ಉಪಯೋಗಕ್ಕೇ ಬಾರದ ನೀರಿನ ಘಟಕ
ನೀರಿನ ಘಟಕ ಕೆಟ್ಟು ತಿಂಗಳುಗಳೇ ಕಳೆದರೂ ಇತ್ತ ಗಮನಹರಿಸದ ಅಧಿಕಾರಿಗಳು
Team Udayavani, Jun 14, 2019, 9:04 AM IST
ಹನೂರು ಪಟ್ಟಣದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ.
ಹನೂರು:ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಕ್ಕ- ಪಕ್ಕದ ಗ್ರಾಮದಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ, ಬಸ್ ಪ್ರಯಾಣಿಕರಿಗಾಗಿ ಮತ್ತು ಸ್ಥಳೀಯ ವರ್ತಕರು ಮತ್ತು ಪಟ್ಟಣವಾಸಿಗಳ ಅನು ಕೂಲಕ್ಕಾಗಿ ಪಟ್ಟಣ ಪಂಚಾಯಿತಿಯಿಂದ ತೆರೆಯ ಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವ ಜನಿಕರ ಉಪಯೋಗಕ್ಕೆ ಬಾರದೆ ದುರಸ್ತಿಗೊಂಡಿದೆ.
ಪಟ್ಟಣ ಪಂಚಾಯಿತಿ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವ ಕಾಮಗಾರಿ ಕೈಗೆತ್ತಿಕೊಂಡು ಪರಂ ಎನ್ವೈರೋ ಎಂಜಿನಿಯರ್ ಸಂಸ್ಥೆಗೆ ನಿಯಮಾನುಸಾರ ಕಾಮಗಾರಿಯ ಹೊಣೆ ನೀಡಲಾಗಿತ್ತು. ಬಳಿಕ ಕಾಮಗಾರಿ ಪೂರ್ಣಗೊಂಡು 2018ರ ಏಪ್ರಿಲ್ ತಿಂಗಳಿನಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿತ್ತು.
ಈ ಘಟಕದಿಂದ ಸಾರ್ವಜನಿಕರು 1 ರೂ. ನಾಣ್ಯ ಹಾಕಿ 2 ಲೀ ಶುದ್ಧ ಕುಡಿಯುವ ನೀರು ಪಡೆ ಯುತ್ತಿ ದ್ದರು. ಆರಂಭದಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಘಟಕ ನಿರ್ವಹಣೆ ಕೊರತೆಯಿಂದಾಗಿ ಕಳೆದ 14 ತಿಂಗಳ ಅವಧಿಯಲ್ಲಿ ಸರಿ ಸುಮಾರು 6 ತಿಂಗಳು ದುರಸ್ತಿಗೊಂಡು ಸಾರ್ವಜನಿಕರ ಉಪಯೊ ೕಗಕ್ಕೆ ಬಾರದಂತಾಗಿದೆ. ಹಿಂದೊಮ್ಮೆ ದುರಸ್ತಿಗೊಂಡು ತಿಂಗಳುಗಳೇ ಕಳೆದ ಬಳಿಕ ದುರಸ್ತಿಪಡಿಸಲಾಗಿತ್ತು. ಇದೀಗ ಮತ್ತೂಮ್ಮೆ ಹಾಳಾಗಿದ್ದು 2 ತಿಂಗಳುಗಳು ಕಳೆಯುತ್ತಿದ್ದರೂ ರಿಪೇರಿ ಕಾರ್ಯಕ್ಕೆ ಮುಂದಾಗದಿ ರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದುಬಾರಿ ಹಣ ತೆರುತ್ತಿರುವ ಸಾರ್ವಜನಿಕರು: ಪಟ್ಟಣಕ್ಕೆ ಆಗಮಿಸುತ್ತಿದ್ದ ಇತರೆ ಸಾರ್ವಜನಿಕರು, ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು 1 ರೂ. ನಾಣ್ಯ ಹಾಕಿ 2 ಲೀ. ನೀರು ಪಡೆಯುತ್ತಿದ್ದರು. ಈಗ ಘಟಕ ಸ್ಥಗಿತಗೊಂಡಿರುವುದರಿಂದ ಬಸ್ ಪ್ರಯಾಣಿ ಕರು ನೀರಿನ ದಾಹವಾದಲ್ಲಿ 1ಲೀಟರ್ ನೀರಿಗೆ 20 ರೂ. ನೀಡಿ ಖರೀದಿಸಬೇಕಾದಂತಹ ಪರಿಸ್ಥಿತಿಯಿದೆ. ಇನ್ನು ಸ್ಥಳೀಯರು 10 ನಾಣ್ಯ ಹಾಕಿ 20 ಲೀಟರ್ ನೀರು ಪಡೆಯುತ್ತಿದ್ದರೂ ಆದರೆ ಈಗ ಹೆಚ್ಚಿನ ಬೆಲೆ ತೆತ್ತು ಖಾಸಗಿ ಘಟಕಗಳಿಂದ ಅಥವಾ ಇನ್ನಿತರ ಸಂಸ್ಥೆ ಗಳಿಂದ ನೀರು ಖರೀದಿಸಬೇಕಾದ ಪರಿಸ್ಥಿತಿಯಿದೆ.
2 ವರ್ಷ ನಿರ್ವಹಣೆ ಮಾಡಬೇಕಿತ್ತು: ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯ ಹೊಣೆ ಹೊತ್ತ ಪರಂ ಎನ್ವೈರೋ ಎಂಜಿನಿಯರ್ ಸಂಸ್ಥೆ ನಿಯಮಾನುಸಾರ 2 ವರ್ಷಗಳ ಕಾಲ ಘಟಕವನ್ನು ನಿರ್ವಹಣೆ ಮಾಡಬೇಕು. ಆದರೆ ದುರಸ್ತಿಗೊಂಡು ತಿಂಗಳುಗಳೇ ಕಳೆದರೂ ಇತ್ತ ಗಮನಹರಿಸದೆ ಇರು ವುದು ಮತ್ತು ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾ ರಿಗಳು ತಿಳಿದು ತಿಳಿಯದಂತಿರುವುದನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿಯವರಿಗೆ ವಹಿಸಿ: ಘಟಕದ ನಿರ್ವಹಣೆಗಾಗಿ ಓರ್ವ ನೌಕರನ ಅವಶ್ಯಕತೆಯಿದೆ. ಅಲ್ಲದೆ ಘಟಕದ ನಿರ್ಬಹಣೆ ಮತ್ತು ಆಗು ಹೋಗುಗಳ ಬಗ್ಗೆ ಮೇಲುಸ್ತುವಾರಿ ವಹಿಸಲು ಪಟ್ಟಣ ಪಂಚಾಯಿತಿ ಕ್ರಮವಹಿಸಿಲ್ಲ. ಆದ್ದರಿಂದ ಈ ಘಟಕವನ್ನೂ ಕೂಡ ಖಾಸಗಿ ಸಂಘ ಸಂಸ್ಥೆಗೆ ವಹಿಸಿಕೊಟ್ಟಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಸಭೆಯಲ್ಲಿಯೂ ಕೂಡ ಪ್ರಸ್ತಾವನೆ ಮಂಡಿಸಲಾಗಿದ್ದು ಕೂಡಲೇ ಅಧಿಕಾರಿಗಳು ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
● ವಿನೋದ್ ಎನ್, ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.