ಈ ಬಾರಿಯೂ ನಡೆಯದ ದೊಡ್ಡ ಜಾತ್ರೆ: ಬಿಳಿಗಿರಿ ರಂಗನಾಥಸ್ವಾಮಿ
Team Udayavani, Apr 21, 2019, 3:00 AM IST
ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿ ದೊಡ್ಡ ರಥ ಶಿಥಿಲವಾಗಿರುವುದು ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿಯೂ ದೊಡ್ಡ ಜಾತ್ರೆ ನಡೆಯಲಿಲ್ಲ.
ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವಸ್ಥಾನದ ಮುಂದೆ ಬಾಲಾಲಯದಲ್ಲಿ ಸ್ಥಾಪಿಸಲಾಗಿರುವ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.
ಬಾಲಾಲಯದಲ್ಲಿ ಇರುವ ಮರದಿಂದ ಮಾಡಿರುವ ಮೂರ್ತಿಗಳು ಹಾಗೂ ದೇಗುಲದ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಬಿಳಿಗಿರಂಗನ ದಾಸಯ್ಯರು ತಮ್ಮ ಶಂಖ, ಜಾಗಟೆಗಳನ್ನು ಬಾರಿಸಿ ಭೋಪರಾಕ್ ಸೇವೆಯನ್ನು ಮಾಡಿ ಪುನೀತರಾದರು. ಯಳಂದೂರು ಪಟ್ಟಣದಿಂದ ಇದಕ್ಕಾಗಿ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಬಸ್‌ಗಳ ಸೌಲಭ್ಯ ಮಾಡಲಾಗಿತ್ತು.
ನಡೆಯದ ಜಾತ್ರೆ ಭಕ್ತರ ಅಳಲು: ನೂರಾರು ವರ್ಷಗಳ ಐತಿಹ್ಯರುವ ದೇಗುಲದಲ್ಲಿ ಕಳೆದ 3 ವರ್ಷಗಳಿಂದ ದೊಡ್ಡ ಜಾತ್ರೆಯ ಸಂಭ್ರಮ ನಡೆಯುತ್ತಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ. ತೇರು ಶಿಥಿಲವಾಗಿದ್ದು ಹೊಸ ರಥ ನಿರ್ಮಾಣಕ್ಕೆ ಈಗಾಗಲೇ 99 ಲಕ್ಷ ರೂ ಹಣ ಬಿಡುಗಡೆಯಾಗಿದೆ.
ಆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದಕ್ಕೆ ಇನ್ನೂ ಚಾಲನೆ ನೀಡಿಲ್ಲ. ಟೆಂಡರ್ ಪ್ರತಿಕ್ರಿಯೆ ಮುಗಿದ್ದು ಕಾಮಗಾರಿ ಆರಂಭಗೊಂಡಿರುವ ಬಗ್ಗೆ ಮಾಹಿತಿಯೇ ಇಲ್ಲ. ಪ್ರ
ತಿ ವರ್ಷವೂ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯುವ ಈ ತೇರನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಈ ಸಂಭ್ರಮ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಭಕ್ತರಾದ ಹೊಂಗನೂರು ಶಿವಕುಮಾರ, ಇರಸವಾಡಿ ಮಹೇಶ ರವರು ತಮ್ಮ ಅಳಲು ತೋಡಿಕೊಂಡರು.
ನಮ್ಮ ಮನೆ ದೇವರು ಬಿಳಿಗಿರಿಂಗನಾಥಸ್ವಾಮಿ ಪ್ರತಿ ವರ್ಷವೂ ನಾವು ತೇರಿಗೆ ಬಂದು ಪೂಜೆ ಸಲ್ಲಿಸಿ ಅರವಟ್ಟಿಗೆ ಮಾಡಿ ಪ್ರಸಾದ ನಿಯೋಗಿಸಿ, ಉತ್ಸವ ಮೂರ್ತಿಗೆ ಶೇಷ ಪೂಜೆ ಸಲ್ಲಿಸುವ ವಾಡಿಕೆ ಇದೆ. ಆದರೆ ಕಳೆದ 3 ವರ್ಷದಿಂದ ರಥೋತ್ಸವ ನಿಂತಿದೆ.
ಆದರೂ ನಾವು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಅರವಟ್ಟಿಗೆ ಸೇವಾ ಕೈಂಕರ್ಯ ಕೈಗೊಂಡಿದ್ದೇವೆ. ಮುಂದಿನ ವರ್ಷವಾದರೂ ತೇರು ನಡೆಬೇಕು ಎಂಬುದು ನಮ್ಮ ಬೇಡಿಕೆ ಎಂದು ಬೆಂಗಳೂರಿನ ವಿಷ್ಣುಪ್ರಸಾದ್, ಶಾರದಾಂಬ ಮನವಿ ಮಾಡಿದರು.
ನೀರಿಗೆ ತೊಂದರೆ: ಗುರುವಾರ ಸಂಜೆ ಜೋರು ಗಾಳಿ ಮಳೆ ಬೆಟ್ಟದಲ್ಲಿ ಸುರಿದಿದ್ದರಿಂದ ಮರ ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಯಿತು.
ದೇಗುಲದ ವತಿಯಿಂದ ಬರುವ ಭಕ್ತರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಯಿತು. ಸ್ಥಳೀಯ ಗ್ರಾಮ ಪಂಚಾಯಿತಿಯು ಶುಕ್ರವಾರ ಮದ್ಯಾಹ್ನ 12 ಗಂಟೆಗೆ ವಿದ್ಯುತ್ ಬಂದ ನಂತರ ಟ್ಯಾಂಕ್ ಹಾಗೂ ನೀರಿನ ತೊಂಬೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.