![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 12, 2019, 3:48 PM IST
ತೆರಕಣಾಂಬಿ ಗ್ರಾಮದಲ್ಲಿ ಆರ್‌ಟಿಸಿ ಪಡೆಯಲು ಕಾದುನಿಂತಿರುವ ರೈತರು.
ಗುಂಡ್ಲುಪೇಟೆ: ಇಂಟರ್‌ನೆಟ್ ಸಮಸ್ಯೆ ಹಾಗೂ ವಿದ್ಯುತ್ ಕಡಿತದಿಂದಾಗಿ ಪಟ್ಟಣದ ಪಡಸಾಲೆ ಮತ್ತು ತಾಲೂಕಿನ ತೆರಕಣಾಂಬಿಯ ನಾಡಕಚೇರಿಯಲ್ಲಿ ಆರ್‌ಟಿಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸಕಾಲಕ್ಕೆ ಸಿಗದೆ ರೈತರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಕಂದಾಯ ಇಲಾಖೆಯ ಸೇವಾ ಕೇಂದ್ರಗಳಲ್ಲಿ ಕಳೆದ ಕೆಲವು ದಿನಗಳಿಂದ ಅಂತರ್ಜಾಲ ಸಂಪರ್ಕದ ಸಮಸ್ಯೆ ಎದುರಾಗಿದ್ದರಿಂದ ವಿವಿಧ ಉದ್ದೇಶಗಳಿಗೆ ರೈತರು ಆರ್‌ಟಿಸಿ ಪಡೆದುಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಅನಿವಾರ್ಯವಾಗಿ ಖಾಸಗಿ ಕಂಪ್ಯೂಟರ್ ಕೇಂದ್ರಗಳ ಮೊರೆಹೋಗಿ ದುಬಾರಿ ಬೆಲೆ ತೆತ್ತು ಆರ್‌ಟಿಸಿ ಪಡೆದು ಕೊಳ್ಳಬೇಕಾಗಿತ್ತು. ಆದರೆ ಇತ್ತೀಚೆಗೆ ಸರ್ವರ್ ಸಮಸ್ಯೆಯಿಂದ ಅಲ್ಲಿಯೂ ದೊರಕದೆ ಪರದಾಡುವಂತಾಗಿದೆ.
ಇಂಟರ್‌ನೆಟ್ ಸಂಪರ್ಕವಾಗಿ ದೊರೆತರೂ ಸಹ ಯುಪಿಎಸ್ ಕೆಟ್ಟುಹೋ ಗಿರುವ ಪರಿಣಾಮ ವಿದ್ಯುತ್ ಕಡಿತವಾದ ಸಂದರ್ಭದಲ್ಲಿಯೂ ಗಂಟೆಗಟ್ಟಲೆ ಕಾಯ ಬೇಕಾಗಿದೆ. ಬೆಳಗ್ಗೆ ಕಚೇರಿ ಬಾಗಿಲು ತೆರೆಯುವ ಮೊದಲೇ ಸರದಿಯಲ್ಲಿ ನಿಲ್ಲುವ ಸಾರ್ವಜ ನಿಕರು ಇಡೀ ದಿನ ಕಾದರೂ ತಮ್ಮ ಕೆಲಸಕಾರ್ಯ ಗಳಾಗದೆ ಹಿಂದಿರುಗ ಬೇಕಾ ಗಿದೆ. ಆದ್ದರಿಂದ ಇನ್ನಾದರೂ ಸಂಬಂಧ ಪಟ್ಟವರು ಸಕಾಲದಲ್ಲಿ ಆರ್‌ಟಿಸಿ, ಆದಾ ಯ ಹಾಗೂ ಜಾತಿ ಪ್ರಮಾಣ ಪತ್ರಗಳು ದೊರಕುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.