ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಪ್ರೋಕ್ಷಣೆ; ವಿಶೇಷ ಪೂಜ
Team Udayavani, Mar 30, 2021, 4:04 PM IST
ಯಳಂದೂರು: ಜಿಲ್ಲೆಯ ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ, ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮದ ಅಂಗವಾಗಿ ಪೂಜಾ ವಿಧಿ ವಿಧಾನಗಳು ಸೋಮವಾರ ಸಾಂಗವಾಗಿ ನೆರವೇರಿದವು.
ಸೋಮವಾರ ಬೆಳಗ್ಗೆಯಿಂದಲೇ ಪೂಜಾಕೈಂಕರ್ಯಗಳು ಆರಂಭವಾದವು. ಶಾಸಕಎನ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಉಪಸ್ಥಿತಿಯಲ್ಲಿ ವಿವಿಧ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು.ದೇವತಾ ಪ್ರಾರ್ಥನೆ, ವಿಷ್ಪಕ್ಷೇನಾರಾಧನೆ,ಪುಣ್ಯಾಹವಾಚನ, ಪಂಚಗವ್ಯಾರಾಧನ, ರಕ್ಷಾ ಬಂಧನ ಅಚವಾರ್ಯಋತ್ವಿಗರಣ, ಔಪಸನಾಗ್ನಿಕುಂಟೇಪು, ಅಗ್ನಿಪ್ರತಿಷ್ಠಾಪನಾ ಅಕಲ್ಯಷಹೋಮ, ಮತ್ತಿತ್ತರ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಕ್ಷೇತ್ರದ ಶಾಸಕ ಎನ್.ಮಹೇಶ್ ದೇವಾಲಯಕ್ಕೆ ಭೇಟಿನೀಡಿ ಮಹಾಸಂಪ್ರೋಕ್ಷಣ ಅಂಗವಾಗಿನಡೆಯುತ್ತಿರುವ ಪೂಜಾ ವಿಧಿ ವಿಧಾನಕಾರ್ಯಗಳಲ್ಲಿ ಪಾಲ್ಗೊಂಡರು. ದೇವಾಲಯದಆಗಮಿಕರು, ಅರ್ಚಕರ ವೃಂದಕ್ಕೆ ದೀûಾವಸ್ತ್ರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೀಡಿದರು.
ದರ್ಶನಕ್ಕೆ ಅವಕಾಶ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಸಂಪ್ರೋಕ್ಷಣಾಕಾರ್ಯಗಳ ಅಂಗವಾಗಿ ಧಾರ್ಮಿಕವಿಧಿವಿಧಾನಗಳು ಆರಂಭವಾಗಿವೆ. ಈ ಕಾರ್ಯ ಮಂಗಳ ತರುವಂಥದ್ದು. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಕ್ತರಿಗೆ ರಂಗನಾಥನ ದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಸಂಪೂರ್ಣ ಸಂಪ್ರೋಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಹಿರಿಯರ ಮಾರ್ಗದರ್ಶನ, ಆಗಮಿಕರ ನೇತೃತ್ವದಲ್ಲಿ ನೆರವೇರುತ್ತಿರುವ ಧಾರ್ಮಿಕಕೈಂಕರ್ಯ ಅತ್ಯಂತ ಯಶಸ್ವಿಯಾಗಿ,ಸಾಂಗವಾಗಿ, ಬಿಳಿಗಿರಿರಂಗನ ಸಂತೃಪ್ತಿಗೆತಕ್ಕಹಾಗೆ ನಡೆಯಲಿದೆ. ಆ ಮೂಲಕವಾಗಿಇಡೀ ಜಿಲ್ಲೆಯ ಜನರ ಸರ್ವಾಂಗೀಣಅಭಿವೃದ್ಧಿ, ರಂಗನಾಥನ ಕ್ಷೇತ್ರ ಜಗತøಸಿದ್ಧವಾಗಲಿ ಎಂದು ಪ್ರಾರ್ಥಿಸಿದರು.
ದೇವಾಲಯದ ಜೀರ್ಣೋದ್ಧಾರಕ್ಕೆ ಅನೇಕ ದಾನಿಗಳು ಸ್ವಯಂಪ್ರೇರಿತರಾಗಿ ಸೇವೆಸಲ್ಲಿಸಿದ್ದು, ಇವರೆಲ್ಲನ್ನೂ ಕೃತಜ್ಞತೆಯಿಂದಸ್ಮರಿಸಬೇಕು. ಎಲ್ಲರಿಗೂ ಶ್ರೇಯಸ್ಸು, ಸಮೃದ್ಧಿತರಲೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆಶಿಸಿದರು.
ಪ್ರಧಾನ ಅರ್ಚಕ, ಆಗಮಿಕ ಎಸ್ .ನಾಗರಾಜಭಟ್, ರವಿಕುಮಾರ್, ಮೈಸೂರಿನಮಹಾರಾಜ ಸಂಸ್ಕೃತ ಪಾಠಶಾಲೆಯವೈಖಾನಸಾಗಮ ಪ್ರಾಧ್ಯಾಪಕ ಡಾ.ಎಸ್.ಶ್ರೀನಿಧಿ, ಡಾ.ಎಸ್.ರಾಜ ಗೋಪಾಲ್, ಡಾ.ಪಿ. ಸತ್ಯನಾರಾಯಣ, ನಾಗೇಂದ್ರಭಟ್‌ಅವರ ಜೊತೆ ಇತರೆ ಪಂಡಿತರು ಧಾರ್ಮಿಕವಿಧಿ ವಿಧಾನಗಳನ್ನು ನೆರವೇರಿಸಿದರು. ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್‌ಬಡೋಲೆ, ತಹಶೀಲ್ದಾರ್ ಜಯಪ್ರಕಾಶ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajnagar: ತೂಕ ಇಳಿಸಿಕೊಳ್ಳಲು ಪೊಲೀಸರಿಗೆ ಬೆಟ್ಟ ಹತ್ತುವ ವ್ಯಾಯಾಮ!
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್ ಅಧಿಕಾರ ಸ್ವೀಕಾರ
Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್ ಶರ್ಮಾ ಅಭ್ಯಾಸ
Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.