂರಕ ಸಿದಟಛಿತೆ ಮಾಡಿ ಕೊಳ್ಳಬೇಕೆಂದು ತಿಳಿಸಿದರು.
ಪ್ರತಿ ಗ್ರಾಮಗಳಿಗೂ ಸ್ಮಶಾನಗಳಿಗಾಗಿ ಜಾಗ ಒದಗಿಸುವುದು. ಹೊಸ ಕಂದಾಯ ಗ್ರಾಮ, ಪೋಡಿ ಪ್ರಕರಣಗಳ ವಿಲೇವಾರಿ, ಶಿಕ್ಷಣ, ಆಸ್ಪತ್ರೆ, ಆಟದ ಮೈದಾನಗಳಿಗೆ ಭೂಮಿ ಮೀಸಲು ಇಡುವುದು ಸೇರಿದಂತೆ ಕಂದಾಯ ಇಲಾಖೆಯಿಂದ ನೀಡಲಾಗುವ ಆರ್ಥಿಕ ನೆರವು ಕುರಿತು ಸಚಿವರು ಪ್ರಗತಿ ಪರಿಶೀಲಿಸಿದರು. ಜಿಪಂ ಅಧ್ಯಕ್ಷೆ ಅಶ್ವಿನಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಿಇಒ ಹರ್ಷಲ್ ಬೋಯರ್, ಎಸ್‌ಪಿ ಆನಂದ ಕುಮಾರ್, ಎಡೀಸಿ ಆನಂದ್, ಎಸಿ ನಿಖೀತಾ ಇತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.