ಯಳಂದೂರು: ಶಿಕ್ಷಕರ ಸಂಘಕ್ಕೆ ಐವರು ಆಯ್ಕೆ
Team Udayavani, Dec 16, 2020, 3:41 PM IST
ಯಳಂದೂರು: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಂಗಳವಾರ ಪಟ್ಟಣದ ಟೌನ್ ಶಾಲೆಯಲ್ಲಿ ಚುನಾವಣೆ ನಡೆಯಿತು. ಒಟ್ಟು ಐದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರ ಆಯ್ಕೆಗೆ ಅವಕಾಶವಿತ್ತು. ಇದ ರಲ್ಲಿ ಪುರುಷ ಸ್ಥಾನಕ್ಕೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಹಿಳಾ ವಿಭಾಗದಲ್ಲಿ ನಾಲ್ವರುಕಣದಲ್ಲಿದ್ದರು. ಒಟ್ಟು226 ಶಿಕ್ಷಕ ಮತದಾರರು ಇರುವ ಕ್ಷೇತ್ರದಲ್ಲಿ 221 ಮಂದಿ ಮತದಾನ ಮಾಡಿದರು.
ಪುರುಷರ ವಿಭಾಗದಲ್ಲಿ ಕೆ.ಎಲ್. ದೊರೆ ಸ್ವಾಮಿ, ವೈ.ವಿ. ನಾಗರಾಜು, ಎಸ್. ನಂಜುಂಡಸ್ವಾಮಿ, ಎಂ. ರಾಜು, ಆರ್. ಸತೀಶ್, ಪಿ.ಸೋಮಣ್ಣ ಸ್ಪರ್ಧಿಸಿದ್ದರು. ಇದರಲ್ಲಿ ಪಿ.ಸೋಮಣ್ಣ 141 ಮತ, ಆರ್. ಸತೀಶ್ 126 ಮತ, ವೈ.ವಿ. ನಾಗರಾಜು 125 ಮತಗಳನ್ನುಪಡೆದು ವಿಜೇತರಾದರು. ಮಹಿಳಾ ವಿಭಾಗದಲ್ಲಿ ಸಿ.ಚಂದ್ರಮ್ಮ, ಎಸ್.ಎಸ್. ಪುಷ್ಪಲತಾ, ಕೆ.ಪುಟ್ಟಿ, ಎಂ. ಸಲೀನಾ ಸ್ಪರ್ಧಿಸಿದ್ದರು. ಇದರಲ್ಲಿ ಸಿ.ಚಂದ್ರಮ್ಮ147 ಮತ ಹಾಗೂ ಎಂ. ಸಲೀನಾ101 ಮತಗಳನ್ನು ಪಡೆದು ವಿಜೇತರಾದರು ಎಂದು ಚುನಾವಣಾಧಿಕಾರಿ ರಂಗಸ್ವಾಮಿ ಘೋಷಿಸಿದರು.
ವಿಜೇತ ಅಭ್ಯರ್ಥಿಗಳನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಕಾರ್ಯದರ್ಶಿ ಮಹೇಶ್,ಜಿಲ್ಲಾ ಕಾರ್ಯ ದರ್ಶಿ ರೇಚಣ್ಣ ಸೇರಿದಂತೆ ಹಲವರು ಅಭಿ ನಂದನೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.