ಜಿಲ್ಲಾದ್ಯಂತ ರಾಷ್ಟ್ರಪಿತನಿಗೆ ಗೌರವಾರ್ಪಣೆ
Team Udayavani, Oct 3, 2019, 3:00 AM IST
ಚಾಮರಾಜನಗರ: ದಾಸ್ಯದಲ್ಲಿದ್ದ ದೇಶಕ್ಕೆ ಸತ್ಯ ಮತ್ತು ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ. ಅವರ ಮಾರ್ಗದಲ್ಲಿ ನಡೆದು ಅವರ ಕೊಡುಗೆಗಳನ್ನು ಪ್ರಚುರಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಆರ್. ಧ್ರುವನಾರಾಯಣ ಹೇಳಿದರು. ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಆಚರಣೆ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಅಹಿಂಸಾ ಚಳವಳಿ ಹುಟ್ಟು ಹಾಕಿದ ಗಾಂಧಿ: ಹರಿಶ್ಚಂದ್ರ ಚಿತ್ರವನ್ನು ಬಾಲ್ಯದಲ್ಲಿ ನೋಡಿ, ಅದರಿಂದ ಪ್ರಭಾವಿತರಾಗಿ ಸತ್ಯ ಮಾರ್ಗದಲ್ಲಿ ನಡೆದವರು ಗಾಂಧೀಜಿ. ಇಡೀ ಪ್ರಪಂಚಕ್ಕೆ ಅಹಿಂಸಾ ಚಳವಳಿಯನ್ನು ಹುಟ್ಟು ಹಾಕಿದವರೇ ಗಾಂಧೀಜಿಯವರು. ಪ್ರತಿಯೊಂದು ದೇಶವೂ ಗಾಂಧೀಜಿಯವರನ್ನು ಸ್ಮರಿಸುತ್ತದೆ ಎಂದರು.
ದೇಶ ವೇಗವಾಗಿ ಬೆಳಯಲು ಗಾಂಧಿ ಕಾರಣ: ಇಡೀ ದೇಶ ವೇಗವಾಗಿ ಬೆಳೆದು ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಮೂಲ ಕಾರಣೀಭೂತರು ಮಹಾತ್ಮ ಗಾಂಧೀಜಿಯ ವರು. ದೇಶದಲ್ಲಿ 40 ಕೋಟಿ ಇದ್ದ ಜನಸಂಖ್ಯೆ ಗಾಂಧೀಜಿಯವರು ಕರೆಕೊಟ್ಟರೆ ಒಗ್ಗಟ್ಟಾಗುತ್ತಿದ್ದರು. ಅತ್ಯಂತ ಶ್ರೀಮಂತ ವರ್ಗದಲ್ಲಿ ಜನಿಸಿದರೂ, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಮತ್ತು ಕಪ್ಪು ಜನರ ನಡುವೆ ಉಂಟಾಗಿದ್ದ ಸಂಘರ್ಷದ ವಿರುದ್ಧ ಹೋರಾಟ ಮಾಡಿದರು. ನಂತರ ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಮಹಾತ್ಮ ಗಾಂಧೀಜಿಯವರ ಇತಿಹಾಸವನ್ನು ತಿಳಿಸುವ ಕೆಲಸ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡುವ ಮೂಲಕ ಪಕ್ಷದ ಸಂಘಟಿಸಬೇಕಿದೆ ಎಂದರು.
ಪ್ರಮಾಣಿಕ ರಾಜಕಾರಣಿ ಶಾಸ್ತ್ರಿ: ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ಜೈ ಕಿಸಾನ್ ಮತ್ತು ಜೈ ಜವಾನ್ ಘೋಷಣೆ ಮೂಲಕ ರೈತರು ಸೈನಿಕರಿಗೆ ಆದ್ಯತೆ ನೀಡಿದರು. ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿ, ದೇಶದ ಮುನ್ನಡೆಗೆ ಅವರೂ ಪ್ರಮುಖ ಕಾರಣಕರ್ತರು ಎಂದು ಧ್ರುವ ಸ್ಮರಿಸಿದರು.
ಕೇಂದ್ರದಿಂದ ಮಲತಾಯಿ ಧೋರಣೆ: ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಪರಿಹಾರ ನೀಡದೇ ಕಡೆಗಣಿಸಿ, ಮಲತಾಯಿಧೋರಣೆ ಅನುಸರಿಸಿದೆ ಎಂದು ಟೀಕಿಸಿದರು.
ಆರ್ಥಿಕ ಹಿಂಜರಿತ: ಬಿಜೆಪಿ ಸರ್ಕಾರದ ನೋಟು ಅಮಾನ್ಯಿàಕರಣ, ಜಿಎಸ್‌ಟಿಯಿಂದ ದೇಶದ ಉದ್ಯೋಗ ರಂಗ, ಕೈಗಾರಿಕಾ ಕ್ಷೇತ್ರ ನಲುಗಿದೆ. ಆರ್ಥಿಕ ಹಿಂಜರಿತ ಉಂಟಾಗಿದೆ. ಕಾರ್ಖಾನೆಗಳು ಮುಚ್ಚುತ್ತಿವೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಮಹಾತ್ಮಗಾಂಧೀಜಿಯವರ ಕನಸುಗಳನ್ನು ನನಸು ಮಾಡಬೇಕಿದೆ. ಅಹಿಂಸಾ ತತ್ವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್‌ಪುರುಷರು. ಗ್ರಾಮ ಸ್ವರಾಜ್ ಕನಸು ಕಂಡಿದ್ದರು ಎಂದರು.
ವಿದೇಶಿ ವಸ್ತುಗಳ ತ್ಯಜಿಸಿ: ಹನೂರು ಶಾಸಕ ಆರ್.ನರೇಂದ್ರ ಗಾಂಧೀಜಿ ಹಾಗೂ ಲಾಲ್‌ಲಾಲ್‌ಬಹದ್ದೂರ್‌ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಗಾಂಧೀಜಿಯವರು ಹುಟ್ಟು ಹೋರಾಟಗಾರರು. ಅಹಿಂಸಾ ತತ್ವಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಚಳವಳಿ ಪ್ರಾರಂಭಿಸಿದರು. ವಿದೇಶಿವಸ್ತುಗಳನ್ನು ತ್ಯಾಗ ಮಾಡಿದರು. ವಿದೇಶಿ ಉಡುಪುಗಳನ್ನು ಸುಟ್ಟು ಖಾರಿ ಧರಿಸಿ ಎಲ್ಲ ಖಾದಿ ಬಟ್ಟೆ ಧರಿಸುವಂತೆ ಕರೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಮಹಾತ್ಮಗಾಂಧೀಜಿ ಹಾಗೂ ಲಾಲ್‌ಲಾಲ್‌ಬಹದ್ದೂರ್‌ಶಾಸ್ತ್ರಿಯವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಸನ್ಮಾನ: ಕಾಂಗ್ರೆಸ್ ಹಿರಿಯ ಮುಖಂಡರಾದ ಬೆಳ್ಳಪ್ಪ, ಪಟೇಲ್‌ಸಂಪತ್, ನಾರಾಯಣನಾಯಕ, ಮಹದೇವಶೆಟ್ಟಿ, ಜಿಯಾವುಲ್ಲಾ ಷರೀಫ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ಶ್ರೀಚಾಮರಾಜೇಶ್ವರ ದೇವಸ್ಥಾನ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಶಾಸಕರು, ಮಾಜಿ ಸಂಸದರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು ಸಂಸದ ಆರ್. ಧ್ರುವನಾರಾಯಣ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಭವನದಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಚರಕದ ಮೂಲಕ ನೂಲಲಾಯಿತು.
ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ಎಸ್.ಬಾಲರಾಜ್, ಜಿ.ಪಂ.ಉಪಾಧ್ಯಕ್ಷ ಕೆ.ಎಸ್.ಮಹೇಶ್ ಮಾತನಾಡಿದರು. ಮಾಜಿ ಶಾಸಕ ಎಸ್.ಜಯಣ್ಣ, ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ, ಮುಖಂಡರಾದ ಗಣೇಶ್‌ಪ್ರಸಾದ್, ಕೇತಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್.ಮಹದೇವು, ಚಿಕ್ಕಮಹದೇವು, ತಾ.ಪಂ.ಅಧ್ಯಕ್ಷೆ ದೊಡ್ಡಮ್ಮ, ಮಾಜಿ ಅಧ್ಯಕ್ಷ ಎಚ್.ವಿ.ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್‌ಅಸರ್, ಗುರುಸ್ವಾಮಿ, ತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಸೈಯದ್‌ರಫಿ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್‌ದೊರೈರಾಜ್, ಅರುಣ್‌ಕುಮಾರ್, ರಾಜು, ಕಾಗಲವಾಡಿಚಂದ್ರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.