ವೈಭವದ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ


Team Udayavani, Feb 11, 2020, 3:00 AM IST

vybhavada

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ಧ್ವಜಗಳಿಂದ ಅಲಂಕೃತಗೊಂಡಿದ್ದ ಲಕ್ಷ್ಮೀ ನಾರಾಯಣಸ್ವಾಮಿ ದಿವ್ಯರಥೋತ್ಸವ ವಿಜೃಂಭಣೆಯಿಂದ ಸೋಮವಾರ ಜರುಗಿತು. ಸೋಮವಾರ ಬೆಳಗ್ಗೆ 10.15ಕ್ಕೆ ಮೀನ ಲಗ್ನದಲ್ಲಿ ರಥಸ್ಥಂ ಕೇಶವಂ ದೃರ್ಷ್ಟ್ಯಾ ಪುನರ್ಜನ್ಮನವಿದ್ಯತೇ ಎಂಬ ಮರ್ಯಾದೆಯಲ್ಲಿ ದಿವ್ಯರಥೋತ್ಸವ ಮತ್ತು ಸಂಜೆ ಧೂಪ ಉತ್ಸವ ನಡೆಯಿತು.

ರಥೋತ್ಸವಕ್ಕೆ ಶಾಸಕ ಮಹೇಶ್‌ ಚಾಲನೆ: ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಸಲು ಉಪ ವಿಭಾಗಾಧಿಕಾರಿ ನಿಖೀತ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ ಕೆ.ಕುನಾಲ್‌ ಅವರ ಆದೇಶದ ಮೇರೆಗೆ ಖಜಾನೆಯಲ್ಲಿಡಲಾಗಿದ್ದ ದೇವರ ಚಿನ್ನಾಭರಣಗಳನ್ನು ವಿಗ್ರಹಕ್ಕೆ ಅಲಂಕಾರಗೊಳಿಸಿ ನಂತರ ದೇವಾಲಯದ ಪ್ರಧಾನ ಅರ್ಚಕ ಆರ್‌.ಶೇಷಾದ್ರಿ ಭಟ್‌ ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಸಕ ಎನ್‌.ಮಹೇಶ್‌ ಚಾಲನೆ ನೀಡಿದರು.

ಪ್ರಸಾದ ವಿತರಣೆ: ಅಲಂಕೃತಗೊಂಡ ರಥದ ಮೇಲೆ ದೇವರ ವಿಗ್ರಹವನ್ನು ಇರಿಸಿ ಮಹಾಮಂಗಳಾರತಿಯ ನಂತರ ಬಂದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.

ದೇವರಿಗೆ ದವಸ ಧಾನ್ಯ ವಿತರಣೆ: ಜಿಲ್ಲಾದ್ಯಂತ ವಿವಿಧ ತಾಲೂಕು ಕೇಂದ್ರಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸೇರಿ ರಥವನ್ನು ಎಳೆಯಲು ಆರಂಭಿಸಿದರೆ ಮತ್ತೆ ಹಲವು ಭಕ್ತರು ರಥಕ್ಕೆ ಹಣ್ಣು-ದವನ ಮತ್ತು ಜಮೀನುಗಳಲ್ಲಿ ಬೆಳೆದಿದ್ದ ವಿವಿಧ ದವಸ-ಧಾನ್ಯಗಳನ್ನು ರಥಕ್ಕೆ ಅರ್ಪಿಸಿ ಭಕ್ತಿ ಪರಕಾಷ್ಠೆ ಮೆರೆದರು. ದೇವಾಲಯದ ಮುಂಭಾಗ ರಥೋತ್ಸವ ಆರಂಭಿಸಿದ ಭಕ್ತರು ರಥದ ಬೀದಿಯ ಸುತ್ತ ರಥ ಎಳೆದು ದೇವಾಲಯ ಬಳಿ ತಂದು ನಿಲುಗಡೆ ಮಾಡಿದ ಭಕ್ತರು ರಥೋತ್ಸವಕ್ಕೆ ವಿವಿಧ ಬಗೆ ಬಗೆಯ ಧೂಪದೀಪಗಳನ್ನು ಹಚ್ಚಿ ಭಕ್ತಿ ಮೆರೆದರು.

ವಿಶೇಷ ಪೂಜೆ: ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಫೆ.3ರಂದು ಸೋಮವಾರ ಉತ್ಸವಾಂಗ ಪಂಚಾಮೃತದೊಂದಿಗೆ ರಥೋತ್ಸವದ ಪೂಜೆ ಆರಂಭಗೊಡು, 4 ರಂದು ಮಂಗಳವಾರ ಧ್ವಜಾರೋಹಣ, 5 ರಂದು ಹಂಸವಾಹನೋತ್ಸವ, 6ರಂದು ಶೇಷವಾಹನ ಉತ್ಸವ, 7 ರಂದು ದೇವರೋತ್ಸವ ಹಾಗೂ ಸೌಮ್ಯ ಲಕ್ಷ್ಮೀ ಕಲ್ಯಾಣೋತ್ಸವ, 8 ರಂದು ಪ್ರಹ್ಲಾದಪರಿಫ‌ಲನಾ ನಂತರ ಗರುಡೋತ್ಸವ, 9 ರಂದು ಕವನ ಬಲಿಪ್ರಧಾನ ಮತ್ತು ವಸಂತೋತ್ಸವ, ಗಜೇಂದ್ರಮೋಕ್ಷ, 10 ರಂದು ಪುನರ್ಜನ್ಮ ವಿದ್ಯತೇ ಎಂಬ ಮರ್ಯಾದೆಯಲ್ಲಿ ದಿವ್ಯ ಬೃಹತ್‌ ರಥೋತ್ಸವ ಬೆಳಗ್ಗೆ ಆರಂಭಗೊಂಡರೆ ಸಂಜೆ ಗೂಳಿ ಉತ್ಸವ ಜರುಗಲಿದೆ. 11 ರಂದು ಮಂಟಪೋತ್ಸವ, 12 ರಂದು ಅಶ್ವವಾಹನೋತ್ಸವ, 13 ರಂದು ಮಹಾಭಿಷೇಕದೊಂದಿಗೆ ರಥೋತ್ಸವಕ್ಕೆ ತೆರೆಬಿಳಲಿದೆ.

ಪ್ರಸಾದ ವಿತರಣೆ: ದೇವಸ್ಥಾನದ ವತಿಯಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.

ಪಾನಕ ಮಜ್ಜಿಗೆ ವಿತರಣೆ: ರಥೋತ್ಸವ ಅಂಗವಾಗಿ ರಥದ ಬೀದಿಯ ನಿವಾಸಿಗಳು ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಿದರು.

ಬಿಗಿ ಬಂದೋಬಸ್ತ್: ರಥೋತ್ಸವ ಅಂಗವಾಗಿ ಡಿವೈಎಸ್‌ಸ್ಪಿ ನವೀನ್‌ಕುಮಾರ್‌, ಸರ್ಕಲ್‌ ಇನ್‌ಸ್ಟೆಕ್ಟರ್‌ ಶ್ರೀಕಾಂತ್‌, ಸಬ್‌ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ, ಅಶೋಕ್‌ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತು ಮಾಡಿ ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆವಹಿಸಿದ್ದರು.

ರಥೋತ್ಸವದಲ್ಲಿ ಶಾಸಕ ಎನ್‌.ಮಹೇಶ್‌, ತಹಶೀಲ್ದಾರ್‌ ಕೆ.ಕುನಾಲ್‌, ನಗರಸಭೆ ಸದಸ್ಯರಾದ ಜಿ.ಪಿ.ಶಿವಕುಮಾರ್‌, ನಾಗೇಂದ್ರ, ಮನೋಹರ್‌, ಧರಣೇಶ್‌, ಪರಮೇಶ್ವರಯ್ಯ, ರಾಜಸ್ವ ನಿರೀಕ್ಷಕ ರಾಜಶೇಖರ್‌, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ, ಮುಖಂಡರಾದ ನರಸಿಂಹನ್‌ ಇತರರು ಇದ್ದರು.

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.