ಮಾದಪ್ಪನ ಪ್ರತಿಮೆ ಸ್ಥಳ ಭಣಭಣ: ಕೆಲಸ ಸ್ಥಗಿತ
Team Udayavani, Jul 22, 2023, 3:18 PM IST
ಹನೂರು (ಚಾ.ನಗರ): ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ 108 ಅಡಿ ಎತ್ತರದ ಮಲೆ ಮಹದೇಶ್ವರರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ಜಾಗದಲ್ಲಿ ಇನ್ನಾವುದೇ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯ ಮಾಡದ ಕಾರಣ ಆ ತಾಣ ಭಣಗುಡುತ್ತಿದೆ.
ಮಲೆ ಮಹದೇಶ್ವರ ಬೆಟ್ಟದ ದಕ್ಷಿಣ ದಿಕ್ಕಿನಲ್ಲಿರುವ ದೀಪದ ಒಡ್ಡು ಪ್ರದೇಶ ದಲ್ಲಿ 108 ಅಡಿ ಎತ್ತರದ ಸುಂದರ ಪ್ರತಿಮೆ ನಿರ್ಮಾಣ ಮಾಡುವ ಪರಿಕಲ್ಪನೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅ. ಅಲ್ಲಿ ಆಯುರ್ವೇದ ಚಿಕಿತ್ಸಾಲಯ, ಧ್ಯಾನ ಕೇಂದ್ರ, ಉದ್ಯಾನವನ ನಿರ್ಮಾಣ ಮಾಡಲು 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು ಉತ್ಸುಕತೆಯಿಂದ ಯೋಜನೆಗೆ ಅಗತ್ಯ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಿದರು.
ಬಳಿಕ ಹಲವಾರು ಅಡೆ-ತಡೆಗಳನ್ನು ಮೀರಿ 108 ಅಡಿ ಎತ್ತರದ ಪ್ರತಿಮೆಯು 2023ರ ಮಾ.18ರಂದು ಲೋಕಾರ್ಪಣೆ ಗೊಂಡಿತ್ತು. ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಹಿನ್ನೆಲೆ ಮತ್ತು ತಡೆಗೋಡೆ ಕುಸಿದ ಪರಿಣಾಮ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ ಪರಿಣಾಮ ಸದಾ ಭಕ್ತಾದಿಗಳು ಮತ್ತು ಪ್ರವಾಸಿಗರಿಂದ ತುಂಬಿರಬೇಕಾದ ಸ್ಥಳ ಬಿಕೋ ಎನ್ನುತ್ತಿರುವುದು ಭಕ್ತಾದಿಗಳ ಬೇಸರಕ್ಕೆ ಕಾರಣವಾಗಿದೆ.
ಉದ್ಘಾಟನೆಗೂ ಮುನ್ನವೇ ಅಪಸ್ವರ: ಮಹದೇಶ್ವರರ 108 ಅಡಿ ಪ್ರತಿಮೆ ಲೋಕಾರ್ಪಣೆಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ ನಿಗದಿ ಪಡಿಸಿದಾಗಲೇ ಭಕ್ತಾದಿಗಳಲ್ಲಿ ಮತ್ತು ಸಾಮಾ ಜಿಕ ಜಾಲತಾಣಗಳಲ್ಲಿ ಅಪಸ್ವರ ಕೇಳಿಬಂದಿತ್ತು. ಕಾಮ ಗಾರಿ ಅಪೂರ್ಣಗೊಂಡಿರುವಾಗಲೇ ಚುನಾವಣೆ ಕಾರಣ ಕ್ಕಾಗಿ ಪ್ರತಿಮೆ ಲೋಕಾರ್ಪಣೆ ಮಾಡಲಾ ಗುತ್ತಿದೆ. ಎಲ್ಲ ಕಾಮಗಾರಿಗಳು ಮುಗಿದ ನಂತರ ಉದ್ಘಾಟನೆ ಕೈಗೊಳ್ಳಿ ಎಂದು ಭಕ್ತಾದಿಗಳು ಒತ್ತಾಯಿಸಿದ್ದರು. ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಕಾರಣೀಭೂತರಾದ ಮಾಜಿ ಸಚಿವ ದಿ. ಮಹದೇವಪ್ರಸಾದ್ ಕುಟುಂಬ ದವರನ್ನು ಆಹ್ವಾನಿಸಿಲ್ಲ ಎಂಬ ದೂರುಗಳೂ ಕೇಳಿಬಂದಿದ್ದವು.
ಮ್ಯೂಸಿಯಂ ಕಾಮಗಾರಿ ಇನ್ನೂ ಮುಗಿದಿಲ್ಲ: ಮಹದೇಶ್ವರರು ಹುಲಿಯ ಮೇಲೆ ಕುಳಿತಿರುವ 108 ಅಡಿ ಎತ್ತರದ ಪ್ರತಿಮೆಯಲ್ಲಿ 20 ಅಡಿ ಎತ್ತರದಲ್ಲಿ 2 ಅಂತಸ್ತಿನ ಕಟ್ಟಡವನ್ನು ಬಂಡೆಯಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದ 2 ಅಂತಸ್ತಿ ನಲ್ಲಿ ವಸ್ತು ಸಂಗ್ರಹಾಲಯವನ್ನು ತೆರೆದು ಮಲೆ ಮಹ ದೇಶ್ವರರ ಇತಿಹಾಸವನ್ನು ಸಾರುವಂತಹ ಕಲಾ ಕೃತಿ ಗಳನ್ನು, ಸಂಗತಿಗಳನ್ನು ನಿರ್ಮಾಣ ಮಾಡಲು ಉದ್ದೇಶಿ ಸಲಾಗಿತ್ತು. ಆದರೆ ಈ ಕಾಮಗಾರಿ ಸಂಪೂ ರ್ಣ ವಾಗಿ ನನೆಗುದಿಗೆ ಬಿದ್ದಿದ್ದು ಪ್ರತಿಮೆ ನಿರ್ಮಾಣದ ಸಂಗತಿ ಮತ್ತು ಕಲಾಕೃತಿಗಳ ನಿಮಾಣ ಕಾರ್ಯ ಪ್ರಾರಂಭವಾಗಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಾರೆ ಮಹದೇಶ್ವರರ 108 ಅಡಿ ಎತ್ತರದ ಪ್ರತಿಮೆ ಸ್ಥಳವು ನೀಲನಕ್ಷೆಯಂತೆ ಕಾಮಗಾರಿ ಪೂರ್ಣಗೊಳ್ಳದೇ ಪ್ರತಿಮೆ ನಿರ್ಮಾಣಕ್ಕಷ್ಟೇ ಸೀಮಿತವಾಗಿದೆ.
ಕುಸಿದ ತಡೆಗೋಡೆ, ಪ್ರವೇಶಕ್ಕೆ ನಿರ್ಬಂಧ: ಪ್ರತಿಮೆ ಲೋಕಾರ್ಪಣೆಗೊಂಡು ಭಕ್ತಾದಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆಗೆ ಸುರಿದ ಮಳೆಗೆ ಪ್ರತಿಮೆಯ ಸುತ್ತಲೂ ನಿರ್ಮಿಸಿದ್ದ ಒಂದು ಬದಿಯ ತಡೆಗೋಡೆಯು ಕುಸಿಯಿತು. ಇದರ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಪ್ರತಿಮೆ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಇದಾದ ಬಳಿಕ ಪ್ರತಿಮೆಯ ಸ್ಥಳದ ಸುತ್ತಲೂ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲು ಅಂದಾಜುಪಟ್ಟಿ ತಯಾರಿಸಿ ಸಲ್ಲಿಸಲಾಗಿದ್ದು ಆಡಳಿತಾತ್ಮಕ ಪ್ರಕ್ರಿಯೆಯ ಹಂತದಲ್ಲಿದೆ.
ಪ್ರತಿಮೆ ಸ್ಥಳಕ್ಕಿಲ್ಲ ಮೂಲಸೌಕರ್ಯ: ಮಲೆ ಮಹದೇಶ್ವರರ 108 ಅಡಿ ಪ್ರತಿಮೆ ನಿರ್ಮಾಣ ಮಾಡಿರುವ ಸ್ಥಳಕ್ಕೆ ಮಹದೇಶ್ವರಬೆಟ್ಟ – ಪಾಲಾರ್ ಮುಖ್ಯ ರಸ್ತೆಯಿಂದ 1-1.5 ಕಿ.ಮೀ ದೂರವಿದೆ. ಆದರೆ ಈ ಸ್ಥಳಕ್ಕೆ ತೆರಳಲು ಉತ್ತಮವಾದ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಮುಖ್ಯ ರಸ್ತೆಯಿಂದ ಪ್ರತಿಮೆಯ ಸ್ಥಳದವರೆಗೂ ಕೇವಲ ಗ್ರಾವೆಲ್ ಹಾಕಿ ಸಮತಟ್ಟು ಮಾಡಿ ಕೆಲಸ ಸ್ಥಗಿತಗೊಳಿಸಲಾಗಿದೆ.
ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದರೂ ಅದೂ ಕೂಡ ಅರ್ಧಕ್ಕೆ ನಿಂತಿದೆ. ಇನ್ನೂ ಕೂಡ ವಾಹನಗಳ ಪಾರ್ಕಿಂಗ್‌ಗೆ , ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ.
ರಸ್ತೆ ನಿರ್ಮಾಣ , ಚರಂಡಿ ನಿರ್ಮಾಣ ಸೇರಿದಂತೆ ಎಲ್ಲಾ ಕಾಮ ಗಾರಿಗಳು ಆರಂಭವಾಗಿದ್ದು ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಭಕ್ತಾದಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ● ಗೀತಾ ಹುಡೇದ, ಕಾರ್ಯದರ್ಶಿ, ಮಹದೇಶ್ವರ ಪ್ರಾಧಿಕಾರ
ಪ್ರತಿಮೆ ನಿರ್ಮಾಣವಾದ ಬಳಿಕ 2 ಅಂತಸ್ತನಲ್ಲಿ ಕಲಾಕೃತಿ ಮತ್ತು ಸಂಗತಿಗಳನ್ನು ನಿರ್ಮಾಣ ಮಾಡಲು ಅನುಮತಿ ಅಗತ್ಯವಿತ್ತು. ಯಾವ ಸಂಗತಿಗಳನ್ನು ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡುವಲ್ಲಿ ತಡವಾದ ಪರಿಣಾಮ ಕಾಮಗಾರಿ ನಿಧಾನವಾಗಿತ್ತು. ಇದೀಗ ಎಲ್ಲಾ ಅಂತಿಮವಾಗಿದ್ದು 30 ಜನ ಕಾರ್ಮಿಕರು ತಮ್ಮ ಕೆಲಸ ಆರಂಭಿಸಿದ್ದಾರೆ. ಮುಂದಿನ 60-75 ದಿನಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ● ಮಾಲತೇಶ್ ಪಾಟೀಲ್, ಗುತ್ತಿಗೆದಾರ
-ವಿನೋದ್ ಎನ್ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.