ಸ್ಥಳೀಯರಿಗೆ ಅಂಗನವಾಡಿ ಹುದ್ದೆ ನೀಡಲು ಒತ್ತಾಯ
Team Udayavani, May 1, 2022, 1:41 PM IST
ಯಳಂದೂರು: ಅಂಗನವಾಡಿ ಕಾರ್ಯ ಕರ್ತೆಯನ್ನು ಸ್ಥಳೀಯರಿಗೆ ನೀಡ ಬೇಕೆಂದು ಆಗ್ರಹಿಸಿ ತಾಲೂಕಿನ ಮೆಳ್ಳಹಳ್ಳಿ ಗ್ರಾಮಸ್ಥರು ಶನಿವಾರ ಅಂಗನವಾಡಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, ಸಿಡಿಪಿಒ ಹಾಗೂ ಕಚೇರಿಯ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಈ ಕೇಂದ್ರದಲ್ಲಿ ಕಳೆದ ವರ್ಷ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಮ್ಮ ನಿವೃತ್ತಿ ಹೊಂದಿದರು. ಇಲ್ಲಿಗೆ ದೂರದ ಅಂಬಳೆ ಗ್ರಾಪಂ ವ್ಯಾಪ್ತಿಗೆ ಸೇರುವ ಕಾರ್ಯಕರ್ತೆಗೆ ನೇಮಕ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ 3 ಕಿ.ಮೀ. ಒಳಗಿನ ಮಹಿಳೆಯನ್ನೇ ಕಾರ್ಯಕರ್ತೆಯಾಗಿ ನೇಮಿಕಸಬೇಕೆಂಬ ನಿಯಮವಿದೆ. ಈ ನಿಯಮ ಗಾಳಿಗೆ ತೂರಲಾಗಿದೆ. ಅಂಬಳೆ ಗ್ರಾಪಂ ವ್ಯಾಪ್ತಿಯ ಇಲ್ಲಿಗೆ ಐದು ಕಿ.ಮೀ. ಗೂ ಹೆಚ್ಚು ದೂರದಿಂದ ಬರುವ ಮಹಿಳೆಗೆ ಈ ಹುದ್ದೆಗೆ ನೇಮಿಸಿ ಕೊಳ್ಳ ಲಾಗಿದ್ದು ಇಲಾಖೆಯ ಅಧಿಕಾರಿಗಳು ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಸಿಡಿಪಿಒ ಹಾಗೂ ಡಿಡಿ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಮನವಿಯನ್ನು ಮಾಡಲಾಗಿದೆ. ಕೂಡಲೇ ಸ್ಥಳೀಯರನ್ನು ಇಲ್ಲಿಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಟನೆ ನಡೆಸಿದರು.
ಸಿಡಿಪಿಒಗೆ ಘೇರಾವ್: ಸ್ಥಳಕ್ಕೆ ಸಿಡಿಪಿಒ ಸೋಮಶೇಖರ್ ಹಾಗೂ ಮೇಲ್ವಿಚಾರಕಿ ಸರಸ್ವತಿ ಭೇಟಿ ನೀಡಿದರು. ಈ ಸಂದರ್ಭ ದಲ್ಲಿ ಗ್ರಾಮಸ್ಥರು ಘೇರಾವ್ ಮಾಡಿದರು. ಸಿಡಿಪಿಒ ಸೋಮಶೇಖರ್ ಮಾತ ನಾಡಿ, ಈಗಿರುವ ಕಾರ್ಯಕರ್ತೆಯನ್ನು ಬೇರೆಡೆ ವರ್ಗಾವಣೆ ಮಾಡಲು ಪತ್ರ ಬರೆಯಲಾಗಿದೆ. ತಕ್ಷಣಕ್ಕೆ ದುಗ್ಗಹಟ್ಟಿ ಕಾರ್ಯಕರ್ತೆಯನ್ನು ಇಲ್ಲಿಗೆ ನೇಮಿಸಿ ಮುಂದಿನ ದಿನಗಳಲ್ಲಿ ಸರ್ಕಾರಿ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯ ಮಾಲತಿ, ಕೆಂಪರಾಜು, ಚಿಕ್ಕತಾಯಮ್ಮ ಮುಖಂಡ ರಾದ ನಟರಾಜು, ಮಾದಪ್ಪನಾಯಕ, ದುಂಡಯ್ಯ, ಬಸವರಾಜು, ಮಹದೇವನಾಯಕ, ಬಸವಣ್ಣ, ಗೀತಾ ಸೇರಿದಂತೆ ಅನೇಕರು ಇದ್ದರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.