ಮೂರು ತಿಂಗಳೊಳಗೆ ಹಾಲಿ ಉಳಿದಿರುವ ಕಬ್ಬು ಅರೆಯಿರಿ
Team Udayavani, Sep 26, 2020, 1:47 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಹಾಲಿ ಉಳಿದಿರುವ 5,000 ಎಕರೆ ಒಪ್ಪಂದದ ಕಬ್ಬನ್ನು ಇನ್ನು ಮೂರು ತಿಂಗಳ ಒಳಗಾಗಿ ಅರೆದು ಮುಗಿಸಬೇಕು. ಜಿಲ್ಲೆಯ ರೈತರ ಒಪ್ಪಂದದ ಕಬ್ಬಿಗೆ ಮೊದಲು ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ. ಆರ್. ರವಿ ಅವರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರ ಬೇಡಿಕೆ ಹಾಗೂ ಸಕ್ಕರೆಕಾರ್ಖಾನೆಯವರು ಅನುಸರಿಸಬೇಕಾದ ಕ್ರಮಗಳ ಸಂಬಂಧ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅನುಮತಿ ಕಡ್ಡಾಯ: ಜಿಲ್ಲೆಯ ಕಬ್ಬನ್ನು ಕಟಾವು ಮಾಡದೇ ಹೊರ ಜಿಲ್ಲೆಯ ರೈತರ ಕಬ್ಬನ್ನು ತಂದು ಸಕ್ಕರೆ ಕಾರ್ಖಾನೆಯಲ್ಲಿ ಅರೆಯುತ್ತಿದ್ದಾರೆಂಬ ರೈತ ಮುಖಂಡರ ಆಕ್ಷೇಪಣೆಗೆ ಸ್ಪಂದಿಸಿದಜಿಲ್ಲಾಧಿಕಾರಿ, ನಮ್ಮ ಜಿಲ್ಲೆಯ ರೈತರಿಗೆ ಮೊದಲು ಆದ್ಯತೆ ನೀಡಬೇಕು. ಹೊರ ಜಿಲ್ಲೆಯಿಂದ ಕಬ್ಬು ತರುವುದಿದ್ದರೆ ಜಿಲ್ಲಾಧಿಕಾರಿಗಳ ಲಿಖೀತ ಅನುಮತಿಯನ್ನು ಕಡ್ಡಾಯವಾಗಿ ಪಡೆದು ಕಬ್ಬನ್ನು ತಂದು ಅರೆಯಬೇಕು. ಅಲ್ಲಿಯವರೆಗೆ ಹೊರ ಜಿಲ್ಲೆಯಿಂದ ಬರುತ್ತಿರುವಕಬ್ಬನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಿಗೆ ಸೂಚಿಸಿದರು.
ಒಪ್ಪಂದ ಮತ್ತು ಒಪ್ಪಂದವಿಲ್ಲದ ಎಷ್ಟು ಟನ್ ಕಬ್ಬನ್ನು ಕಾರ್ಖಾನೆಯಲ್ಲಿ ಅರೆಯಲಾಗಿದೆ ಎಂಬ ಬಗ್ಗೆ ವರದಿ ನೀಡ ಬೇಕೆಂದು ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂದಿನ 12 ತಿಂಗಳು ತುಂಬಿ ನಂತರ ಕಟಾವು ಮಾಡುವ ಕಬ್ಬಿಗೆ ನಷ್ಟ ಪರಿಹಾರವನ್ನು ಕಾರ್ಖಾನೆಯವರು ರೈತರಿಗೆ ಭರಿಸಬೇಕು. ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಯವರು ಚರ್ಚಿಸಿ ಒಂದು ವಾರದೊಳಗಾಗಿ ಮಾಹಿತಿ ನೀಡಬೇಕು. ಮಾರ್ಗಸೂಚಿ ಅನುಸಾರ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಮಾತ್ರ ಕಾರ್ಖಾನೆಯವರು ರೈತರಿಂದ ಪಡೆಯಬೇಕೆ ಹೊರತು ಹೆಚ್ಚಿನ ದರವನ್ನು ಪಡೆಯಬಾರದೆಂದು ಸೂಚಿಸಿದರು.
ಕಬ್ಬಿನ ಇಳುವರಿಯ ಲಾಭಾಂಶವನ್ನು ಸರ್ಕಾರವು ಘೋಷಣೆ ಮಾಡಿದಕೂಡಲೇ ಆಯಾಯ ವರ್ಷವೇ ರೈತರಿಗೆನೀಡಬೇಕು. ರೈತರು ಮತ್ತು ಕಾರ್ಖಾನೆಯ ದ್ವಿಪಕ್ಷೀಯ ಒಪ್ಪಂದದ ಬಗ್ಗೆ ಆಡಳಿತ ಮಂಡಳಿಯವರಿಂದ ಅನುಮತಿ ಪಡೆದು ಒಂದು ವಾರದೊಳಗೆ ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು.
ಮಾಹಿತಿ: ವೇಬ್ರಿಡ್ಜ್ ಅನ್ನುಕಾರ್ಖಾನೆಯ ಗೇಟಿನ ಮುಂಭಾಗ ಅಳವಡಿಸಿ ಕಬ್ಬು ತೂಕವಾದ ತಕ್ಷಣ ಎಸ್‌ಎಂಎಸ್ ಮೂಲಕ ರೈತರಿಗೆ ಮಾಹಿತಿ ನೀಡಬೇಕು. ಸೂಚನೆ ಪಾಲಿಸದಿದ್ದಲ್ಲಿ ಜಿಲ್ಲಾಡಳಿತ ವತಿಯಿಂದಲೇ ವೇಬ್ರಿಡ್ಜ್ ಅಳವಡಿಸಲು ಕ್ರಮವಹಿಸಲಾಗುತ್ತದೆ. ಈ ಬಗ್ಗೆ ಕೂಡಲೇ ಮಾಹಿತಿ ಒದಗಿಸಬೇಕು ಎಂದರು.
ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಆಹಾರ ಇಲಾಖೆ ಉಪನಿರ್ದೇಶಕ ಸಿ.ಎನ್. ರುದ್ರಸ್ವಾಮಿ, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಶರವಣ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ ಎಚ್. ಮೂಕಳ್ಳಿ, ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್ ಪ್ರಭು, ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ, ಪಟೇಲ್ ಶಿವಮೂರ್ತಿ, ಅಣಗಳ್ಳಿ ಬಸವರಾಜು, ನಂಜುಂಡ ಸ್ವಾಮಿ, ನಾಗರಾಜು, ಬಿ.ಶಾಂತಮಲ್ಲು, ರೈತ ಸಂಘದ ಇತರ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.