ಜನಗಣತಿಯ ಪೂರ್ವ ಸಮೀಕ್ಷೆಗೆ ಸಹಕರಿಸಿ
Team Udayavani, Sep 9, 2019, 3:00 AM IST
ಚಾಮರಾಜನಗರ: ಸಾರ್ವಜನಿಕರು ಜನಗಣತಿಯ ಮಹತ್ವವನ್ನು ಅರಿತುಕೊಂಡು ಜಿಲ್ಲೆಯಲ್ಲಿ ಕೈಗೊಂಡಿರುವ ಪೂರ್ವ ಸಮೀಕ್ಷಾ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಹಕರಿಸಿ, ಇದನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಮನವಿ ಮಾಡಿದರು.
ನಗರದ ಜಿಲ್ಲಾಡಳಿತದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ನಡೆದ 2021ನೇ ಸಾಲಿನ ಜನಗಣತಿಯ ಪೂರ್ವ ಸಮೀಕ್ಷಾ ಉದ್ಘಾಟನೆ ಹಾಗೂ ಗಣತಿದಾರರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆ- ಮನೆಗೂ ಭೇಟಿ: ಪೂರ್ವ ಸಮೀಕ್ಷೆಯ ಭಾಗವಾಗಿ ಈಗಾಗಲೇ ಗಣತಿದಾರರು ಕಟ್ಟಡಗಳ ಎಣಿಕೆ ಕಾರ್ಯವನ್ನು ಪೂರೈಸಿದ್ದಾರೆ. ಅದರ ಮುಂದಿನ ಹಂತವಾಗಿ ಇದೇ ತಿಂಗಳಿನಿಂದ ಜನಗಣತಿ ಕಾರ್ಯವೂ ನಡೆಯಲಿದ್ದು, ಅದರಂತೆ ಮನೆ- ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ: ಜನಗಣತಿ ನಿರ್ದೇಶನಾಲಯದ ಉಪ- ನಿರ್ದೇಶಕ ಎಸ್.ಚಿನ್ನದುರೈ ಮಾತನಾಡಿ, ಪ್ರಸ್ತುತ ಕೈಗೊಂಡಿರುವ ಪೂರ್ವ ಸಮೀಕ್ಷೆ, 2021ರಲ್ಲಿ ನಡೆಸುವ ಜನಗಣತಿಗೆ ಒಂದು ಪೂರ್ವ ಸಿದ್ಧತೆ ಮಾತ್ರ ಆಗಿರುತ್ತದೆ. ಈ ಹಂತದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜನಗಣತಿಯ ಸಮಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿ ಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.
ಮೊಬೈಲ್ ಆ್ಯಪ್ ಮುಖಾಂತರ ಎಣಿಕೆ: ಜನಗಣತಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮುಖಾಂತರ ಎಣಿಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೆ ಜನಗಣತಿಯಲ್ಲಿ ಸಾರ್ವಜನಿಕರ ಮಾಹಿತಿಯನ್ನು ಬರೆದುಕೊಳ್ಳಬೇಕಿತ್ತು. ಆದರೆ ಈ ಬಾರಿಯಿಂದ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಣೆ ನಡೆಯಲಿದ್ದು, ಇದು ಎಣಿಕೆ ಕಾರ್ಯವನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂದು ಮಾಹಿತಿ ನೀಡಿದರು.
ಅಗತ್ಯ ಮಾಹಿತಿ ಸಂಗ್ರಹ: ಜನಗಣತಿಯ ಈ ಪೂರ್ವ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಮರಾಜಗರ ಜಿಲ್ಲೆಯ ಉಮ್ಮತ್ತೂರು, ನಾಗವಳ್ಳಿ, ಸರಗೂರು, ಕೊತ್ತಲವಾಡಿ ಮತ್ತು ಹೆಬ್ಬಸೂರು ಗ್ರಾಮಗಳು ಆಯ್ಕೆಯಾಗಿವೆ. ಇದೇ ತಿಂಗಳ 10ರಿಂದ 29ರವರೆಗೆ ಸಮೀಕ್ಷೆ ನಡೆಯಲಿದ್ದು, ಗಣತಿದಾರರು ಪ್ರತಿಯೊಬ್ಬರ ಹೆಸರು, ಹುಟ್ಟಿದ ದಿನಾಂಕ, ವಯಸ್ಸು, ಶಿಕ್ಷಣ, ಆರ್ಥಿಕ ಸ್ಥಿತಿಗತಿ ಮುಂತಾದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ ಎಂದು ಚಿನ್ನದುರೈ ತಿಳಿಸಿದರು. ತಹಶೀಲ್ದಾರ್ ನಂಜುಂಡಯ್ಯ, ಹಿರಿಯ ಅಧಿಕಾರಿ ರವಿಕುಮಾರ್ ಶರ್ಮ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.