ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿ
Team Udayavani, Jun 6, 2020, 4:52 AM IST
ಯಳಂದೂರು: ಪರಿಸರ ಸಂರಕ್ಷಿಸುವ ಜವಾಬ್ದಾರಿ ಎಲ್ಲರೂ ಅರಿತುಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ಎನ್. ಶರತ್ ಚಂದ್ರ ಹೇಳಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಗಿಡ ನೆಟ್ಟು ಮಾತನಾಡಿ, ಪರಿಸರ ಕಾಳಜಿ ನಮ್ಮ ಅಸ್ಮಿತೆ ಯಾಗಬೇಕು.
ನಮ್ಮ ಮನೆ, ಕಚೇರಿ, ಬೀದಿ ಗಳನ್ನು ಸ್ವತ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರಲ್ಲೂ ಬರಬೇಕು. ಪರಿಸರದಂತೆ ವನ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ವಾಗ ಬೇಕು. ಪ್ರತಿಯೊಬ್ಬರೂ ಗಿಡ ನೆಡ ಬೇಕು. ನೆಡದಿದ್ದರೂ ಅದನ್ನು ನಾಶ ಮಾಡಬಾರದು ಎಂದು ಹೇಳಿದರು. ಈ ವೇಳೆ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ, ತಾಪಂ ಇಒ ರಾಜು, ರಾಜೇಂದ್ರ ಮಹಾದೇವಯ್ಯ, ವಕೀಲರಾದ ಮಹಾದೇವಸ್ವಾಮಿ,
ಮಾದೇಶ್, ಸಿದ್ದರಾಜು, ಶಶಿಧರ್, ಪಪಂ ಮುಖ್ಯಾಧಿಕಾರಿ ನಾಗರತ್ನ, ಆರೋಗ್ಯ ನಿರೀಕ್ಷಕ ಮಹೇಶ್‌ಕುಮಾರ್, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹಾದೇವ ನಾಯಕ, ಮಂಜು ಆರೋಗ್ಯಾಧಿಕಾರಿ ಮಹೇಶ್‌ಕುಮಾರ್, ರಾಜಸ್ವ ನಿರೀಕ್ಷಕ ನಂಜುಂಡಶೆಟ್ಟಿ, ಮಲ್ಲಿಕಾರ್ಜುನ, ರಾಜು, ರಘು, ಬಳೇಪೇಟೆ ಶಾಂತರಾಜು, ಲಿಂಗ ರಾಜು, ನಾಗರಾಜು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.