ಚಾ.ನಗರದಲ್ಲಿ ದ.ಭಾರತದ ಮೊದಲ ಅರಿಶಿನ ಸಂಸ್ಕರಣ ಘಟಕ
Team Udayavani, Sep 9, 2018, 6:00 AM IST
ಚಾಮರಾಜನಗರ: ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಸರ್ಕಾರಿ ಸ್ವಾಮ್ಯದ ಅರಿಶಿನ ಸಂಸ್ಕರಣ ಘಟಕ ನಗರದ ಎಪಿಎಂಸಿಯಲ್ಲಿ ಕಾರ್ಯಾರಂಭ ಮಾಡಲಿದ್ದು, ಯಂತ್ರೋ ಪಕರಣಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಎಪಿಎಂಸಿ ಪ್ರಾಂಗಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅರಿಶಿನ ಸಂಸ್ಕರಣ ಘಟಕದ ಅಂತಿಮ ಸಿದಟಛಿತೆ ಹಾಗೂ ಹೈಟೆಕ್ ಯಂತ್ರೋಪಕರಣಗಳ ಜೋಡಣೆ ಕಾರ್ಯ ನಡೆಯುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೋಟಿ ರೂ. ವೆಚ್ಚದಲ್ಲಿ ಅರಿಶಿನ ಸಂಸ್ಕರಣ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ಈ ಪೈಕಿ 50ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, 50 ಲಕ್ಷ ರೂ. ವೆಚ್ಚದಲ್ಲಿ ಯಂತ್ರೋಪಕರಣಗಳ ಜೋಡಣೆ ಹಾಗೂ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಉದ್ಘಾಟನೆಗೊಂಡು, ರೈತರ ಸೇವೆಗೆ ಸಮರ್ಪಿಸಲಾಗುತ್ತದೆ.
ತಮಿಳುನಾಡಿಗೇ ಹೋಗಬೇಕಿತ್ತು: ದಕ್ಷಿಣ ಕರ್ನಾಟಕದ ಚಾ.ನಗರ, ಮೈಸೂರು ಭಾಗದಲ್ಲಿ ಹೆಚ್ಚಾಗಿ ರೈತರು ಅರಿಶಿನ ಬೆಳೆಯುತ್ತಿದ್ದಾರೆ. ಇದನ್ನು ಮಾರಾಟ ಹಾಗೂ ಸಂಸ್ಕರಿಸಲು ತಮಿಳುನಾಡಿಗೆ ರೈತರು ಕೊಂಡೊಯ್ಯ ಬೇಕಾಗಿತ್ತು. ಚಾಮರಾಜನಗರ ಜಿಲ್ಲೆಯಲ್ಲೂ ಹೆಚ್ಚಿನ ರೈತರು ಅರಿಶಿನ ಬೆಳೆಯುತ್ತಿದ್ದಾರೆ.
ಅಲ್ಲದೇ, ಮೈಸೂರು, ಧಾರವಾಡ, ದಾವಣಗೆರೆ ಜಿಲ್ಲೆಯಿಂದಲೂ ರೈತರು ಹಾಗೂ ವರ್ತಕರು ಅರಿಶಿನ ಖರೀದಿಗೆ, ಮಾರಾಟಕ್ಕೆ ಜಿಲ್ಲೆಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜ ನಗರ ಎಪಿಎಂಸಿ ಅವರಣದಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಕರಣ ಘಟಕ ಈ ಭಾಗದ ಬೆಳೆಗಾರರಿಗೆ ಹಾಗೂ ವರ್ತಕರಿಗೆ ಹೆಚ್ಚಿನ ಅನುಕೂಲವಾಗಿದೆ.
ರೈತರಿಗೆ ಅನುಕೂಲ: ಕಳೆದ ಸಾಲಿನಲ್ಲಿ ಎಪಿಎಂಸಿ ಯಲ್ಲಿ 72 ಸಾವಿರ ಕ್ವಿಂಟಾಲ್‌ಅರಿಶಿನ ವಹಿವಾಟು ಆಗಿತ್ತು. ಇತ್ತೀಚಿನ ದಿನಗಳಲ್ಲಿ ಶುದ್ಧಿ ಛೀಕರಿಸಿದ ಅರಿಶಿನ ದೊರೆಯದ ಕಾರಣ ವರ್ತಕರು ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರಲಿಲ್ಲ. ಅಲ್ಲದೇ ರೈತರಿಗೂ ಸ್ಪರ್ಧಾತ್ಮಕ ಬೆಲೆ ದೊರೆಯದೇ ಸಂಕಷ್ಟದಲ್ಲಿದ್ದರು. ಈ ಸಂಸ್ಕರಣ ಘಟಕ ಸ್ಥಾಪನೆಯಿಂದ ರೈತರು ಹಾಗೂ ವರ್ತಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದೊಂದು ಹೈಟೆಕ್ ಅರಿಶಿನ ಸಂಸ್ಕರಣಘಟಕವಾಗಿದ್ದು, ಒಂದೇ ಹಂತದಲ್ಲಿ ಅರಿಶಿನವನ್ನು ಕ್ಲೀನಿಂಗ್ ಹಾಗೂ ಗೆùಂಡಿಂಗ್‌ಮಾಡಿ ಪ್ಯಾಕಿಂಗ್ ಮಾಡಲಾಗುತ್ತದೆ.ಇದರಿಂದ ಅರಿಶಿನ ಹೆಚ್ಚು ಬೆಲೆಗೆ ಮಾರಾಟವಾಗಲಿದೆ. ಜತೆಗೆ ವರ್ತಕರು ಹಾಗೂ ಕಂಪನಿಗಳಿಗೂ ಗುಣಮಟ್ಟದ ಉತ್ಕೃಷ್ಟವಾದ ಅರಿಶಿನ ದೊರೆಯಲಿದೆ.
ಸಾಂಗ್ಲಿ, ಈರೋಡ್‌ನಲ್ಲಿ ಖಾಸಗಿ ಘಟಕ:ಈಗಾಗಲೇ ಇಂಥ ಘಟಕ ಮಹಾರಾಷ್ಟ್ರದ ಸಾಂಗ್ಲಿ, ತಮಿಳುನಾಡಿನ ಈರೋಡ್‌ನಲ್ಲಿ ಖಾಸಗಿ ಒಡೆತನದಲ್ಲಿ ನಡೆಯುತ್ತಿದೆ. ಈಗ ಚಾ.ನಗರ ಎಪಿಎಂಸಿಯಲ್ಲಿ ಸರ್ಕಾರದ ಒಡೆತನದಲ್ಲಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ರೈತರಿಗೆ ಅತಿ ಕಡಿಮೆ ದರದಲ್ಲಿ ಅರಿಶಿನ ಸಂಸ್ಕರಣೆ ಮಾಡಿಕೊಡಲಾಗುತ್ತದೆ.
21ಕ್ಕೆ ಘಟಕದ ಬಗ್ಗೆ ರೈತರಿಗೆ ಕಾರ್ಯಾಗಾರ: ಎಪಿಎಂಸಿ ಮತ್ತು ಚಾ.ನಗರ ತಾಲೂಕುಸೌಹಾರ್ದ ಅರಿಶಿನ ಬೆಳೆಗಾರರ ರೈತ ಉತ್ಪಾದಕರ ಸಂಘದ ಸಹಯೋಗದಲ್ಲಿ ಸೆ.21ರಂದು ಅರಿಶಿನ ಬೆಳೆಗಾರರ ಕಾರ್ಯಾಗಾರ ಆಯೋಜಿಸಲಾಗಿದ್ದು, ರೈತರಿಗೆ ಬೆಳೆ ವಿಧಾನ, ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣ ಘಟಕದ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಅರಿಶಿನ ಸಂಸ್ಕರಣ ಘಟಕ ನಿರ್ಮಾಣ ನನ್ನ ಬಹುದಿನಗಳ ಕನಸಾಗಿತ್ತು. ಸರ್ಕಾರಿ ಒಡೆತನದ ಸಂಸ್ಕರಣ ಘಟಕ ದಕ್ಷಿಣ ಭಾರತದಲ್ಲೇ ಇರಲಿಲ್ಲ. ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಘಟಕ ಸ್ಥಾಪಿಸಲು ಶ್ರಮಿಸಿದ್ದೇನೆ. ಸಂಸದ ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಇದಕ್ಕೆ ಸಹಕಾರ ನೀಡಿದ್ದಾರೆ.
– ಬಿ.ಕೆ.ರವಿಕುಮಾರ್,
ಎಪಿಎಂಸಿ ಅಧ್ಯಕ್ಷ
– ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.