Wayanad; ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತ್ಯು

ಕೆ.ಆರ್.ಪೇಟೆ ಮೂಲದ ಮಹಿಳೆ ಗಂಭೀರ.. ಮಗು ಸೇರಿ ಕುಟುಂಬದ ಇಬ್ಬರು ನಾಪತ್ತೆ

Team Udayavani, Jul 31, 2024, 12:16 PM IST

1-kkk

ಚಾಮರಾಜನಗರ/ಮಂಡ್ಯ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತಪಟ್ಟಿದ್ದು, ಕೆ.ಆರ್.ಪೇಟೆ ಮೂಲದ ಮಹಿಳೆಯ ಮಗು ಸೇರಿ ಇಬ್ಬರು ನಾಪತ್ತೆಯಾಗಿದ್ದು, ಕುಟುಂಬದ ಮೂವರು ಆಸ್ಪತ್ರೆಯಲ್ಲಿದ್ದಾರೆ.

ವಯನಾಡಿನ ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಶೆಟ್ಟಿ (62) ಹಾಗೂ (55), ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ, ವಯ ನಾಡು ಜಿಲ್ಲೆಯಲ್ಲಿ ವಾಸವಿದ್ದ ರಾಜೇಂದ್ರ (50), ರತ್ನಮ್ಮ (45) ಮೃತ ದುರ್ದೈವಿಗಳು. ಈ ಪೈಕಿ ರಾಜೇಂದ್ರ, ರತ್ನಮ್ಮ ಮೃತ ದೇಹ ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ತೆರಳಿದ್ದು, ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಪುಟ್ಟಸಿದ್ದಶೆಟ್ಟಿ ಹಾಗೂ ಚಾಮರಾಜನಗರದವರಾಗಿದ್ದು ಅನೇಕ ವರ್ಷಗಳಿಂದ ಮೇಪ್ಪಾಡಿ ಪ್ರದೇಶದಲ್ಲಿ ನೆಲೆಸಿದ್ದರೆಂದು ತಿಳಿದುಬಂದಿದೆ. ರಾಜೇಂದ್ರ ಮತ್ತು ರತ್ನಮ್ಮ ಕೆಲ ವರ್ಷಗಳ ಹಿಂದೆ ನಾಗವಳ್ಳಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದು ಕೆಲಸಕ್ಕಾಗಿ ಕೇರಳಕ್ಕೆ ತೆರಳಿದ್ದರು. ಚಾಮರಾಜನಗರದ ಉಪ್ಪಾರ ಬೀದಿಯ ನಿವಾಸಿಗಳಾಗಿದ್ದು ಚೂಲರ್ ಮಲಾ ದಲ್ಲಿ ಉದ್ಯೋಗಕ್ಕೆಂದು ವಲಸೆ ಹೋಗಿದ್ದ ಮಹದೇವಸ್ವಾಮಿ ಮತ್ತು ಸುಜಾತಾ ದಂಪತಿಯನ್ನು NDRF ತಂಡ ರಕ್ಷಿಸಿದೆ.

ನಂಜನಗೂಡು ಮೂಲದ ಕುಟುಂಬದ ಇಬ್ಬರು ನಾಪತ್ತೆ
ಕರ್ನಾಟಕ ಮೂಲದ ಲೀಲಾವತಿ(55) ಮತ್ತು 2 ವರ್ಷ 6 ತಿಂಗಳಿನ ಮಗು ನಿಹಾಲ್ ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ರವರ ಪುತ್ರಿ ಝಾನ್ಸಿರಾಣಿ ಅವರನ್ನ ಮೂಲತಃ ನಂಜನಗೂಡು ತಾಲೂಕಿನ ಸರಗೂರು ಮೂಲದ ಸದ್ಯ ವಯವನಾಡಿನ ಮುಂಡಕಾಯಿ ಗ್ರಾಮದ ಅನಿಲ್ ಕುಮಾರ್ ರವರಿಗೆ 2020 ರಲ್ಲಿ ವಿವಾಹ ಮಾಡಕೊಡಲಾಗಿತ್ತು. ಮುಂಡಕಾಯಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಘೋರ ದುರಂತದಲ್ಲಿ ಸಿಲುಕಿ ಝಾನ್ಸಿರಾಣಿ, ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಝಾನ್ಸಿರಾಣಿ ಅವರ ಮಗು ನಿಹಾಲ್ ಮತ್ತು ಅತ್ತೆ ಲೀಲಾವತಿ(55) ಭೂಕುಸಿತದ ಬಳಿಕ ನಾಪತ್ತೆಯಾಗಿದ್ದಾರೆ.

ಟಾಪ್ ನ್ಯೂಸ್

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

1-gadag

Lakkundi ಇತಿಹಾಸ, ಪರಂಪರೆ,ಗತವೈಭವವನ್ನು ದೇಶಕ್ಕೆ ಪರಿಚಯಿಸಲು ಶೀಘ್ರ ಉತ್ಖನನ

DK SHI NEW

USA ಪ್ರವಾಸ ವೈಯಕ್ತಿಕ; ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿ.ಕೆ.ಶಿವಕುಮಾರ್ ಮನವಿ

1-joshi

Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು‌ ಸಾಲುಗಟ್ಟಿ ನಿಂತಿದ್ದಾರೆ: ಜೋಶಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.