ಉರುಕಾತೇಶ್ವರಿ ಟ್ರಸ್ಟ್ ವಜಾ : ದೇವಿ ದೇಗುಲ ಮುಜರಾಯಿ ಇಲಾಖೆ ವಶಕ್ಕೆ
Team Udayavani, Mar 24, 2022, 4:18 PM IST
ಚಾಮರಾಜನಗರ : ತಾಲೂಕಿನ ಉಮ್ಮ ತ್ತೂರು ಉರುಕಾತೇಶ್ವರಿ ದೇವಸ್ಥಾನವನ್ನು ಸರ್ಕಾರ ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಿರುವುದು ನಮಗೆಲ್ಲ ಸಂತೋಷ ತಂದಿದೆ ಎಂದು ಗ್ರಾಮದ ವಿವಿಧ ಸಮಾಜದ ಮುಖಂಡರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ವಿವಿಧ ಸಮುದಾಯದ ಮುಖಂಡರಾದ ಎಸ್. ಬಸವನಾಯಕ, ಎಸ್. ಪ್ರಭುಸ್ವಾಮಿ, ಪುಟ್ಟಸ್ವಾಮಿ, ಬಿ.ಪುಟ್ಟಣ್ಣ ಮಾತನಾಡಿ, ಪ್ರಸಿದ್ಧ ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ದೇವಸ್ಥಾನವನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಅಧಿಕೃತವಾಗಿ ಸೇರ್ಪಡೆ ಮಾಡಿ, ಮಾ.10 ರಂದು ಅದೇಶ ನೀಡಿದೆ. ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ್ ಅನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು. ಮೂರು ದಿನಗಳ ಕಾಲ ಜಾತ್ರೆ:1954ರಲ್ಲಿ
ಉರುಕಾತೇಶ್ವರಿ ದೇವಸ್ಥಾನದ ವಿವಾದವು ನಂಜನಗೂಡು ನ್ಯಾಯಾಲಯಾದಲ್ಲಿ ಇತ್ತು.
ನ್ಯಾಯಾಧೀಶರು ಈ ಪ್ರಕರಣದಲ್ಲಿ ದೇವಸ್ಥಾನವನ್ನು ಗ್ರಾಮದ ವೀರಶೈವ ಮುಖಂಡರು ನಿರ್ವಹಣೆ ಮಾಡಬೇಕು. ಇನ್ನುಳಿದ ಜಾತ್ರೆ ಹಾಗೂ ಪೂಜಾ ಕೈಂಕರ್ಯ ಗಳಲ್ಲಿ ಎಲ್ಲಾ ಜನಾಂಗದವರು ಭಾಗವಹಿಸಿ, ಸೌಹಾರ್ದತೆಯಿಂದ ನಡೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಅಂದಿನಿಂದ ಗ್ರಾಮದಲ್ಲಿ ಪ್ರತಿ ವರ್ಷ
ಡಿಸೆಂಬರ್‌ನಲ್ಲಿ ಬಂಡಿ ಹಬ್ಬ ಹಾಗೂ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಯಾಗಿ ಜಾತ್ರೆ ನಡೆಯುತ್ತಿತ್ತು ಎಂದರು.
ದೇವಸ್ಥಾನದ ಸಂಪೂರ್ಣ ಹಿಡಿತವನ್ನು ಸಾಧಿಸಲು ಸಂಚು: ಇತ್ತೀಚೆಗೆ 2014 ರಲ್ಲಿ ಗ್ರಾಮದ ಲಿಂಗಾಯತ ಸಮಾಜದ 10- 15 ಮಂದಿ ಸೇರಿಕೊಂಡು ಗ್ರಾಮದಲ್ಲಿ ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ಸೇವಾ ಸಮಿತಿಯನ್ನು ರಚನೆ ಮಾಡಿಕೊಂಡು ದೇವಸ್ಥಾನದ ಸಂಪೂರ್ಣ ಹಿಡಿತವನ್ನು ಸಾಧಿಸಲು ಮುಂದಾಗಿದ್ದರು. ಇದರ ವಿರುದ್ಧ ಗ್ರಾಮದ ವೀರಶೈವ ಲಿಂಗಾಯತರು
ಸೇರಿದಂತೆ ಎಲ್ಲಾ ಜನಾಂಗದದವರು ವಿರೋಧ ವ್ಯಕ್ತಪಡಿಸಿ, ಟ್ರಸ್ಟ್ ರಚನೆಯ ವಿರುದ್ಧ ಪ್ರತಿಭಟನೆ, ಹೋರಾಟ ಹಾಗೂ ಟ್ರಸ್ಟ್ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದ್ದರು.
ಇದರ ವಿರುದ್ಧ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಹೂಡಲಾಗಿತ್ತು. ಹೈಕೋರ್ಟ್ ಪ್ರಕರಣವನ್ನು ರಾಜ್ಯ ಸರ್ಕಾರಕ್ಕೆ ವರ್ಗಾವಣೆ ಮಾಡಿ, ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನು ನೀಡಿತ್ತು.
ಸುಳ್ವಾಡಿ ಪ್ರಕರಣ ಉಲ್ಲೇಖ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಟ್ರಸ್ಟ್ ರಚನೆ ಸಂಬಂಧ ನಡೆದ ವೈಷಮ್ಯದಿಂದಾಗಿ ದುರಂತ
ನಡೆದಿರುವ ಬಗ್ಗೆ ಉಮ್ಮತ್ತೂರು ಗ್ರಾಮಸ್ಥರು ಹೇಳಿಕೆಯಲ್ಲಿ ದಾಖಲು ಮಾಡಿದ್ದರು. ಟ್ರಸ್ಟ್ ಮುಂದುವರಿದರೆ, ಉಮ್ಮತ್ತೂರು ಗ್ರಾಮವು ಮತ್ತೂಂದು ಸುಳ್ವಾಡಿ ಪ್ರಕರಣ ಮರುಕಳಿಸಲಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಮುಜರಾಯಿ ಇಲಾಖೆಗೆ ಸೇರಿಸಿ ಎಂಬ ಒತ್ತಾಯಗಳು ಬಲವಾಗಿ ಕೇಳಿ ಬಂದಿತ್ತು. ಈ ದೇವಸ್ಥಾನವನ್ನು ಮುಜಾರಾಯಿಗೆ ಇಲಾಖೆ ಪಡೆದುಕೊಳ್ಳಲು
ಪ್ರಮುಖ ಕಾರಣವಾಗಿದೆ ಎಂದು ಬಸವನಾಯಕ ತಿಳಿಸಿದರು.
ಮುಜರಾಯಿ ಇಲಾಖೆಗೆ
ಸೇರ್ಪಡೆಗೊಳಿಸುವ ನಮ್ಮ ಹೋರಾಟದಲ್ಲಿ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತ, ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಸಮಸ್ತರಿಗೂ ಉಮ್ಮತ್ತೂರು ಗ್ರಾಮಸ್ಥರಾದ ನಾವುಗಳು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ನಿಂಗಶೆಟ್ಟಿ, ರಾಜಶೆಟ್ಟಿ, ಶಿವರಾಜು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.