ಹೊಸ ಉಪ್ಪಾರ ಬಡಾವಣೆಗೆ 25 ವರ್ಷ ಕಳೆದರೂ ಸೌಲಭ್ಯವಿಲ್ಲ
3 ವರ್ಷ ಕಳೆದರೂ ಶಾಸಕರ ಭರವಸೆ ಈಡೇರಿಲ್ಲ: ನಿವಾಸಿಗರ ದೂರು ಅಶುಚಿತ್ವ ತಾಣವಾದ ಬಡಾವಣೆ ಅಭಿವೃದ್ಧಿಪಡಿಸಿ
Team Udayavani, Aug 25, 2021, 5:10 PM IST
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಹೊಸ ಉಪ್ಪಾರ ಬಡಾವಣೆ ನಿರ್ಮಾಣವಾಗಿ 25 ವರ್ಷ ಕಳೆದರೂ ರಸ್ತೆಯ ಮಧ್ಯೆದಲ್ಲಿ ಹರಿಯುವ ಚರಂಡಿ ನೀರು, ಹದಗೆಟ್ಟ ರಸ್ತೆ ಬೀದಿ ಬೀಪ , ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ನಿವಾಸಿಗಳು
ಬದುಕನ್ನು ಸಾಗಿಸಬೇಕಾದ ದುಸ್ಥಿತಿ ಇದೆ.
ಯರಿಯೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಹೊಸ ಉಪ್ಪಾರ ಬಡಾವಣೆಯ 300ಕ್ಕೂ ಹೆಚ್ಚು ಕುಟುಂಬವನ್ನು ಒಳಗೊಂಡಿದೆ.
ಬೀದಿಗಳಲ್ಲಿ ಸಮರ್ಪಕವಾಗಿ ಚರಂಡಿ ನೀರು ವ್ಯವಸ್ಥೆ ಇಲ್ಲದ ಕಾರಣ, ನಿವಾಸಿಗಳು ತಮ್ಮ ಮನೆಯ ತ್ಯಾಜ್ಯ ನೀರನ್ನು ಬೀದಿಯಲ್ಲಿ ಹರಿಸುತ್ತಾರೆ. ಹೀಗೆ ರಸ್ತೆಗೆ ಬಿಡುವ ಕಲುಷಿತ ನೀರು ಬೀದಿಯಲ್ಲಿ ಶೇಖರಣೆಗೊಂಡು ಅಶುಚಿತ್ವ ತಾಣವಾಗಿದೆ. ಮಳೆ ನೀರು, ಕೊಳಚೆ ನೀರಿನ ಜತೆ ಸೇರಿ ಕೊಂಡು ದುರ್ವಾಸನೆ ಬೀರುತ್ತದೆ. ಇದರಿಂದ ಬೀದಿಯಲ್ಲಿ ವಾಸಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆ ಕ್ರಿಮಿ ಕೀಟಗಳು ಆವಾಸಸ್ಥಾನ ಆಗಿದ್ದು, ಜನರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ. ಕೊಳಚೆ ನೀರು ಹೊರ ಹೋಗುವಂತಹ ವ್ಯವಸ್ಥೆ ಕಲ್ಪಿಸಿ ಎಂಬ ಬೇಡಿಕೆಗೆ ಗ್ರಾಪಂ ಪಿಡಿಒ ಗಮನಹರಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
ಇದನ್ನೂ ಓದಿ:ನಟಿ ಸಂಜನಾ ಗಲ್ರಾನಿಗೆ ಅನಾರೋಗ್ಯ| ಆಸ್ಪತ್ರೆಗೆ ದಾಖಲು
ಶಾಸಕರು ಅನುದಾನ ನೀಡಿಲ್ಲ: ತಾಲೂಕಿನ ಹೊಸ ಉಪ್ಪಾರ ಬಡಾವಣೆಗೆ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಈ ಬಗ್ಗೆ ಹಾಲಿ ಶಾಸಕ ಎನ್.ಮಹೇಶ್ ಸಾಕಷ್ಟ ಬಾರಿ ಮನವಿ ಮಾಡಿದರು. ರಸ್ತೆ,ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ನಯಾ ಪೈಸೆ ನೀಡಿಲ್ಲ. ಚುನಾವಣೆ ವೇಳೆ ಬಡಾವಣೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಆದರೆ,3ವರ್ಷ ಕಳೆದರೂ ಕ್ರಮವಹಿಸಿಲ್ಲ. ಈ ಬಡವಣೆಗೂ ಭೇಟಿ ನೀಡಿಲ್ಲ ಎಂಬುದು ಬಡಾವಣೆಯ ನಿವಾಸಿ ಮಹದೇವಶೆಟ್ಟಿ ಸೇರಿದಂತೆ ಹಲವಾರ ದೂರು.
ಹೊಸ ಉಪ್ಪಾರ ಬಡಾವಣೆಗೆ ಈ ಬಾರಿ 15 ನೇಹಣಕಾಸು ಯೋಜನೆ ಮೂಲಕ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅನುಮೋದನೆ
ಗೊಂಡ ತಕ್ಷಣ ಅಭಿವೃದ್ಧಿಯ ಕೆಲಸ ಕೈಗೊಳ್ಳಲಾಗುವುದು. ನರೇಗಾದಡಿರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಬಾರದು ಎಂದು ಸರ್ಕಾರ ಆದೇಶಿಸಿದೆ.
-ಮಮತಾ, ಪಿಡಿಒ ಯರಿಯೂರು ಗ್ರಾಪಂ
ಹೊಸ ಉಪ್ಪಾರ ಬಡಾವಣೆಯಲ್ಲಿ ರಸ್ತೆ,ಚರಂಡಿ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿ ಕ್ರಿಯಾಯೋಜನೆ ರೂಪಿಸಿ ಎಂದು ಪಿಡಿಒ ಅವರಿಗೆ ಸಾಕಷ್ಟ ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ.
-ನಾರಾಯಣ್, ಗ್ರಾ.ಪಂ.ಸದಸ್ಯ ಯರಿಯೂರು
-ಫೈರೋಜ್ ಖಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.