ಬೆಳ್ಳಿ ರಥೋತ್ಸವ ಸೇವೆ ದರ ಇಳಿಸಲು ಆಗ್ರಹ
Team Udayavani, Jun 27, 2023, 1:09 PM IST
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಲೋಕಾರ್ಪಣೆಗೊಳಿಸಿರುವ ಬೆಳ್ಳಿ ರಥೋತ್ಸವ ಸೇವೆಗೆ ನಿಗದಿಪಡಿಸಿರುವ ದರವನ್ನು ಕಡಿಮೆ ಮಾಡುವಂತೆ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಬೆಳ್ಳಿ ರಥವನ್ನು ನಿರ್ಮಿಸಿ ಜೂ. 25ರಂದು ಲೋಕಾರ್ಪಣೆಗೊಳಿಸಿದ್ದು ಸೇವೆ ನೆರವೇರಿಸುವ ಭಕ್ತಾದಿಗಳಿಗೆ 2,001 ರೂ. ಗಳನ್ನು ನಿಗದಿಪಡಿಸಲಾಗಿದೆ. ಈ ದರ ಹೆಚ್ಚಾಗಿದ್ದು ಇದನ್ನು ಕೂಡಲೇ ಕಡಿತಗೊಳಿಸಿ ಕಡಿಮೆ ದರ ನಿಗದಿ ಮಾಡುವಂತೆ ಶ್ರೀ ಕ್ಷೇತ್ರದ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥೋತ್ಸವ ಸೇವೆ ಮತ್ತು ಬೆಳ್ಳಿಯ ರಥೋತ್ಸವ ಸೇವೆಗಳನ್ನು ನೆರವೇರಿಸುವ ಭಕ್ತಾದಿಗಳಲ್ಲಿ ಬಹಪಾಲು ಬಡವರು ಮತ್ತು ಮಧ್ಯಮ ವರ್ಗದವರು. ಅಲ್ಲದೆ ಬೆಳ್ಳಿರಥವನ್ನೂ ಸಹ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ನೀಡಿರುವ ಹಣ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಾಧಿಕಾರದ ಅಧಿಕಾರಿಗಳು ಕ್ರಮವಹಿಸು ವಂತೆ ಪೊನ್ನಾಚಿ ಗ್ರಾಮದ ಸ್ನೇಹಜೀವಿ ರಾಜು ಆಗ್ರಹಿಸಿದ್ದಾರೆ.
ಇನ್ನು ಕೆಲ ಭಕ್ತಾದಿಗಳು ಮತ್ತು ಯುವಕರು ದೇವಸ್ಥಾನದ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕವಾದ ಮೂಲ ಸೌಕರ್ಯಗಳಿಲ್ಲ, ಎಲ್ಲಿ ನೋಡಿದರೂ ಹಣ, ಹಣ, ಹಣ ಕ್ಷೇತ್ರಕ್ಕೆ ಓರ್ವ ಶ್ರೀಮಂತ ಅಥವಾ ರಾಜಕಾರಣಿ ಅಥವಾ ರಾಜಕಾರಣಿಯಿಂದ ಲೆಟರ್ ಪಡೆದವರು ಬಂದರೆ ರಾಜಮ ರ್ಯಾದೆ, ಆದರೆ ಒಬ್ಬ ಬಡವನಿಗೆ ದರ್ಶನ ಕೂಡ ದೊರಕುತ್ತಿಲ್ಲ. ಉಳಿಯಲು ಸಮರ್ಪಕ ವ್ಯವಸ್ಥೆಯಿಲ್ಲ, ಬಿರುಬಿಸಿಲಿನಲ್ಲಿ ಕಾಲು ಸುಡುತ್ತಿದ್ದರೂ ಸಾಲಿನಲ್ಲಿ ಕಾಯಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. -ಭಗತ್ ಸತ್ಯ, ಭಕ್ತ
ಎಷ್ಟು ಹಣ ಬಂದರೂ ಕೂಡ ದರ್ಶನದ ಸಾಲಿನಲ್ಲಿ ಒಂದು ಫ್ಯಾನ್ ಅಳವಡಿಸಿಲ್ಲ, ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ವಯಸ್ಸಾದವರು ಮತ್ತು ಪುಟ್ಟ ಮಕ್ಕಳ ಸ್ಥಿತಿ ಹೇಳ್ಳೋಕೆ ಸಾಧ್ಯವಿಲ್ಲ. –ಚೌಕಿದಾರ್ ಪರಶುರಾಮ್, ಭಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.