ಸದ್ಯದಲ್ಲೇ ನಾಗರಿಕರ ಬಳಕೆಗೆ ಯುಜಿಡಿ
Team Udayavani, Aug 3, 2019, 3:00 AM IST
ಗುಂಡ್ಲುಪೇಟೆ: ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಒಳಚರಂಡಿ ಯೋಜನೆ ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಸಿಗಲಿದೆ. ಪಟ್ಟಣದ ಹೊರವಲಯದ ಹೊಸೂರು ಮತ್ತು ಕಲ್ಯಾಣಿಕೊಳದ ಬಳಿ ನಿರ್ಮಿಸಿರುವ ಮಲೀನ ನೀರು ಶುದ್ಧೀಕರಣ ಘಟಕ ಕಾಮಗಾರಿಯು ಅಂತಿಮಘಟ್ಟಕ್ಕೆ ತಲುಪಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.
ಪಟ್ಟಣದಲ್ಲಿ 2010ರಲ್ಲಿ ಒಳಚರಂಡಿ ಮಂಡಲಿ ವತಿಯಿಂದ ಯುಜಿಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕುಂಟುತ್ತಾ ತೆವಳುತ್ತಾ ಸುಮಾರು ಒಂಬತ್ತು ವರ್ಷಗಳ ಕಾಲ ನಡೆದ ಕಾಮಗಾರಿಯಲ್ಲಿ ಪಟ್ಟಣದ 23 ವಾರ್ಡುಗಳ ವ್ಯಾಪ್ತಿಯಲ್ಲಿಯೂ ಯುಜಿಡಿ ಚೇಂಬರ್ ಹಾಗೂ ಪೈಪ್ ಲೈನ್ ಕಾಮಗಾರಿ ಮುಕ್ತಾಯವಾಗಿದೆ.
6.4 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸೂರು ಹಾಗೂ ಕಲ್ಯಾಣಿಕೊಳದ ಸಮೀಪದಲ್ಲಿ 2 ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯ ಪಗ್ರತಿಯಲ್ಲಿದೆ. ಈಗಾಗಲೇ ಹೊಸೂರು ಘಟಕವು ಕಾರ್ಯಾರಂಭ ಮಾಡಿದೆ. ಇದರಿಂದಾಗಿ ಸದ್ಯದಲ್ಲೇ ಯುಜಿಡಿ ನಾಗರಿಕರ ಬಳಕೆಗೆ ದೊರೆಯಲಿದೆ.
ಈಗಾಗಲೇ ಸಿದ್ಧವಿರುವ ಹೊಸೂರು ಮತ್ತು ಪ್ರಗತಿಯಲ್ಲಿರುವ ಕಲ್ಯಾಣಿಕೊಳದ ಸಮೀಪದ ನಿರ್ಮಿಸಿರುವ ಮಲೀನ ನೀರು ಶುದ್ಧೀಕರಣ ಘಟಕವನ್ನು ಹಸ್ತಾತರಿಸಿಕೊಳ್ಳುವಂತೆ ಒಳಚರಂಡಿ ಮಂಡಲಿ ಹೇಳುತ್ತಿದೆ. ಹಲವು ಬಡಾವಣೆಗಳಲ್ಲಿ ಈಗಾಗಲೇ ಸಂಪರ್ಕ ನೀಡಲಾಗಿದೆ. ತಗ್ಗುಪ್ರದೇಶದ ಚೇಂಬರ್‌ಗಳಿಂದ ಮಲೀನ ನೀರು ರಸ್ತೆಗೆ ಹೊರಬರುತ್ತಿದೆ.
ಹೀಗೆ ಹದಗೆಟ್ಟಿರುವ ಒಳಚರಂಡಿ ಪೈಪ್‌ಲೈನ್ ಹಾಗೂ ದುರಸ್ತಿಗೊಳಗಾಗಿರುವ ಯುಜಿಡಿ ಚೇಂಬರ್‌ಗಳನ್ನು ಸರಿಪಡಿಸಿಕೊಡುವಂತೆ ಒಳಚರಂಡಿ ಮಂಡಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಪಟ್ಟಣದ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿರುವ ಪುರಸಭೆಯು ಹೆಚ್ಚುವರಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಾರ್ಯನಿರ್ವಹಣೆ ಹೇಗೆ: ಎಲ್ಲಾ ವಾರ್ಡುಗಳಿಂದಲೂ ಘಟಕಕ್ಕೆ ಹರಿದುಬರುವ ನೀರು ನಾಲ್ಕು ಬೃಹತ್ ತೊಟ್ಟಿಗಳಲ್ಲಿ ಹಾದುಬರುತ್ತದೆ. ಮೊದಲ ಹಂತದ ಸ್ಕಿÅàನಿಂಗ್ ತೊಟ್ಟಿಯಲ್ಲಿ ಪ್ಲಾಸ್ಟಿಕ್, ಕಸಕಡ್ಡಿ ಹಾದೂ ಘನತ್ಯಾಜ್ಯವನ್ನು ಬೇರ್ಪಡಿಸಿ ಉಳಿದ ಪ್ರತಿ ತೊಟ್ಟಿಗಳಲ್ಲಿ ಮರಳು ಮಣ್ಣು ಮಿಶ್ರಿತವಾಗಿ ಹರಿಯುವುದರಿಂದ ತ್ಯಾಜ್ಯ ನೀರಿನ ತೀವ್ರತೆಯನ್ನು ದುರ್ಬಲಗೊಳಿಸಿ ನಂತರ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಂತರ ಕೃಷಿ ಚಟುವಟಿಕೆಗೆ ಉಪಯೋಗಿಸಲಾಗುವುದು.
ಈಗಾಗಲೇ ಹೊಸೂರು ಬಡಾವಣೆಯ ಘಟಕ ಕಾರ್ಯಾರಂಭ ಮಾಡಿದೆ. ಆದರೆ ಕಲ್ಯಾಣಿಕೊಳದ ಸಮೀಪದಲ್ಲಿರುವ ಘಟಕದ ಕೆಲಸ ಪ್ರಗತಿಯಲ್ಲಿದೆ. ಬೆಳೆಯುತ್ತಿರುವ ಪಟ್ಟಣದ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಹೊಣೆ ಹೊತ್ತ ಪುರಸಭೆಯು ಈಗಾಗಲೇ ಯುಜಿಡಿ ಬಳಕೆಗೆ ಅವಕಾಶ ಮಾಡಿದೆ. ಆದರೂ ಸಹ ಸಮರ್ಪಕವಾಗಿ ಮಲೀನ ನೀರು ಹರಿದು ಹೋಗುತ್ತಿಲ್ಲ. ಪೈಪ್‌ಲೈನ್‌ಗಳ ದುರಸ್ತಿ ನಡೆಯಬೇಕು ಮತ್ತು ಘಟಕ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಅದಾದ ನಂತರ ಯುಜಿಡಿ ಸೌಲಭ್ಯ ಸಂಪೂರ್ಣವಾಗಿ ಸಿಗಲಿದೆ.
-ಎ.ರಮೇಶ್, ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.