ಪಟ್ಟಣದ ಅಭಿವೃದ್ಧಿಗೆ ಸದಸ್ಯರೇ ಸಹಕರಿಸಿ
Team Udayavani, Dec 7, 2020, 7:54 PM IST
ಯಳಂದೂರು: ಪಟ್ಟಣದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಸದಸ್ಯರೂ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿಯಲ್ಲಿ ನಡೆದ ನೂತನ ಸದಸ್ಯರ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಚಿಕ್ಕದಾಗಿದೆ. ಇಲ್ಲಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಇದನ್ನು ಮಾದರಿ ಮಾಡಲು ಎಲ್ಲರೂ ಸಹಕರಿಸಬೇಕು. ಎಸ್ ಎಫ್ಸಿಯಲ್ಲಿ 14.80 ಲಕ್ಷ ರೂ. ಇದೆ. ಇದೇ ಅನುದಾನದ ಕುಡಿಯುವ ನೀರಿನ ಯೋಜನೆಗಳಿಗೆ11.17 ಲಕ್ಷ ರೂ. ಇದೆ. ಇದರ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸಲು ಸದಸ್ಯರು ಸಹಕರಿಸಬೇಕು ಎಂದರು.
5ನೇ ವಾರ್ಡ್ ಹಾಗೂ 6ನೇ ವಾರ್ಡ್‌ನ ಶುದ್ಧಕುಡಿಯುವ ನೀರಿನಘಟಕಕ್ಕೆ ತಲಾ8.32 ಲಕ್ಷ ರೂ., ಶೂನ್ಯ ತ್ಯಾಜ್ಯಘಟಕ ನಿರ್ಮಾಣಕ್ಕೆ4 ಲಕ್ಷ ರೂ., ತರಕಾರ ಮಾರುಕಟ್ಟೆಯ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 7.40 ಲಕ್ಷ ರೂ., ಸಿಸಿ ಚರಂಡಿ ನಿರ್ಮಾಣಕ್ಕೆ7.40 ಲಕ್ಷ ರೂ., ಸರ್ವಜನಾಂಗದ ಸ್ಮಶಾನದ ರಸ್ತೆ ಅಭಿವೃದ್ಧಿಗೆ 7.40 ಲಕ್ಷ ರೂ., ಇಲ್ಲೇ ಶೆಡ್ ನಿರ್ಮಾಣಕ್ಕೆ 7.40 ಲಕ್ಷ ರೂ., ಪಪಂ ಬಳಿ ಇರುವ ಪಾರ್ಕ್ ಅಭಿವೃದ್ಧಿಗೆ 7.40 ಲಕ್ಷ ರೂ., ಮೂಡಲ ಅಗ್ರಹಾರ ಗ್ರಾಮದ ಬಳಿ ಸರ್ವೇ ನಂ.89 ರ ಸ್ಥಳದಲ್ಲಿರುವ ಘನತ್ಯಾಜ್ಯ ಘಟಕದ ಸುತ್ತುಗೋಡೆ ನಿರ್ಮಾಣಕ್ಕೆ 14.50 ಲಕ್ಷ ರೂ. ಅನುದಾನದ ಬಳಕೆಗೆ ಸದಸ್ಯರೂ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಪಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹಾದೇವನಾಯಕ, ಸವಿತಾ, ಕೆ.ಮಲ್ಲಯ್ಯ, ಮಂಜು, ಪ್ರಭಾವತಿ, ರವಿ, ಸುಶೀಲಾ, ಜೆಇ ನಾಗೇಂದ್ರ, ಸಮನ್ವಯಅಧಿಕಾರಿ ನಂಜುಂಡಯ್ಯ, ಲಕ್ಷ್ಮೀ, ರೇಖಾ, ಮಲ್ಲಿಕಾರ್ಜುನ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.