ಮಾದಪ್ಪನ ಬೆಟ್ಟಕ್ಕೆ ಬಸ್‌ ಇಲ್ಲದೆ ಭಕ್ತರ ಪರದಾಟ


Team Udayavani, May 6, 2019, 3:00 AM IST

madappana

ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವ ಸ್ವಾಮಿ ದರ್ಶನ ಪಡೆಯಲು ಭಕ್ತರು ಬಸ್ಸಿಗಾಗಿ ಪ್ರತಿಭಟನೆ ನಡೆಸಿ ದರ್ಶನ ಪಡೆಯುವ ಘಟನೆಗಳು ಪ್ರತಿ ತಿಂಗಳು ನಗರದ ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಜರುಗಿದೆ.

ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನವು ಅಭಿವೃದ್ಧಿ ಪ್ರಾಧಿಕಾರ ಆದ ಮೇಲೆ ಭಕ್ತರಿಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಟ್ಟಿದ್ದು, ಅಷ್ಟೇ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ದೇವಸ್ಥಾನದ ಅಭಿವೃದ್ಧಿಗೆ ಕಾಣಿಕೆ ನೀಡಿ ವರ್ಷದಲ್ಲಿ ಹತ್ತಾರು ಕೋಟಿ ಆದಾಯ ಬರುತ್ತಿದ್ದರೂ ಬೆಂಗಳೂರು, ಮೈಸೂರು, ಮಂಡ್ಯ, ಕನಕಪುರ, ಮಳವಳ್ಳಿ, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ರಾಜ್ಯದಾದ್ಯಂತ ಭಕ್ತರು ಕೊಳ್ಳೇಗಾಲ ಪಟ್ಟಣ ಕೇಂದ್ರ ಸ್ಥಾನವಾಗಿರುವುದರಿಂದ ಬಸ್ಸಿಗಾಗಿ ಬಂದ ಭಕ್ತರು

-ಗಂಟೆ ಗಟ್ಟಲೆ ನಿಂತೂರು ಸಹ ಬಸ್ಸಿಲ್ಲದೆ ಪ್ರತಿ ತಿಂಗಳ ಅಮಾವ್ಯಾಸೆಯ ದಿನದಂದು ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳ ಜೊತೆ ಬಸ್‌ ಬಿಡಿಸುವಂತೆ ಜಗಳವಾಡಿದರೂ ಸಹ ಬಸ್‌ ನೀಡದ ಹಿನ್ನೆಲೆ ರಸ್ತೆ ಚಳವಳಿ ಮಾಡಿ ನಂತರ ಬಸ್‌ಗಳನ್ನು ಬಿಟ್ಟ ಹಲವಾರು ಉದಾಹರಣೆಗಳಿವೆ.

ಮೇ 4ರಂದು ಅಮಾವ್ಯಾಸೆ ಪ್ರಯುಕ್ತ ವಿವಿಧ ಜಿಲ್ಲೆಗಳಿಂದ ರಾತ್ರಿ ಬೆಟ್ಟಕ್ಕೆ ಆಗಮಿಸಲು ಬಂದಿದ್ದ ಭಕ್ತರಿಗೆ ಬಸ್ಸಿಲ್ಲದೆ ಗಂಟೆ ಗಟ್ಟಲೆ ನಿಂತಿದ್ದರು. ಬಸ್‌ ಬಿಡುವಂತೆ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿದರೂ ಅಧಿಕಾರಿಗಳು ಬಸ್‌ ಬರುತ್ತದೆ ಎಂದು ತಿಳಿಸಿದರು.

ಗಂಟೆಗಟ್ಟಲೆಯಾದರೂ ಬಸ್‌ ಬಾರದ ಹಿನ್ನೆಲೆ ರೊಚ್ಚಿಗೆದ್ದ ಭಕ್ತರು ರಸ್ತೆಗಿಳಿದು ಬಸ್ಸಿಗಾಗಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಶ್ರೀಕಾಂತ್‌ ಅವರು ತಕ್ಷಣವೇ ರಸ್ತೆ ಸಾರಿಗೆ ಅಧಿಕಾರಿಗಳನ್ನು ಬಸ್‌ ಬಿಡುವಂತೆ ತಿಳಿಸಿದಾಗ ಬಸ್‌ ಬಿಟ್ಟ ನಂತರ ಭಕ್ತರು ಮಾದಪ್ಪನ ದರ್ಶನ ಪಡೆಯಲು ತೆರಳಿದರು.

ಪ್ರತಿ ತಿಂಗಳು ಅಮಾವ್ಯಾಸೆ ದಿನದಂದು ಹಾಗೂ ವಿಶೇಷ ಹಬ್ಬದ ದಿನಗಳಲ್ಲಿ ರಸ್ತೆ ಸಾರಿಗೆ ಬಸ್‌ಗಳು ಭಕ್ತರ ಅನುಗುಣವಾಗಿ ಬಸ್‌ ಬಿಡದೆ ಕಡಿಮೆ ಬಸ್‌ ಬಿಡುತ್ತಿರುವುದರಿಂದ ಭಕ್ತರು ಸರಿಯಾದ ಸಮಯಕ್ಕೆ ಬಸ್‌ ಸಿಗದೆ ಬಸ್‌ ನಿಲ್ದಾಣದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು,

ಇದರ ಬಗ್ಗೆ ಪ್ರತಿ ತಿಂಗಳು ಪ್ರತಿಕೆಯಲ್ಲಿ ಪ್ರಕಟಣೆಯಾದರೂ ಸಹ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರು ಸಹ ಇತ್ತ ಗಮನ ಹರಿಸದಿರುವುದರಿಂದ ಭಕ್ತರು ಮಾತ್ರ ತಮ್ಮ ಸಂಕಷ್ಟವನ್ನು ಕೇಳಲು ಯಾರು ಇಲ್ಲದಂತೆ ಆಗಿದೆ.

ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರು ತಮ್ಮ ಹರಕೆಗಳನ್ನು ತೀರಿಸಿ, ಅಷ್ಟೋ ಇಷ್ಟೋ ಗೋಲಕಕ್ಕೆ ಹಣ ಹಾಕಿ ಹರಕೆಗಳನ್ನು ತೀರಿಸಿಕೊಳ್ಳುವುದರಿಂದ ತಿಂಗಳಲ್ಲಿ ಒಂದರಿಂದ ಒಂದುವರೆ ಕೋಟಿ ರೂ. ವರೆಗೂ ಆದಾಯ ಬರುತ್ತಿದ್ದು, ಪ್ರಾಧಿಕಾರದ ಅಧಿಕಾರಿಗಳು ಸಹ ಭಕ್ತರಿಗೆ ಬಸ್ಸಿನ ಪರದಾಟದ ಬಗ್ಗೆ ಗಮನ ಹರಿಸದಿರವುದಕ್ಕೆ ಭಕ್ತರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತಿ ಅಮಾವ್ಯಾಸೆ ತಿಂಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆಯುತ್ತಿದ್ದು ಬಸ್ಸಿಗಾಗಿ ಗಂಟೆ ಗಂಟಲೆ ಕಾದು ನಿಂತರೂ ಸಹ ರಸ್ತೆ ಸಾರಿಗೆ ಬಸ್‌ ಸರಿಯಾದ ಸಮಯಕ್ಕೆ ಬಸ್‌ ಬಿಡುತ್ತಿಲ್ಲ ಪ್ರತಿ ತಿಂಗಳು ಸಹ ಹೀಗೆ ಮಾಡುತ್ತಿದ್ದಾರೆ.
-ದೊರೆಭಗವಾನ್‌, ಮಾದಪ್ಪನ ಭಕ್ತ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

5

Gundlupete: ಎರಡು ಬೈಕ್ ಗಳ ನಡುವೆ ಅಪಘಾತ; ಇಬ್ಬರು ಸಾವು

10-gundlupete

Gundlupete: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

14(1)

Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.