ಮೊದಲ ದಿನ 683 ಮಹಿಳೆಯರಿಗೆ ಲಸಿಕೆ
Team Udayavani, Jun 15, 2021, 5:48 PM IST
ಚಾಮರಾಜನಗರ: ಆದ್ಯತಾ ವಲಯದಮಹಿಳೆಯರಿಗೆ ಲಸಿಕೆ ನೀಡುವಸಲುವಾಗಿ ಸೋಮವಾರಜಿಲ್ಲೆಯಾದ್ಯಂತೆ ವ್ಯವಸ್ಥೆ ಮಾಡಲಾಗಿದ್ದಪಿಂಕ್ ಬೂತ್‌ಗಳಲ್ಲಿ ಜಿಲ್ಲೆಯ 683ಮಹಿಳೆಯರು ಲಸಿಕೆ ಪಡೆದಿದ್ದಾರೆ.
ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಇನ್ನಷ್ಟು ಬಿರುಸುಗೊಳಿಸುವ ಸಲುವಾಗಿಸೋಮವಾರ ಜಿಲ್ಲೆಯಲ್ಲಿ ಆದ್ಯತಾವಲಯದ ಮಹಿಳೆಯರಿಗಾಗಿಯೆ ಕೋವಿಡ್ ಲಸಿಕೆ ಪಡೆಯಲು ವಿಶೇಷವಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪಿಂಕ್ ಬೂತ್ ಗಳನ್ನುತೆರೆಯಲಾಗಿತ್ತು. ಚಾಮರಾಜನಗರ ತಾಲೂಕಿನಲ್ಲಿ 361 ಮಂದಿ, ಯಳಂದೂರು ತಾಲೂಕಿನಲ್ಲಿ 53, ಕೊಳ್ಳೇಗಾಲ ತಾಲೂಕಿನಲ್ಲಿ 82, ಗುಂಡ್ಲುಪೇಟೆ ತಾಲೂಕಿನಲ್ಲಿ 187 ಮಂದಿಮಹಿಳೆಯರು ಲಸಿಕೆಪಡೆದುಕೊಂಡರು.
ಚಾಮರಾಜನಗರದ ಜಿಲ್ಲಾ ಆಸ್ಪತ್ರೆ, ಗುಂಡ್ಲುಪೇಟೆ, ಯಳಂದೂರು ತಾಲೂಕು ಆಸ್ಪತ್ರೆಯ ಲಸಿಕಾ ಕೇಂದ್ರ, ಕೊಳ್ಳೇಗಾಲದ ವಾಸವಿ ಮಹಲ್ ನಲ್ಲಿ ಮಹಿಳೆಯರಿಗಾಗಿಯೇ ಕೋವಿಡ್‌ಲಸಿಕೆ ಪಡೆಯಲು ವಿಶೇಷ ಕೋವಿಡ್ ಲಸಿಕಾ ಪಿಂಕ್ ಬೂತ್ ತೆರೆಯಲಾಗಿತ್ತು. ಈ ವಿಶೇಷ ಲಸಿಕಾ ಕೇಂದ್ರಗಳದ್ವಾರದಲ್ಲಿ ಪಿಂಕ್ ಬಲೂನುಗಳ ಕಮಾನು ಹಾಕಲಾಗಿತ್ತು. ಜಿಲ್ಲಾ ಕೇಂದ್ರದಸೇಂಟ್ ಜೋಸೆಫ್ ಶಾಲೆ ಲಸಿಕಾಕೇಂದ್ರದಲ್ಲಿ ಲಸಿಕಾಧಿಕಾರಿ ಡಾ.ವಿಶ್ವೇಶ್ವರಯ್ಯ, ನಗರಸಭೆ ಅಧ್ಯಕ್ಷೆ ಆಶಾನಟರಾಜು, ಅಧಿಕಾರಿಗಳಾದ ಡಾ.ಗಿರಿಜಾ, ಶರವಣ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.