ಕೈಮಗ್ಗ ಘಟಕ ಸ್ಥಾಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆಯರು
Team Udayavani, Apr 21, 2021, 2:07 PM IST
ಚಾಮರಾಜನಗರ: ಜಿಲ್ಲಾಡಳಿತದ ಕಾರ್ಯಯೋಜನೆ ಹಾಗೂ ಲೀಡ್‌ಬ್ಯಾಂಕ್ ಆಸಕ್ತಿಯ ಪರಿಶ್ರಮದ ಫಲವಾಗಿ ಚಾಮರಾಜನಗರ ತಾಲೂಕಿನ ಪುಣಜನೂರು ಭಾಗದ ವಿವಿಧ ಗ್ರಾಮಗಳ 110 ಕುಟುಂಬಗಳು ಕೈಮಗ್ಗ ನೇಕಾರಿಕೆ ವೃತ್ತಿ ಬದುಕು ಕಟ್ಟಿಕೊಳ್ಳಲು ಸಫಲವಾಗಿವೆ.
ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ನೀಡಿದ ಉತ್ತೇಜನದಿಂದಾಗಿ ಲೀಡ್‌ಬ್ಯಾಂಕ್ ಪುಣಜನೂರು ಭಾಗದ ಕಾಡಂಚಿನ ಗ್ರಾಮಗಳಾದ ದೊಡ್ಡಮೂಡಹಳ್ಳಿ, ಕೋಳಿಪಾಳ್ಯ, ಮೂಕನಪಾಳ್ಯ, ಬೆಜ್ಜಲಪಾಳ್ಯ, ವೀರಯ್ಯನಪುರ, ರಂಗಸಂದ್ರ (ಬೂದಿಪಡಗ)ದ 110 ಕುಟುಂಬಗಳಿಗೆ ನೇಕಾರ ವೃತ್ತಿ ಉದ್ದಿಮೆ ಕೈಗೊಳ್ಳಲು ಬ್ಯಾಂಕ್ ಆಫ್ ಬರೋಡದ ಮೂಲಕ ಸಾಲಸೌಲಭ್ಯ ಒದಗಿಸಿದೆ.
ಸಾಲ ಸೌಲಭ್ಯ ಪಡೆದ ಕುಟುಂಬಗಳು ಜೀವನೋಪಾಯಕ್ಕಾಗಿ ವ್ಯವಸಾಯ ಇತರೆ ಕೂಲಿಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬದುಕಿನಲ್ಲಿ ಆದಾಯ ಹೆಚ್ಚಳ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದ ಎಲ್ಲ ಕುಟುಂಬಗಳು ನೇಕಾರ ವೃತ್ತಿ ಉದ್ದಿಮೆಗೆ ಆಸಕ್ತಿತೋರಿಸಿದ್ದರು.
ಆಗ ನೆರವಿಗೆ ಬಂದಿದ್ದುಜಿಲ್ಲಾಡಳಿತ ಹಾಗೂ ಲೀಡ್‌ಬ್ಯಾಂಕ್. ವಿಶೇಷವೆಂದರೆ ನೇಕಾರ ಉದ್ದಿಮೆಗೆ ಮುಂದಾದ 110 ಕುಟುಂಬಗಳ ಪೈಕಿ 102ಮಹಿಳೆಯರೇ ಆಗಿದ್ದಾರೆ. 8 ಜನರು ಮಾತ್ರ ಪುರುಷರಾಗಿದ್ದಾರೆ. ಸೌಲಭ್ಯ ಪಡೆದವರಲ್ಲಿ 105ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ನಾಲ್ವರು ಒಬಿಸಿ, ಓರ್ವ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ಪ್ರತಿ ಉದ್ದಿಮೆ ಘಟಕ ವೆಚ್ಚಕ್ಕೆ 30,000 ರೂ. ಸಾಲ ನೀಡಲಾಗಿದೆ. ಮಗ್ಗಹಾಗೂ ಪರಿಕರಗಳ ಖರೀದಿಗಾಗಿ ಆರ್ಥಿಕನೆರವನ್ನು ಬಳಸಿಕೊಳ್ಳುತ್ತಿದ್ದಾರೆ.
ನೇಕಾರ ಉದ್ದಿಮೆಗೆ ಸ್ವಯಂ ಪ್ರೇರಿತರಾಗಿಉತ್ಸಾಹ ತೋರಿದ ಪುಣಜನೂರು ಗ್ರಾಮದವ್ಯಾಪ್ತಿಯ ಕಾಡಂಚಿನ ಕುಟುಂಬಗಳಿಗೆವೆಂಕಟಯ್ಯನ ಛತ್ರದ ಬ್ಯಾಂಕ್ ಆಫ್ ಬರೋಡಒಟ್ಟು 33,00,000 ರೂ.ಗಳ ಆರ್ಥಿಕಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯಒದಗಿಸುವಲ್ಲಿ ಲೀಡ್‌ಬ್ಯಾಂಕ್ ವ್ಯವಸ್ಥಾಪಕರಾದ ವಿಜಯ್‌ಕುಮಾರ್ ಚೌರಾಸಿರವರ ವಿಶೇಷ ಕಾಳಜಿಯು ಇದೆ. ಚೌರಾಸಿಯ ಅವರು ಖುದ್ದುಗ್ರಾಮಗಳಿಗೆ ಭೇಟಿ ನೀಡಿ ಜನರ ಆಸಕ್ತಿ, ಉತ್ಸಾಹ ಮನಗಂಡು ಹೊಸ ನೇಕಾರ ಉದ್ಯಮ ಬದುಕಿಗೆ ಬೆಂಬಲವಾಗಿದ್ದಾರೆ.ಜಿಲ್ಲಾಡಳಿತ ಹಾಗೂ ಬ್ಯಾಂಕಿನ ನೆರವಿನಿಂದ ನಮ್ಮ ಬದುಕು ಹಸನಾಗುತ್ತಿದೆ.
ಈಗ ಇರುವಕೆಲಸದ ಜೊತೆ ಜೊತೆಯಲ್ಲಿಯೇ ನೇಕಾರ ಉದ್ಯಮವನ್ನು ಕೈಗೊಂಡಿದ್ದೇವೆ. ಪೂಜಾ,ಯೋಗಮ್ಯಾಟ್, ಮನೆಗಳಿಗೆ ಬಳಸುವ ಮ್ಯಾಟ್‌ಗಳನ್ನು ತಯಾರು ಮಾಡಿ ಮಾರಾಟಮಾಡುತ್ತಿದ್ದೇವೆ. 2000 ರೂ. ಬಂಡವಾಳ ಹೂಡಿ8000 ರೂ. ಆದಾಯ ಪಡೆಯುತ್ತಿದ್ದೇವೆ ಎಂದುಸೌಲಭ್ಯ ಪಡೆದ ಮಹಿಳೆಯರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.