![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, May 3, 2019, 12:24 PM IST
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಅರಣ್ಯ ವಲಯಕ್ಕೆ ಸೇರಿದ ಬರಗಿ ಫಾರಂ ಬಳಿ ಇರುವ ವಿದ್ಯುತ್ ಉಪ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾಡಂಚಿನ ಗ್ರಾಮಗಳಾದ ಬರಗಿ, ಹೊಂಗಹಳ್ಳಿ, ಮುಂಟೀಪುರ, ನಾಗಾಪಟ್ಟಣ ಗ್ರಾಮಗಳ ರೈತರಿಗೆ ಕಳೆದ ಮೂರು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಅದೇ ವಿದ್ಯುತ್‌ನ್ನು ಪಟ್ಟಣ ವ್ಯಾಪ್ತಿಯ ಎಂಟು ಜಲ್ಲಿ ಮಿಕ್ಸಿಂಗ್ ಕ್ರಷರ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಕಳೆದ 9 ತಿಂಗಳ ಹಿಂದೆಯೇ 206ಕ್ಕೂ ಹೆಚ್ಚು ಗ್ರೂಪ್ ಆಫ್ ಸರ್ವಿಸ್ ಛಾರ್ಜರ್‌ಗಳನ್ನು ಪೂರೈಕೆ ಮಾಡಲಾಗಿದ್ದೂ, 12 ಟ್ರಾನ್ಸಫಾರ್ಮರ್‌ಗಳಿಗೆ ಒಂದು ಜಿ.ಓ.ಎಸ್ ಅಳವಡಿಸಬೇಕಿದೆ. ಆದರೆ ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಾಲ್ಕು ದಿನದಿಂದ ವಿದ್ಯುತ್ ಇಲ್ಲ: ಬರಗಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದಲೂ ಸರಿಯಾಗಿ ಮಳೆ ಬಿದ್ದಿಲ್ಲ. ಆದರೆ ನಾಲ್ಕು ದಿನಗಳಿಂದ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಪಂಪ್‌ಸೆಟ್ ಹೊಂದಿರುವ ರೈತರಿಗೆ ಸಿಂಗಲ್ಫೇಸ್ ವಿದ್ಯುತ್‌ನ್ನು ಕೂಡಾ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಉಡಾಫೆ ಮತ್ತು ಬೇಜವಾಬ್ದಾರಿ ಉತ್ತರ ನೀಡುವ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ಏಕೆ ವ್ಯತ್ಯಯವಾಗಿದೆ ಎಂಬುದನ್ನು ಕಂಡು ಹಿಡಿಯಲು ಪ್ರಯತ್ನ ನಡೆಸಿಲ್ಲ.
ಅಧಿಕಾರಿಗಳಿಗೆ ಎಚ್ಚರಿಕೆ: ರೈತರ ಮುತ್ತಿಗೆ ವಿಚಾರ ತಿಳಿದು ಮಧ್ಯಾಹ್ನ 12 ಗಂಟೆ ನಂತರ ಸ್ಥಳಕ್ಕೆ ಆಗ ಮಿಸಿದ ಕಿರಿಯ ಅಭಿಯಂತರ ನಾಗೇಂದ್ರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು ಸಿಂಗಲ್ಫೇಸ್ ವಿದ್ಯುತ್ ನೀಡದಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು. ಮಧ್ಯಾಹ್ನ ನಂತರ ಆಗ ಮಿಸಿ ಬೇಜವಾಬ್ದಾರಿ ಪ್ರದರ್ಶಿಸಲು ಯತ್ನಿಸಿದ ಅಧಿಕಾರಿ ನಾಗೇಂದ್ರರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ರೈತ ರು ಇನ್ನು 20 ದಿನದೊಳಗೆ ಸಿಂಗಲ್ಫೇಸ್ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಎಚ್ಚರಿಕೆ ನೀಡಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ಕಳೆದ ನಾಲ್ಕು ದಿನಗಳಿಂದ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಗೆ ಕೂಡಲೇ ತಮ್ಮ ಲೈನ್‌ಮ್ಯಾನ್‌ಗಳ ಮೂಲಕ ಕಾರ್ಯ ಪ್ರವೃತ್ತರಾಗಿ ಬಗೆ ಹರಿಸುವಂತೆ ಪಟ್ಟು ಹಿಡಿದಾಗ ಸಂಜೆ ವೇಳೆಗೆ ವಿದ್ಯುತ್ ಪೂರೈಕೆ ಸರಾಗವಾಗಿ ಮುಂದುವರಿಯಿತು. ಸಿಂಗಲ್ಫೇಸ್ ವಿದ್ಯುತ್ ಸಮಸ್ಯೆ ಬಗೆ ಹರಿಸದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭುಸ್ವಾಮಿ, ಎಚ್.ಎನ್. ಸ್ವಾಮಿ, ಓ.ಸಿ.ಮಂಜು, ಮನು ಕಲ್ಚರ್, ಕುರಟ್ಟಿ ರವಿ, ಮಹೇಶ್, ಅಭಿ ಶ್ಯಾನುಭೋಗ್, ಶ್ರೀಧರ್, ನಿರಂಜನ್, ಮುದ್ದಪ್ಪ, ಸುದೀಪ್, ನಾಗೇ ಂದ್ರ, ಬಸವರಾಜಪ್ಪ, ಸಂತೋಷ್ ಸುಳಾನ್, ಭಗವಾ ನಿ ಶಿವಪ್ಪ, ಸೂಟು ನಂಜಪ್ಪ, ಕುಮಾರಸ್ವಾಮಿ, ಚಿನ್ನ ಸ್ವಾಮಿ, ಕಪಿಣ್ಣಿ ಮಂಜು, ಸ್ವಾಮೇಶ್ ಇದ್ದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು
Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು
Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ
Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.