ಬಿಸಿಲ ಬೇಗೆ: ಮರದಡಿಯಲ್ಲೇ ಪ್ರಚಾರ
Team Udayavani, Apr 11, 2019, 3:00 AM IST
ಸಂತೆಮರಹಳ್ಳಿ: ಲೋಕಸಭಾ ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿ ಇದೆ. ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿದೆ. ಏಪ್ರಿಲ್ ತಿಂಗಳಾಗಿರುವುದರಿಂದ ಬಿಸಿಲಿನ ತಾಪಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುವ ರಾಜಕೀಯ ಪಕ್ಷಗಳ ಮುಖಂಡರು ಹೈರಾಣಾಗುತ್ತಿದ್ದಾರೆ.
ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯೆಸ್ ನಷ್ಟು ಬಿಸಿಲು ದಾಖಲಾಗಿದೆ. ಇದರ ನಡುವೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಗ್ರಾಮೀಣ ಭಾಗದಲ್ಲಿರುವ ದೊಡ್ಡ ದೊಡ್ಡ ಮರಗಳು, ಅರಳಿ ಮರದ ಅಶ್ವಥ§ ಕಟ್ಟೆಗಳನ್ನು ತಮ್ಮ ಚುನಾವಣಾ ಪ್ರಚಾರದ ತಾಣಗಳಾಗಿ ಮಾರ್ಪಡಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಮರಗಳ ನೆರಳೆ ಈಗ ಅಭ್ಯರ್ಥಿಗಳ, ಕಾರ್ಯಕರ್ತರ ನೆಚ್ಚಿನ ತಾಣಗಳಾಗಿ ಮಾರ್ಪಟ್ಟಿರುವ ದೃಶ್ಯ ಎಲ್ಲೆಡೆ ಕಾಣ ಸಿಗುತ್ತಿದೆ.
ಯಳಂದೂರು ತಾಲೂಕು, ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತ ಪ್ರಚಾರ ಮಾಡುವ ಅಭ್ಯರ್ಥಿಗಳು ತಮ್ಮ ವಾಹನವನ್ನು ಬಿಸಿಲಿನಲ್ಲೇ ನಿಲ್ಲಿಸಿ ಗಾವ್ರಿುàಣ ಭಾಗದಲ್ಲಿರುವ ಅರಳಿ, ಆಲ, ಗಸಗಸೆ ಮರಗಳಂತಹ ಬೃಹದಾಕಾರದ ನೆರಳಿನಲ್ಲಿ ನಿಂತು ತಮ್ಮ ಚುನಾವಣಾ ಪ್ರಚಾರದ ಭಾಷಣವನ್ನು ಮಾಡುತ್ತಿದ್ದಾರೆ.
ಅನುಮತಿ ಕಡ್ಡಾಯ: ಲೋಕಸಭಾ ಕ್ಷೇತ್ರದ ವ್ಯಾಪ್ತಿ ಹಿರಿದಾಗಿರುತ್ತದೆ. ಪ್ರತಿ ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಗ್ರಾಮೀಣ ಪ್ರದೇಶಗಳಲ್ಲಿ ಶಾಮಿಯಾನಗಳನ್ನು ಹಾಕಿ ಪ್ರಚಾರ ಸಭೆ ಮಾಡಲು ಸಮಯದ ಅಭಾವವಿದೆ. ಇದರೊಂದಿಗೆ ಅನುಮತಿಯೂ ಕಡ್ಡಾಯವಾಗಿದೆ.
ಅಭ್ಯರ್ಥಿ ಹೊರತುಪಡಿಸಿ ಹಾಲಿ, ಮಾಜಿ ಸಚಿವರು, ಶಾಸಕರು ಪ್ರಚಾರ ಸಭೆಗಳನ್ನು ಮಾಡಲು ಅಸಾಧ್ಯ. ಇದರೊಂದಿಗೆ ಚುನಾವಣಾ ಆಯೋಗದ ಅನುಮತಿಯೂ ಕಡ್ಡಾಯವಾಗಿದೆ. ಈ ಗೋಜಿಗಿಂತ ಪ್ರತಿ ಗ್ರಾಪಂನ ಕೇಂದ್ರ ಸ್ಥಾನಗಳಲ್ಲಿ ಪ್ರಚಾರವನ್ನು ಮರದ ನೆರಳಿನಲ್ಲೇ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್‌ಪಿ ಪಕ್ಷದ ಅಭ್ಯರ್ಥಿಗಳು ಮಾಡಲು ಮುಂದಾಗಿದ್ದಾರೆ.
ರೋಡ್ ಶೋಗೂ ಬಿಸಿಲ ಭಯ: ಕೆಲವೆಡೆ ರೋಡ್ ಶೋ ಮೂಲಕ ಪ್ರಚಾರವನ್ನು ಮಾಡುವ ಮಂದಿ ಬಿಸಿಲಿನ ಝಳಕ್ಕೆ ಬೆದರಿದ್ದಾರೆ. ತಮ್ಮ ರೋಡ್ ಶೋನ ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸಲು ಎಡತಾಕುವ ಸಂದರ್ಭಗಳು ಸೃಷ್ಟಿಯಾಗಿವೆ. ಆದರೆ ರಸ್ತೆ ಬದಿಯಲ್ಲಿ ಮರಗಳ ಸಂಖ್ಯೆ ಕಡಿಮೆ ಇರುವುದರಿಂದ ತಮ್ಮ ಭಾಷಣದ ಅವಧಿಯನ್ನು ಕಿರಿದು ಮಾಡಿ ಆದಷ್ಟು ಬೇಗ ಮುಂದಕ್ಕೆ ಹೋಗುವ ಸಂದರ್ಭಗಳನ್ನು ಸೃಷ್ಟಿಸಿಕೊಂಡಿದ್ದಾರೆ. ರಾಜಕಾರಣಿಗಳು.
ಕುಡಿಯುವ ನೀರು, ಎಳೆನೀರು, ಪಾನೀಯಕ್ಕೆ ಬೇಡಿಕೆ: ಬಿಸಿಲ ಬೇಗೆ ಹೆಚ್ಚಾಗಿರುವುರಿಂದ ಅಭ್ಯರ್ಥಿಗಳು, ಕಾರ್ಯಕರ್ತರು ದಣಿವಾರಿಸಿಕೊಳ್ಳಲು ಬಾಟಲಿ ನೀರನ್ನು ತಮ್ಮ ವಾಹನಗಳ ಜೊತೆಯಲ್ಲೇ ಕೊಂಡೊಯ್ಯುತ್ತಿದ್ದಾರೆ. ಇದೂ ಕೂಡ ಸಾಲದೆ ಸ್ಥಳದಲ್ಲೇ ಸಿಗುವ ತೊಂಬೆ ನಲ್ಲಿಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆ ಇಲ್ಲ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ದೊರೆಯುವ ಎಳೆನೀರು, ತಂಪು ಪಾನೀಯಗಳ ವ್ಯಾಪಾರಿಗಳಿಗೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ. ಮನೆಮನೆ ಪ್ರಚಾರದ ಸಂದರ್ಭಗಳಲ್ಲಿ ಪಾನೀಯಗಳ ಮಾರಾಟ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ವ್ಯಾಪಾರಿ ಮಹಾದೇವಸ್ವಾಮಿ ಹಾಗೂ ಮಧುಸೂಧನ್.
ಪಕ್ಷ ನಿಷ್ಠೆ ಬಿಡುವಂತಿಲ್ಲ: ಬಿಸಿಲಿಗೆ ಬಂದರೆ ಧರಿಸಿರುವ ಬಟ್ಟೆ ಬೆವರಿನಿಂದ ಒದ್ದೆಯಾಗುತ್ತಿರುವಾಗ ಬಹಿರಂಗ ಪ್ರಚಾರ ಮಾಡುವುದಾದರೂ ಹೇಗೆ? ಜನರ ಮನೆ ಮನೆ ಬಾಗಿಲು ತಟ್ಟುವುದು ತಟ್ಟುವುದು ಹೇಗೆ? ಆದರೂ ಪಕ್ಷ ನಿಷ್ಠೆ ಬಿಡುವಂತಿಲ್ಲ ಏನು ಮಾಡೋಣ?
ಮತದಾನಕ್ಕೆ ಕೇವಲ ಎಂಟು ದಿವಸ ಬಾಕಿ ಇರುವಾಗ ಪ್ರತಿ ಹಳ್ಳಿ ತಲುಪಲು ಪಕ್ಷಗಳು ಪ್ರಚಾರ ಮಾಡಬೇಕಿದೆ. ಆದರೆ ಸೂರ್ಯ ನೆತ್ತಿ ಮೇಲೆ ಬರುತ್ತಿದಂತೆ ಬಿಸಿಲ ಝಳ ಹೆಚ್ಚುತ್ತಿದ್ದು ಅಬ್ಬರದ ಪ್ರಚಾರಕ್ಕೆ ಕಾರ್ಯಕರ್ತರು ರಸ್ತೆಗೆ ಇಳಿಯದಂತಾಗಿದೆ. ಆದರೂ ಕಾರ್ಯಕರ್ತರು ಹಳ್ಳಿಗಳಲ್ಲಿರುವ ಮರಗಳ ಆಶ್ರಯ ಪಡೆಯುತ್ತಿದ್ದಾರೆ.
ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಮರಗಳ ಆಶ್ರಯದಲ್ಲೇ ಹೆಚ್ಚಿನ ಕಾಲ ಕಳೆಯುತ್ತಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಈಗಲಾದರೂ “ವೃಕ್ಷೊà, ರಕ್ಷಿತಿ ರಕ್ಷಿತಃ’ ಎಂಬಂತೆ ಮರಗಳನ್ನು ಬೆಳೆಸುವ, ತಮ್ಮ ಅಧಿಕಾರದ ಅವಧಿಯಲ್ಲಿ ಪರಿಸರ ಕಾಳಜಿ ವಹಿಸಿ ಇದರ ರಕ್ಷಣೆಗೆ ಬೇಕಾದ ಕಾನೂನುಗಳನ್ನು ರೂಪಿಸಲು ಪರಿಸರ ಕಲಿಸಿಕೊಡುತ್ತಿರುವ ಪಾಠವನ್ನು ಮರೆಯದಿರಲಿ.
-ಮನು, ಪರಿಸರ ಪ್ರೇಮಿ
* ಫೈರೋಜ್‌ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.