ಐತಿಹಾಸಿಕ ಕಾರಪುರ ವಿರಕ್ತಮಠ ಉತ್ತರಾಧಿಕಾರಿ ಆಯ್ಕೆ ಸರಿಯಲ್ಲ
Team Udayavani, May 10, 2021, 6:12 PM IST
ಯಳಂದೂರು: ಸಾವಿರಾರು ವರ್ಷಗಳಐತಿಹ್ಯ ಇರುವ ಪಟ್ಟಣದ ಕಾರಾಪುರವಿರಕ್ತಮಠದ ಉತ್ತರಾಧಿಕಾರಿಯನ್ನುಹಾಲಿ ಮಠಾಧೀಶರಾದ ಬಸವರಾಜಸ್ವಾಮೀಜಿ ಆಯ್ಕೆ ಮಾಡಿರುವ ಕ್ರಮಸರಿ ಇಲ್ಲ ಎಂದು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಣೆಯಲ್ಲಿ ಹೇಳಿಕೆನೀಡಿರುವ ಭಕ್ತರು, ಕೆಲ ದಿನಗಳ ಹಿಂದೆಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಸಾಗರ್ ಎಂಬ ವಿದ್ಯಾರ್ಥಿಯನ್ನುನೇಮಕ ಮಾಡಲಾಗಿದೆ ಎಂದು ಮಠದಸ್ವಾಮೀಜಿ ಮಾಹಿತಿ ನೀಡಿದ್ದರು.
ಆದರೆ,ಈ ಮಠದ ಪರಂಪರೆಯಲ್ಲಿ ತಾಲೂಕಿನಪ್ರಮುಖ ಗ್ರಾಮಗಳ ಮುಖಂಡರಮಾಹಿತಿ ಹಾಗೂ ಈ ಹಿಂದಿನ ಸಂಪ್ರದಾಯಗಳನ್ನು ಮುರಿಯಲಾಗಿದೆ.ಇದು ಸಿಂಧುವಲ್ಲ. ಇದು ಕೇವಲ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅಭಿಪ್ರಾಯವಾಗಿದೆ.
ಇದು ಗುಟ್ಟಾಗಿ ಮಾಡಿಕೊಂಡಿರುವ ತೀರ್ಮಾನವಾಗಿದೆಯೇಹೊರತು ಅಂತಿಮ ಆಯ್ಕೆಯಲ್ಲ. ಇದುಮಠದ ಪರಂಪರೆಗೆ ವಿರುದ್ಧವಾಗಿದೆಎಂದು ತಿಳಿಸಿದ್ದಾರೆ.ಮಠದ ಉತ್ತರಾಧಿಕಾರಿ ಆಯ್ಕೆಯವಿಚಾರದಲ್ಲಿ ಸಮಾಜದ ಮುಖಂಡರು,ಸುತ್ತಮುತ್ತಲಿನ ಗ್ರಾಮಗಳ ಮುಖಂಡರ ಸಮ್ಮತಿಯೊಂದಿಗೆ ತೀರ್ಮಾನವಾಗಬೇಕು.
ಇದು ಅನಾದಿ ಕಾಲದಿಂದಲೂನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಇದರ ಲಾಭ ಪಡೆದುಕೊಳ್ಳಲು ಸ್ವಾಮೀಜಿ ತೀರ್ಮಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಠದವರ್ಚಸ್ಸಿಗೆ ಧಕ್ಕೆಯಾದರೆ ಹಾಲಿ ಇರುವಶ್ರೀಗಳೇ ನೇರ ಹೊಣೆಗಾರರಾಗುತ್ತಾರೆ.ಉತ್ತರಾಧಿಕಾರಿ ವಿಚಾರವಾಗಿಮುಂದಿನ ದಿನಗಳಲ್ಲಿ ಸಭೆ ನಡೆಸಿತೀರ್ಮಾನ ಕೈಗೊಳ್ಳಲಾಗುವುದುಎಂದು ಹಳೆ ಮಠದ ಪುಟ್ಟಣ್ಣ ಸೇರಿದಂತೆಸಮಾಜ ಸೇವಕ ದುಗ್ಗಹಟ್ಟಿ ಪಿ.ವೀರಭದ್ರಪ್ಪ, ಮಲ್ಲೇಶ್, ನಟರಾಜು,ಆಕಾಶ್, ಮಹದೇವಪ್ಪ, ನಾಗರಾಜು,ಮಲ್ಲೇದೇವರು, ನಾಗಣ್ಣ, ಪುಟ್ಟಸ್ವಾಮಿ,ಅಂಬಳೆ, ಕಂದಹಳ್ಳಿ, ಕೆಸ್ತೂರು,ಬೂದಿತಿಟ್ಟು ಮೆಳ್ಳಹಳ್ಳಿ, ದುಗ್ಗಹಟ್ಟಿ,ಗುಂಬಳ್ಳಿ ಸೇರಿದಂತೆ ಹಲವು ಗ್ರಾಮಗಳಮುಖಂಡರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.