![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 4, 2021, 12:08 PM IST
ಗುಂಡ್ಲುಪೇಟೆ: ಹುಲಿ ದಾಳಿಗೆ ಸಿಲುಕಿ ಮೂರು ಹಸು ಹಾಗೂ ಒಂದು ಕುರಿ ಸಾವನ್ನಪ್ಪಿರುವ ಘಟನೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಜರುಗಿದೆ. ವಡೆಯನಪುರ ಶಿವಪ್ರಸಾದ್ ತೋಟದ ಮನೆಯ ಬಳಿ ಬೊಮ್ಮಲಾಪುರ ಗ್ರಾಮದ ನಂದೀಶ್ ಅವರಿಗೆ ಸೇರಿದ ಮೂರು ಹಸು ಹಾಗೂ ಒಂದು ಹಸುವಿನ ಕರುವನ್ನು ಹುಲಿ ಸಾಯಿಸಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಎರಡು ತೆನೆ ಹಸು, ಒಂದು ಹಾಲು ಕೊಡುತ್ತಿದ್ದ ಹಸು, ಮತ್ತೂಂದು ಹಸುವಿನ ಕರು ಪ್ರಾಣ ಕಳೆದುಕೊಂಡಿವೆ. ಇದು ರೈತ ನಂದೀಶ್‌ಗೆ ನುಂಗಲಾರದ ತುತ್ತಾಗಿದೆ. ಹಸುಗಳು ಸಾವನ್ನಪ್ಪಿರುವ ಸ್ಥಳದ ಸುತ್ತ ಮುತ್ತ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಬೆಳಗ್ಗೆಯೇ ಹುಲಿ ದಾಳಿಗೆ ಜಾನುವಾರು ಸಾವ ನ್ನಪ್ಪಿರುವ ವಿಷಯ ತಿಳಿದರೂ ಅರಣ್ಯ ಇಲಾಖೆ ಅಧಿ ಕಾರಿಗಳು ಮಧ್ಯಾಹ್ನದ ತನಕ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:- ದಕ್ಷಿಣಾ ಆಫ್ರಿಕಾದ ಪ್ರಸಿದ್ಧ ಲೇಖಕ, ಕಾದಂಬರಿಕಾರ ಡೇಮನ್ ಕೃತಿಗೆ ಬೂಕರ್ ಪ್ರಶಸ್ತಿ ಗರಿ
ನಂತರಕ್ಕೆ ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಡಾ.ಎಸ್.ಎಸ್. ಲೋಕೇಶ್ ಅವರಿಗೆ ರೈತರು ಘೇರಾವ್ ಹಾಕಿದರು. ಗ್ರಾಮಸ್ಥರಲ್ಲಿ ಆತಂಕ: ಮಂಗಳವಾರ ತಡ ರಾತ್ರಿ ಒಂದೇ ವೇಳೆಯಲ್ಲಿ ನಾಲ್ಕು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿರುವ ಹಿನ್ನೆಲೆ ಸುತ್ತಮುತ್ತಲ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಜೊತೆಗೆ ಬೋನ್ ಇರಿಸಿ ಹುಲಿ ಸೆರೆಗೆ ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಒತ್ತಾಯ: ಹೈನುಗಾರಿಕೆಯಲ್ಲಿ ತೊಡಗಿದ್ದ ರೈತ ನಂದೀಶ್ ಅವರಿಗೆ ಹಸುಗಳೇ ಆಧಾರವಾಗಿದ್ದವು. ಇದೀಗ ಅವುಗಳು ಹುಲಿ ದಾಳಿಗೆ ಸಿಲುಕಿರುವ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರುಹಾರ ಶೀಘ್ರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು
Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು
Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ
Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
You seem to have an Ad Blocker on.
To continue reading, please turn it off or whitelist Udayavani.