ರೋಹಿಣಿ ವರ್ಗಾವಣೆ ಆಗುತ್ತಿದ್ದಂತೆ ಆಡಿಯೋಗಳು ವೈರಲ್
Team Udayavani, Jun 7, 2021, 6:31 PM IST
ಚಾಮರಾಜನಗರ: ಮೈಸೂರು ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ ಅವರು ವರ್ಗಾವಣೆಆಗುತ್ತಿದ್ದಂತೆಯೇ, “ಚಾಮರಾಜನಗರಕ್ಕೆಹೆಚ್ಚಿನ ಆಕ್ಸಿಜನ್ ಏಕೆ ಕಳುಹಿಸುತ್ತಿದ್ದೀರಿ?.ಯಾವ ಯಾವ ಆಸ್ಪತ್ರೆಗೆ ಎಷ್ಟು ಎಷ್ಟು ಆಕ್ಸಿಜನ್‌ಅಗತ್ಯವಿದೆ ಎಂಬುದರ ಮಾಹಿತಿ ನೀಡಿ ಎಂದು ಅವರು ಔಷಧ ನಿಯಂತ್ರಕರೊಂದಿಗೆ ಮಾತನಾಡಿದ ಹಾಗೂ ಆಕ್ಸಿಜನ್ ಭರ್ತಿಮಾಡುವ ಘಟಕದ ಸಿಬ್ಬಂದಿ, ಔಷಧನಿಯಂತ್ರಕರೊಂದಿಗೆ ಮಾತನಾಡಿದಆಡಿಯೋಗಳನ್ನು ವ್ಯಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಹರಿ ಬಿಡಲಾಗಿದೆ.
ಈ ಆಡಿಯೋಗಳನ್ನು ವೈರಲ್ ಮಾಡಲುಇದರಲ್ಲಿ ಯಾರ್ಯಾರು ಮಾತನಾಡಿದ್ದಾರೆ?ಯಾವ ದಿನದಂದು ಮಾತನಾಡಿದ್ದಾರೆಎಂಬುದನ್ನೂ ವಿವರಿಸಿ ಆಡಿಯೋ ರೆಕಾರ್ಡ್‌ಹಾಕಲಾಗಿದೆ. ಚಾಮರಾಜನಗರದಲ್ಲಿಆಮ್ಲಜನಕ ದುರಂತ ನಡೆಯುವ ಹಿಂದಿನದಿನ ಮೇ 1 ರಂದು ಒಂದು ಧ್ವನಿಮುದ್ರಿಕೆ ಇದ್ದರೆ, ಇನ್ನೂ ಒಂದೆರಡು ಏಪ್ರಿಲ್ ಅಂತ್ಯದಲ್ಲಿ ಮಾತನಾಡಿದ್ದಾರೆ.
ಈ ಧ್ವನಿಮುದ್ರಿತ ಮಾತುಕತೆಗಳ ಸಾರಾಂಶ ಗಮನಿಸಿದಾಗ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಬಹಳ ಮುಂಚೆಯೇಎರಡೂ ಜಿಲ್ಲೆಯ ಅಧಿಕಾರಿಗಳಿಗೆ ತಿಳಿದಿತ್ತುಎಂಬುದು ಖಚಿತವಾಗುತ್ತದೆ.ಚಾಮರಾಜನಗರಕ್ಕೆ ಆಮ್ಲಜನಕ ಸಿಲಿಂಡರ್‌ನೀಡಬೇಕಾದರೆ, ಮೈಸೂರು ಜಿಲ್ಲಾಧಿಕಾರಿ ಅವರ ಅನುಮತಿ ಬೇಕು ಎಂದು ಆಕ್ಸಿಜನ್‌ಘಟಕದ ಸಿಬ್ಬಂದಿ ಹೇಳುತ್ತಿರುವುದುಧ್ವನಿಮುದ್ರಿಕೆಯಲ್ಲಿವೆ.ಏ.29ರಂದು ನಡೆದ ಸಂಭಾಷಣೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿಸಿಂಧೂರಿ ಹಾಗೂ ಅಲ್ಲಿನ ಉಪ ಔಷಧನಿಯಂತ್ರಕ ಅರುಣ್ ಕುಮಾರ್ ಅವರನಡುವೆ ನಡೆದಿದೆ ಎಂದು ಆಡಿಯೋಧ್ವನಿಮುದ್ರಿಕೆಯ ಜತೆಯಲ್ಲಿ ಹರಿಯಬಿಡಲಾದ ಮಾಹಿತಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.