ಗುರುತಿನ ಚೀಟಿ ಕೊಡಲು ದುಡ್ಡು ಕೇಳುತ್ತಾರೆ: ದೂರು
Team Udayavani, Jan 18, 2018, 2:59 PM IST
ಕೊಳ್ಳೇಗಾಲ: 18 ವರ್ಷ ತುಂಬಿದ ಯುವಕ- ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸಲು ಜ.22 ರಂದು ಕೊನೆಯ ದಿನವಾಗಿದ್ದು, ಕೂಡಲೇ ಹೆಸರು ನೋಂದಾಯಿಸಿಕೊಳ್ಳುವಂತೆ ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ ಮನವಿ ಮಾಡಿದರು.
ನಗರದ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ
ಅವರು, ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜ.12ಕ್ಕೆ ಇದ್ದ ಕಾಲಾವಧಿಯನ್ನು
22ರವರೆಗೆ ವಿಸ್ತರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳಿದಲ್ಲಿ ಮತದಾರರ ನೋಂದಣಾಧಿಕಾರಿ(ಎಸಿ), ಸಹಾಯಕ ಮತದಾರರ ನೋಂದಣಾಧಿಕಾರಿಗಳ (ತಹಶೀಲ್ದಾರ್) ಕಚೇರಿಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.
ಜ.1, 2018ಕ್ಕೆ 18 ವರ್ಷ ತುಂಬಿದ ಅರ್ಹ ಮತದಾರರನ್ನು ನಮೂನೆ-6ರ ಅರ್ಜಿಗಳನ್ನು ಸಂಬಂಧಿಸಿದ ತಹಶೀಲ್ದಾರ್, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಿಂದ ಪಡೆದು ಭರ್ತಿಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕೆಂದರು.
ವಿಶೇಷ ಆಂದೋಲನ ಕಾರ್ಯಕ್ರಮವು ಮತಗಟ್ಟೆ ಮಟ್ಟದ ಅಧಿಕಾರಿಗಳ ಜೊತೆ ಬಿಎಲ್‌ಎ (ಪಕ್ಷಗಳ ಬೂತ್ ಲೆವಲ್ ಏಜೆಂಟ್ ಗಳು) ಸಹ ಮನೆ ಮನೆಗೆ ಭೇಟಿ ಕೊಟ್ಟು 18 ವರ್ಷ ತುಂಬಿದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಹಾಗೂ ಮರಣ ಹೊಂದಿದ, ಸ್ಥಳಾಂತರ ಮತದಾರರ ಹೆಸರನ್ನು ಕೈಬಿಡಲು ಕ್ರಮ ವಹಿಸುವುದು, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಗಗಳನ್ನು ಗುರುತಿಸಿ, ಪರಿಶೀಲಿಸಿ ವಿವಾಹಿತ ಮಹಿಳಾ ಮತದಾರರ ಹೆಸರು, ತಂದೆತಾಯಿ ವಿಳಾಸಕ್ಕೆ ಉಳಿದಿದ್ದಲ್ಲಿ ಅದನ್ನು ಪರಿಶೀಲಿಸಿ, ಮತದಾರರ ಪಟ್ಟಿಯಿಂದ ಕೈಬಿಡುವ ಬಗ್ಗೆ ಕ್ರಮ ವಹಿಸುವುದು ಎಂದು ಹೇಳಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಹಿನ್ನೆಲೆ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಗ್ರಾಮ ಮಟ್ಟದಲ್ಲಿ
ಡಂಗೂರ ಸಾರಿಸುವ ಮೂಲಕ ಹಾಗೂ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಲು ಕ್ರಮ ವಹಿಸುವುದು. ಭಾರತ
ಚುನಾವಣಾ ಆಯೋಗವು ಫೆ.28, 2018 ರಂದು ಪ್ರಚುರಪಡಿಸುವ ಅಂತಿಮ ಮತದಾರರ ಪಟ್ಟಿಯು ಶೇ.100 ದೋಷರ ಹಿತವಾಗಿರಲು ಸಂಪೂರ್ಣ ಸಹಕಾರ ನೀಡಿ ಬೇಕೆಂದು ಹೇಳಿದರು.
ಮತದಾರ ಪಟ್ಟಿ ಪರಿಷ್ಕರಿಸಿಲ್ಲ: ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಸುಮಾರು ವರ್ಷಗಳು ಕಳೆದರೂ ಮೃತಪಟ್ಟ ಹೆಸರು ಮತದಾರರ ಪಟ್ಟಿಯಲ್ಲಿ ಇರುತ್ತದೆ. ಒಂದೇ ಕುಟುಂಬದಲ್ಲಿ ಬೇರೆ ಬೇರೆ ವಾರ್ಡ್‌ಗಳಲ್ಲಿ ಹೆಸರು ಮತದಾರರ ಪಟ್ಟಿಯಲ್ಲಿರುತ್ತದೆ. ಇವುಗಳನ್ನು ಪರಿಶೀಲನೆ ನಡೆಸ ಬೇಕು. ಕೂಲಿಗಾಗಿ ಬೇರೆ ಗ್ರಾಮಗಳಿಗೆ ವಲಸೆ ಹೋಗಿ ಮತ್ತೆ ಗ್ರಾಮಕ್ಕೆ ಬಂದು ಎರಡು ಮೂರು ವರ್ಷಗಳಾದರೂ ಮತದಾರರ ಪಟ್ಟಿಗೆ ಅಧಿಕಾರಿಗಳು ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಹಣ ಪಡೆಯುತ್ತಾರೆ: ವಾರ್ಡ್‌ಗಳಲ್ಲಿ ಸೇರ್ಪಡೆ ಹಾಗೂ ಕೈಬಿಡುವುದು ಮತ್ತು ತಿದ್ದುಪಡಿ ಕೆಲಸವನ್ನು ಬಿಎಲ್‌ಒಗಳು ಸರಿಯಾದ ರೀತಿ ನಿರ್ವಹಿಸುತ್ತಿಲ್ಲ. ಗುರುತಿನ ಚೀಟಿ ನೀಡುವ ಸಮಯದಲ್ಲಿ ಮತದಾರರಿಂದ 50 ರಿಂದ 500 ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.
ಎಲ್ಲಾವನ್ನು ಆಲಿಸಿದ ಎಸಿ ಮಾತನಾಡಿ, ಎಲ್ಲಾ ಸಮಸ್ಯೆಗಳನ್ನು ಜರೂರಾಗಿ ಕ್ರಮ ವಹಿಸಲಾಗುವುದು. ನೇಮಕಗೊಂಡಿರುವ ಬಿಎಲ್‌ಒ ಹಾಗೂ ಇನ್ನಿತರ ಅಧಿಕಾರಿಗಳು ಸಮಸ್ಯೆ ಬಗೆಹರಿಸದೆ ಹೋದಲ್ಲಿ ಕಚೇರಿಗೆ ಬಂದು ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಚುನಾವಣೆ ವಿಭಾಗದ ಶಿರಸ್ತೇದಾರ್ ಬಿ.ಕೆ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ರಮೇಶ್‌ಬಾಬು, ಹನೂರು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ನಗರಸಭೆ ಅಧ್ಯಕ್ಷ ಶಾಂತರಾಜು, ಬಿಜೆಪಿ ಟೌನ್ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಪಿ.ಶಿವಕುಮಾರ್, ಜೆಡಿಎಸ್ ಪಕ್ಷದ ಕೊಳ್ಳೇಗಾಲ ಕ್ಷೇತ್ರದ ಕಾರ್ಯಾಧ್ಯಕ್ಷ ಶಶಿಶೇಖರ್, ಜಿಲ್ಲಾ ಉಪಾಧ್ಯಕ್ಷ ಜಿನಕನಹಳ್ಳಿ ಶ್ರೀನಿವಾಸ್, ಬಿಎಸ್ಪಿ ಸಿದ್ದರಾಜು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.