101 ಅಡಿ ಎತ್ತರದ ಮಾದಪ್ಪ ಪ್ರತಿಮೆಗೆ ಶಂಕು


Team Udayavani, Feb 25, 2019, 7:30 AM IST

101madappa.jpg

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ 101 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಮಲೆ ಮಹದೇಶ್ವರ ದೇಗುಲ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 20 ಕೋಟಿ ವೆಚ್ಚದಲ್ಲಿ 101 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿಯೇ 2016ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು.

ಆದರೆ, ಕಾಮಗಾರಿಗೆ ಅವಶ್ಯಕವಾಗಿದ್ದ ಜಮೀನಿನ ಪೈಕಿ ಒಂದು ಎಕರೆ ಜಮೀನು ಖಾಸಗಿ ರೈತನಿಗೆ ಸೇರಿದ್ದರಿಂದ ಅವರಿಂದ ಖರೀದಿ ಪ್ರಕ್ರಿಯೆ ನಡೆಸಲು ವಿಳಂಬವಾಗಿತ್ತು. ಇದೀಗ ರೈತರಿಂದ ಜಮೀನನ್ನು ನೇರ ಖರೀದಿ ಮೂಲಕ ಖರೀದಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವಾಸಿಗರ ಆಕರ್ಷಣೆ: ದೀಪದಗಿರಿ ಒಡ್ಡುವಿನಲ್ಲಿ 101 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣದ ಜೊತೆಗೆ ಸುತ್ತಲಿನ 20 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಈ ಪ್ರದೇಶದಲ್ಲಿ ಧ್ಯಾನಮಂದಿರ, ಪ್ರಕೃತಿ ಚಿಕಿತ್ಸಾ ಕೇಂದ್ರ, ಆಯುರ್ವೇದ ಔಷಧಾಲಯ ಮತ್ತು ಆಯುರ್ವೇದ ಗಿಡಗಳ ನರ್ಸರಿ, ಭಕ್ತಾದಿಗಳಿಗೆ ಶೌಚಾಲಯ ಮತ್ತು ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಿ ಮಹದೇಶ್ವರನ ಭಕ್ತಾದಿಗಳ ಜೊತೆ ಪ್ರವಾಸಿಗರನ್ನೂ ಆಕರ್ಷಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.

ಪಿಎಸ್‌ಎಪಿ ಕಂಪನಿಗೆ ನಿರ್ಮಾಣ ಹೊಣೆ: 101 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಗದಗ ಮೂಲದ ಪಿಎಸ್‌ಎಪಿ ಆರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದ್ದು, ಕಾಮಗಾರಿಯನ್ನು ಮುಂದಿನ ಎರಡೂವರೆ ವರ್ಷಗಳ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಲಾಗಿದೆ.

ಈ  ಪಿಎಸ್‌ಎಪಿ ಕಂಪನಿ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಈಶ್ವರ ಪ್ರತಿಮೆ ಮತ್ತು ಗದಗದ ಬಸವೇಶ್ವರ ಪ್ರತಿಮೆಯನ್ನು ಯಶಸ್ವಿಯಾಗಿ ನಿರ್ಮಿಸಿರುವ ಸಂಸ್ಥೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಭಿಯಂತರ ಕುಮಾರ್‌, ಆಗಮಿಕರಾದ ಕರವೀರಸ್ವಾಮಿ, ಪಿಎಸ್‌ಎಪಿ ಕಂಪನಿಯ ಮಾಲತೇಶ್‌, ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಮಹದೇವ ಪ್ರಸಾದ್‌ ಕನಸು: ಮಲೆ ಮಹದೇಶ್ವರ ಬೆಟ್ಟದಲ್ಲಿ 101 ಅಡಿ ಎತ್ತರದ ಪ್ರತಿಮೆ ನಿರ್ಮಿಸುವುದು ಮಾಜಿ ಸಚಿವ ಮಹದೇವ ಪ್ರಸಾದ್‌ ಕನಸಿನ ಕೂಸಾಗಿತ್ತು. ಈ ಯೋಜನೆಯನ್ನು ಅತಿ ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಅಂದಿನ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಭಾರತಿ ಅವರಿಗೆ ಸೂಚಿಸಿದ್ದರು.

ಆದರೆ, 2017ರ ಜನವರಿಯಲ್ಲಿ ಮಹದೇವಪ್ರಸಾದ್‌ ಕಾಲವಾದ ಬಳಿಕ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಅವರ ಪತ್ನಿ ಗೀತಾ ಸಚಿವೆಯಾದಾಗ ಈ ಬಗ್ಗೆ ಗಮನಹರಿಸುವಂತೆಯೂ ಕೋರಲಾಗಿತ್ತು. ಅಲ್ಲದೇ ಪ್ರತಿ ಬಾರಿ ಪ್ರಾಧಿಕಾರದ ಸಭೆಗಳನ್ನು ಆಯೋಜಿಸಿದಾಗಲೂ ಶಾಸಕ ನರೇಂದ್ರ ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡುತ್ತಲೇ ಬರುತ್ತಿದ್ದರು.

ಆದರೆ, ಕಾಮಗಾರಿ ಪ್ರಾರಂಭ ಹಂತದಲ್ಲಿಯೇ ಇದ್ದುದರಿಂದ ಭಕ್ತಾದಿಗಳು ಆಗಾಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದರು. ಇದೀಗ ಕಾಮಗಾರಿ ಪ್ರಾರಂಭವಾಗಿರುವುದು ಮಹದೇಶ್ವರನ ಭಕ್ತಾದಿಗಳು ಮತ್ತು ಮಹದೇವ ಪ್ರಸಾದ್‌ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ.

20 ಅಡಿ ಪೀಠ, 80 ಅಡಿ ಪ್ರತಿಮೆ: ಪ್ರತಿಮೆಯನ್ನು 101 ಅಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 20 ಅಡಿ ಎತ್ತರಕ್ಕೆ ಪೀಠದ ಮಾದರಿ ಗುಹೆ ನಿರ್ಮಿಸಲಾಗುವುದು. ಈ ಗುಹೆಯಲ್ಲಿ 24 ವಿಭಾಗಗಳು ಇರಲಿದ್ದು, ಇವುಗಳಲ್ಲಿ ಮಹದೇಶ್ವರರಿಗೆ ಸಂಬಂಧಿಸಿದ ಇತಿಹಾಸ ಇರುವ ಗೋಡೆ ಬರಹಗಳನ್ನು ಮತ್ತು ಮಹದೇಶ್ವರರಿಗೆ ಸಂಬಂಧಿಸಿದ ಆಡಿಯೋಗಳನ್ನು ಬಿತ್ತರಿಸುವ ವ್ಯವಸ್ಥೆ ಮಾಡಲಾಗುವುದು.

ಈ 20 ಅಡಿ ಪೀಠದ ಮೇಲೆ 80 ಅಡಿ ಮಹದೇಶ್ವರರ ಪ್ರತಿಮೆಯನ್ನು ಹುಲಿಯ ಮೇಲೆ ಕುಳಿತಿರುವ ಮಾದರಿಯಲ್ಲಿ ಪ್ರತಿಷ್ಠಾಪಿಸುವ ಯೋಜನೆಯಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ತಿಳಿಸಿದರು.

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.