ನಾವು ಬದುಕುವುದೇ ಇಲ್ಲವೆಂದು ತಿಳಿದಿದ್ದೆವು… ಕೇರಳ ಭೂಕುಸಿತದಿಂದ ಪಾರಾದ ಕುಟುಂಬದ ಅನುಭವ

ಆ ಕರಾಳ ರಾತ್ರಿಯ ಅನುಭವ ಎಳೆಎಳೆಯಾಗಿ ಬಿಚ್ಚಿಟ್ಟ ವಿನೋದ್

Team Udayavani, Aug 1, 2024, 8:44 AM IST

ನಾವು ಬದುಕುವುದೇ ಇಲ್ಲವೆಂದು ತಿಳಿದಿದ್ದೆವು… ಕೇರಳ ಭೂಕುಸಿತದಿಂದ ಪಾರಾದ ಕುಟುಂಬದ ಅನುಭವ

ಚಾಮರಾಜನಗರ: ಕೇರಳದ ವಯನಾಡು ಜಿಲ್ಲೆಯ ಚೂರಲ್ ಮಲಾ ಟೀ ಎಸ್ಟೇಟ್‌ನಲ್ಲಿ ಟೀ ಎಲೆ ಕೀಳುವ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗೌರಮ್ಮ ಅವರ ಕುಟುಂಬ ಚಾ.ನಗರ ತಾಲೂಕಿನ ಮಂಗಲದಿಂದ ವಲಸೆ ಹೋಗಿ 50 ವರ್ಷಗಳಿಂದ ಅಲ್ಲಿ ನೆಲೆಸಿದೆ. ಗೌರಮ್ಮ ಮತ್ತು ಅವರ ಪುತ್ರ ವಿನೋದ್, ಗೌರಮ್ಮ ಅವರ ಸೋದರನ ಕುಟುಂಬ ಭೂಕುಸಿತದಿಂದ ಉಂಟಾದ ಪ್ರವಾಹದಿಂದ ಪಾರಾಗಿ ಈಗ ಮೇಪಾಡಿಯ ಕಾಳಜಿ ಕೇಂದ್ರದಲ್ಲಿದೆ. ಮಂಗಳವಾರ ಮಧ್ಯರಾತ್ರಿ ನಡೆದ ದುರಂತದಲ್ಲಿ ಪಾರಾಗಿ ಸುಮಾರು 18 ಗಂಟೆಗಳ ಕಾಲ ಪಕ್ಕದ ಗುಡ್ಡದಲ್ಲಿ ರಕ್ಷಣೆ ಪಡೆದು, ರಕ್ಷಣಾ ಪಡೆಗಳ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ರೋಚಕ ಕಥೆಯನ್ನು ಗೌರಮ್ಮ ಅವರ ಪುತ್ರ ವಿನೋದ್ ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ವಿನೋದ್ (29 ವರ್ಷ) ಅವರ ಮಾತಿನಲ್ಲೇ ಕೇಳಿ.

“ನಮ್ಮ ಮುತ್ತಜ್ಜಿ ಮಾರಮ್ಮ ಅವರು, ಕರ್ನಾಟಕದ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದವರು. ಸುಮಾರು 50 ವರ್ಷಗಳ ಹಿಂದೆಯೇ ಕೂಲಿ ಕೆಲಸಕ್ಕಾಗಿ ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲಾದ ಟೀ ಎಸ್ಟೇಟ್‌ಗೆ ಬಂದರು. ಅವರ ಮಗಳು ನಮ್ಮ ಅಜ್ಜಿ ಜಯಮ್ಮ ಅವರ ಮಗಳು ನಮ್ಮ ತಾಯಿ ಗೌರಮ್ಮ. ನಮ್ಮ ತಂದೆ ಗುಂಡ್ಲುಪೇಟೆಯ ಅಣ್ಣೂರು ಕೇರಿ ಗ್ರಾಮದ ನಾಗರಾಜ ಶೆಟ್ಟಿ ಅವರನ್ನು ವಿವಾಹವಾದರು. ನಮ್ಮ ತಾಯಿ ಚೂರಲ್ ಮಲೈ ಟೀ ಎಸ್ಟೇಟ್ ನಲ್ಲಿ ಟೀ ಕೀಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆ ನಾಗರಾಜ ಶೆಟ್ಟಿ ಗುಂಡ್ಲುಪೇಟೆಯ ಅಣ್ಣೂರು ಕೇರಿಯಲ್ಲಿ ನಮ್ಮ ಜಮೀನು ನೋಡಿಕೊಂಡು, ಎರಡೂ ಕಡೆ ಬಂದು ಹೋಗುತ್ತಾರೆ. ಚೂರಲ್‌ಮಲಾದಲ್ಲಿ ಹ್ಯಾರಿಸನ್ ಮಲಯಾಳಂ ಲಿಮಿಟೆಡ್ ಎಂಬ ದೊಡ್ಡ ಕಂಪೆನಿಯ ಟೀ ಎಸ್ಟೇಟ್ ಇದೆ. ಈ ಎಸ್ಟೇಟು ಸುಮಾರು 7000 ಎಕರೆಗಿಂತ ಹೆಚ್ಚು ವಿಸ್ತಾರವಾಗಿದೆ. ಇಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾನು ಕಲ್ಪೆಟ್ಟದಲ್ಲಿ ಆಯುರ್ವೇದಿಕ್ ಥೆರಪಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಪ್ರವೀದಾ ಚೂರಲ್‌ಮಲೈಯಿಂದ 13 ಕಿ.ಮೀ. ದೂರದ ಮೇಪಾಡಿಯವರು. ನರ್ಸ್ ಅಗಿದ್ದಾರೆ. ನನ್ನ ಪತ್ನಿ ಪ್ರವೀದಾ ಅವರ ತಂದೆ ತಾಯಿ ಚಾಮರಾಜನಗರ ಪಟ್ಟಣದಿಂದ ಹಲವಾರು ವರ್ಷಗಳ ಹಿಂದೆಯೇ ವಲಸೆ ಬಂದು ಮೇಪಾಡಿಯಲ್ಲೇ ನೆಲೆಸಿದ್ದಾರೆ.

ನಮ್ಮ ತಾಯಿಯವರು ಸೇರಿ ಕಾರ್ಮಿಕರಿಗೆ ಕಲ್ನಾರು ಶೀಟ್ ಛಾವಣಿಯ ಮನೆಗಳ ವಸತಿಗೃಹಗಳನ್ನು ಎಸ್ಟೇಟಿನವರೇ ನೀಡಿದ್ದಾರೆ. ಇಲ್ಲಿ ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಿಂದ ವಲಸೆ ಬಂದವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಡಕೈ ಮತ್ತು ಚೂರಲ್ ಮಲೈನಲ್ಲಿ ಕರ್ನಾಟಕದವರ (ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಯವರು) ಸುಮಾರು 30 ಮನೆಗಳಿವೆ. ಚೂರಲ್ ಮಲಾದಲ್ಲಿ ಸುಮಾರು 500 ಮನೆಗಳಿವೆ. ಇವುಗಳಲ್ಲಿ ಶೇ. 75ರಷ್ಟು ನೆಲಸಮವಾಗಿವೆ. ಟೀ ಎಸ್ಟೇಟ್ ಸಹ ನಾಶವಾಗಿದೆ. ಸುತ್ತಮುತ್ತಲ ಊರುಗಳ ಸುಮಾರು 3 ಸಾವಿರ ಜನ ಕಾಳಜಿ ಕೇಂದ್ರಗಳಲ್ಲಿದ್ದೇವೆ. ಈ ಕೇಂದ್ರಗಳಲ್ಲಿ ಸುಮಾರು 45 ಜನ ಕರ್ನಾಟಕದವರಿದ್ದೇವೆ.

ನಮ್ಮ ಮನೆಯಲ್ಲಿ ನಾನು ನಮ್ಮ ತಾಯಿ ಇದ್ದೆವು. ಪಕ್ಕದ ಮನೆಯಲ್ಲಿ ನಮ್ಮ ಸೋದರಮಾವ, ಅತ್ತೆ ಮತ್ತು ಅವರ ಮಗ ಇದ್ದಾರೆ. ನನ್ನ ಹೆಂಡತಿ ಹೆರಿಗೆಗೆಂದು ಮೇಪಾಡಿಗೆ ಹೋಗಿದ್ದಳು. ಮಂಗಳವಾರ ಬೆಳಗಿನ ಜಾವ 1.30 ರಲ್ಲಿ ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 20 ಹಸುಗಳು ಜೋರಾಗಿ ಕೂಗುತ್ತಿರುವ ಶಬ್ದ ಕೇಳಿಸಿತು. ಶಬ್ದಕ್ಕೆ ನಮಗೆ ನಿದ್ರೆಯಿಂದ ಎಚ್ಚರವಾಯಿತು. ನಾನು ಎದ್ದೆ, ಪಕ್ಕದ ಮನೆಯಿಂದ ನಮ್ಮ ಮಾವ ಸಹ ಎದ್ದು ಬಂದರು. ಕರೆಂಟ್ ಇರಲಿಲ್ಲ. ಟಾರ್ಚ್ ಬೆಳಕು ಹಿಡಿದು ದನಗಳ ಕೊಟ್ಟಿಗೆಗೆ ಬಂದು ನೋಡಿದಾಗ ನೀರು ಆವರಿಸಿತ್ತು. ಕಟ್ಟಿಹಾಕಿದ್ದ ಹಸುಗಳ ಹಗ್ಗ ಬಿಡಿಸಿದೆವು. ಅಷ್ಟರಲ್ಲಿ ನೀರು ನಮ್ಮ ಎದೆ ಮಟ್ಟಕ್ಕೆ ಬಂತು. ನಾವು ಛಾವಣಿಯ ಶೀಟ್ ಒಡೆದು ಮೇಲೆ ಬಂದವು.

ಮನೆಯ ಪಕ್ಕದಲ್ಲಿ ಉದ್ದನೆಯ ಕಂಬಿ ಇದ್ದು, ನಾನು ನಮ್ಮ ತಾಯಿ, ಮಾವ, ಅತ್ತೆ ಹಾಗೂ ಅತ್ತೆ ಮಗ ಕಂಬಿ ಮೇಲಿಂದ ನಮ್ಮನೆ ಪಕ್ಕದಲ್ಲಿರುವ ಟೀ ಎಸ್ಟೇಟ್ ಆಸ್ಪತ್ರೆಯ ಛಾವಣಿಯ ಮೇಲೆ ನಿಂತೆವು. ಅಲ್ಲಿಗೂ ನೀರು ತುಂಬಿತು. ಆ ಕಟ್ಟಡದ ಪಕ್ಕದಲ್ಲಿ ಚಿಕ್ಕ ಗುಡ್ಡ ಇತ್ತು. ನೀರಿನಿಂದ ರಕ್ಷಣೆಗಾಗಿ. ಚಿಕ್ಕ ಗುಡ್ಡಕ್ಕೆ ಹೋಗಿ ನಿಂತೆವು. ಅಲ್ಲಿ ಎಸ್ಟೇಟ್ ಅಸಿಸ್ಟೆಂಟ್ ಮ್ಯಾನೇಜರ್ ಬಂಗಲೆ ಇದೆ. ಆ ಅವರಣದಲ್ಲಿ ನಿಂತೆವು. ಅಕ್ಕಪಕ್ಕದಿಂದ ಜನರು ಸೇರಿ ಒಟ್ಟು 120 ಜನ ಸೇರಿದೆವು. ನಮ್ಮ ಎಸ್ಟೇಟಿನಿಂದ ಮೇಲ್ಭಾಗದಲ್ಲಿ ಮುಂಡಕೈ ಬೆಟ್ಟ ಇದೆ. ಅಲ್ಲಿ ಗುಡ್ಡ ಇನ್ನೊಮ್ಮೆ ಕುಸಿಯಿತು. ಇನ್ನು ನಾವು ಬದುಕುವುದಿಲ್ಲ ಎಂದು ತಿಳಿದೆವು. ಪಕ್ಕದ ಹೊಳೆಯಿಂದ ಕಾಪಾಡಿ ಕಾಪಾಡಿ ಎಂಬ ಶಬ್ದ ಕೇಳಿ ಬರುತ್ತಲೇ ಇತ್ತು. ಎಲ್ಲ ಕತ್ತಲೆ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೇಗೋ ರಾತ್ರಿ ತುಂಬಿಸಿದೆವು.
6 ಗಂಟೆ ನಸುಕಿನಲ್ಲಿ ಗುಡ್ಡದಿಂದ ನೋಡಿದರೆ. ನಮ್ಮ ಊರೇ ಇಲ್ಲ. ನಮ್ಮ ಮನೆಗಳೆಲ್ಲ ನೆಲ ಸಮವಾಗಿವೆ. ಮನೆಗಳುಕಟ್ಟಡಗಳಿದ್ದ ಜಾಗದಲ್ಲೆಲ್ಲ ಕೆಮ್ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ.

ನಮ್ಮ ಗುಂಪಿನಲ್ಲೊಬ್ಬರ ಗೆಳಯರು ಕೇರಳದ ಪತ್ರಕರ್ತರಿಗೆ ಕರೆ ಮಾಡಿ ಲೊಕೇಷನ್ ಕಳಿಸಿದರು. ಮಧ್ಯಾಹ್ನದ ಹೊತ್ತಿಗೆ ಎಸ್‌ಡಿಆರ್‌ಎಫ್ ರಕ್ಷಣಾಪಡೆಯವರು ಬಂದರು. ತಾತ್ಕಾಲಿಕ ಸೇತುವೆ ಮಾಡಿ, ನಮ್ಮನ್ನೆಲ್ಲ ರಕ್ಷಿಸಿ ಆಂಬುಲೆನ್ಸ್‌ ನಿಂದ ಮಂಗಳವಾರ ಸಂಜೆ 6.30ಕ್ಕೆ ಮೇಪಾಡಿ ಕ್ಯಾಂಪ್‌ಗೆ ಕರೆದುಕೊಂಡು ಬಂದರು.
ಈಗ ನಾವೆಲ್ಲ ಮೇಪಾಡಿಯ ಸರ್ಕಾರಿ ಪ್ರೌಢಶಾಲೆ, ಇನ್ನೊಂದು ಪ್ರೈವೇಟ್ ಗರ್ಲ್ ಸ್ಕೂಲ್, ಸೇಂಟ್ ಜೋಸೆಫ್ ಸ್ಕೂಲ್ ಮತ್ತಿತರ ಕಾಳಜಿ ಕೇಂದ್ರಗಳಲ್ಲಿ ಇದ್ದೇವೆ. ನಮ್ಮ ಮನೆ ಏನಾಗಿದೆ ನೋಡಬೇಕು. ನಮ್ಮ ಕೆಲ ಗೆಳಯರ ಕುಟುಂಬದವರು ಕಾಣೆಯಾಗಿದ್ದಾರೆ ಅವರನ್ನು ಪತ್ತೆ ಹಚ್ಚಬೇಕು. ನಾಳೆ ಗುರುವಾರ ನಮ್ಮ ಕುಟುಂಬದವರನ್ನು ಗುಂಡ್ಲುಪೇಟೆಯ ಅಣ್ಣೂರು ಕೇರಿಗೆ ಕಳುಹಿಸಬೇಕು. ನನ್ನ ಹೆಂಡತಿ ಮನೆಯವರು ಚಾಮರಾಜನಗರಕ್ಕೆ ತೆರಳಿದ್ದಾರೆ.
ನಮ್ಮನ್ನು ಎಚ್ಚರಿಸಿದ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಾವು ಹಗ್ಗ ಬಿಚ್ಚಿದ್ದೆವು. ಕತ್ತಲೆಯಲ್ಲಿ ಅವು ಎತ್ತ ಕೊಚ್ಚಿಕೊಂಡು ಹೋದವು ಎಂಬುದೂ ಗೊತ್ತಾಗಲಿಲ್ಲ.”

– ಕೆ.ಎಸ್. ಬನಶಂಕರ ಆರಾಧ್ಯ

ಇದನ್ನೂ ಓದಿ: Paris Olympics: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಏಳು ತಿಂಗಳ ಗರ್ಭಿಣಿ!

ಟಾಪ್ ನ್ಯೂಸ್

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

11-udupi

Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

ct rav

CIDಗೆ ಹೆಬ್ಬಾಳ್ಕರ್‌ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?

vidhana-soudha

Congress; ಪರಿಷತ್‌ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.