ರೈತರ ಸಮಸ್ಯೆಗಳಿಗೆ ಸಂಘಟನೆ ನೆರವಾಗಬೇಕು
Team Udayavani, Jul 2, 2023, 3:37 PM IST
ಗುಂಡ್ಲುಪೇಟೆ: ನಿರಂತರ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರ ನೆರವಿಗೆ ಸಂಘಟನೆ ನಿಲ್ಲಬೇಕು ಎಂದು ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಎ.ಎಂ. ಮಹೇಶಪ್ರಭು ತಾಕೀತು ಮಾಡಿದರು.
ಪಟ್ಟಣದ ಪಟ್ಟಲದಮ್ಮ ದೇವಾಲಯ ಆವರಣದಲ್ಲಿ ನಡೆದ ರೈತ ಸಂಘಟನೆ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಗಡಿ ತಾಲೂಕಾದ ಗುಂಡ್ಲುಪೇಟೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ಹೋರಾಟಕ್ಕೆ ರೈತ ಸಂಘಟನೆ ನೂತನ ಪದಾಧಿಕಾರಿಗಳು ಸದಾ ಸಿದ್ದರಿರಬೇಕು ಎಂದು ಸಲಹೆ ನೀಡಿದರು.
ನಮ್ಮನ್ನಾಳುವವರಿಗೆ ರೈತರ ಸಮಸ್ಯೆಗಳು ಅರ್ಥ ಆಗುವುದಲ್ಲ. ಕೆಲವು ಸಂದರ್ಭದಲ್ಲಿ ಅರ್ಥ ವಾದರೂ ಜಾಣಕುರುಡು ಪ್ರದರ್ಶಿಸುತ್ತಾರೆ. ಆದ್ದರಿಂದ ನಿರಂತರ ಒಂದಿಲ್ಲೊಂದು ಸಮಸ್ಯೆ ಎದುರಿಸುವ ರೈತರ ನೆರವಿಗೆ ಸಂಘಟನೆ ನಿಲ್ಲಬೇಕು. ಪದಾಧಿಕಾರಿಗಳು ಹಿಂದಿನ ಸಮಿತಿಯವರ ಸಲಹೆ, ಮಾರ್ಗದರ್ಶನ ಪಡೆಯುವ ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮುನ್ನಡೆಸ ಬೇಕು. ರಾಜ್ಯ ಸಂಘಟನೆಯೂ ನಿಮ್ಮ ಬೆಂಬಲಕ್ಕೆ ಇರಲಿದೆ ಎಂದು ಭರವಸೆ ನೀಡಿದರು.
ನೂತನ ತಾಲೂಕು ಸಮಿತಿ: ಹಂಗಳ ದಿಲೀಪ್ (ತಾಲೂಕು ಅಧ್ಯಕ್ಷ), ಶಿವಣ್ಣ ( ಪ್ರಧಾನ ಕಾರ್ಯದರ್ಶಿ), ರಾಜಶೇಖರ್(ಕಾರ್ಯಾಧ್ಯಕ್ಷ), ಪಾಪಣ್ಣ(ಗೌರವಾಧ್ಯಕ್ಷ), ಯುವ ಘಟಕ ತಾಲೂಕು ಸಂಚಾಲಕರಾಗಿ ಶಿವಪುರ ಭರತ್, ರಘು, ಸ್ವಾಮಿ, ಬಸವೇಶ್, ಹೋಬಳಿ ಅಧ್ಯಕ್ಷರು ಮತ್ತು ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ರಾಜ್ಯ ವರಿಷ್ಠ ಮಂಡಳಿಯ ಸದಸ್ಯರಾದ ಮಹೇಶ್ ಕುಮಾರ್, ಯುವ ಸಂಚಾಲಕ ಯಶ ವಂತ್, ಮುಖಂಡರಾದ ಬಸವರಾಜು, ಶ್ರೀಕಂಠ ಸ್ವಾಮಿ, ಜಿಲ್ಲಾ ಸಮಿತಿಯ ಸದಸ್ಯರಾದ ಟಿ.ಎಸ್. ಶಾಂತಮಲ್ಲಪ್ಪ, ಶಿವಪುರ ಮಹದೇವಪ್ಪ, ನಿಕಟ ಪೂರ್ವ ಪದಾಧಿಕಾರಿಗಳಾದ ಹೊನ್ನೇಗೌಡನ ಹಳ್ಳಿ ಶಿವಮಲ್ಲು, ಮಹದೇವಪ್ಪ, ಮಹದೇವಶೆಟ್ಟಿ, ಮಹೇಂದ್ರ, ರೇವಣ್ಣ, ಶಿವಣ್ಣ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.