ಶಸ್ತ್ರ ಚಿಕಿತ್ಸೆಗೆ ಮುಗಿಬಿದ್ದ ಮಹಿಳೆಯರು
Team Udayavani, Apr 27, 2019, 5:00 AM IST
ಸಂತೆಮರಹಳ್ಳಿ: ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಮಕ್ಕಳಿಲ್ಲದ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಮಳೆಯರ ದಂಡೇ ನೆರೆದಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಆಸ್ಪತ್ರೆಗೆ ಬಂದ ನೂರಕ್ಕೂ ಹೆಚ್ಚು ಮಹಿಳೆಯರು: ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಯಳಂದೂರು ಪಟ್ಟಣದ ಆಸ್ಪತ್ರೆಯ ಮುಂಭಾಗ ಕೊಳ್ಳೇಗಾಲ, ಹನೂರು, ಸಂತೆಮರಹಳ್ಳಿ, ಚಾಮರಾಜನಗರ ಭಾಗದ ನೂರಕ್ಕೂ ಹೆಚ್ಚು ಮಹಿಳೆಯರನ್ನು ಆಶಾ ಕಾರ್ಯಕರ್ತೆಯರು ಕರೆ ತಂದಿದ್ದರು. ಕೆಲ ಕಾಲ ಗೊಂದಲ ಉಂಟಾಯಿತು.
ಇರುವುದೊಬ್ಬರೇ ವೈದ್ಯರು: ನೋಸ್ಕಾಲ್ ಪಾಲ್ ವೆಸೆಕ್ಟಮಿ ಮಕ್ಕಳಾಗದಂತೆ ತಡೆಯಲು ಮಹಿಳೆಯರು ಮಾಡಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಇದಾಗಿದೆ.ಇದೊಂದು ಲ್ಯಾಪ್ರೋಸ್ಕೂಪಿಕ್ ಆಪರೇಷನ್ ಆಗಿದೆ. ಇದಕ್ಕೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಾ.ಬಸವರಾಜು ಶಸ್ತ್ರ ಚಿಕಿತ್ಸಾ ತಜ್ಞರಾಗಿದ್ದಾರೆ. ಇವರೊಬ್ಬರೇ ಯಳಂದೂರು, ಕೊಳ್ಳೇಗಾಲ, ಹನೂರು ಹಾಗೂ ಸಂತೆಮರಹಳ್ಳಿ ಭಾಗದ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.
ಕೊಳ್ಳೇಗಾಲ, ಚಾಮರಾಜನಗರ ಆಸ್ಪತ್ರೆ ದುರಸ್ತಿಯಿಂದ ಸಮಸ್ಯೆ: ಕೊಳ್ಳೇಗಾಲ ಪಟ್ಟಣ ಹಾಗೂ ಚಾಮರಾಜನಗರ ಆಸ್ಪತ್ರೆಗಳಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ಯಳಂದೂರಿನ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಈ ಶಸ್ತ್ರ ಚಿಕಿತ್ಸೆ ನೆಡೆಯುತ್ತದೆ. ಬೇರೆ ಭಾಗದಲ್ಲಿ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನಡೆಯದಿದ್ದರಿಂದ ಯಳಂದೂರಿನ ಆಸ್ಪತ್ರೆಗೆ ಹೆಚ್ಚಿನ ಮಹಿಳೆಯರು ಆಗಮಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.
ಆಸ್ಪತ್ರೆ ಚಿಕ್ಕದು, ಮೂಲಭೂತ ಸಮಸ್ಯೆ: ಪಟ್ಟಣದ ಆಸ್ಪತ್ರೆಯು ಇನ್ನೂ ತಾಲೂಕು ಆಸ್ಪತ್ರೆಯಾಗಿ ಮಾರ್ಪಟ್ಟಿಲ್ಲ. ಇದು ಕೇವಲ 30 ಹಾಸಿಗೆಗಳ ಆಸ್ಪತ್ರೆಯಾಗಿದೆ. ದಿಢೀರನೆ ಇಷ್ಟೊಂದು ಮಹಿಳೆಯರು, ಅವರೊಂದಿಗೆ ಪೋಷಕರು ಚಿಕ್ಕ ಮಕ್ಕಳು ಹಾಗೂ ಆಶಾ ಕಾರ್ಯಕರ್ತೆಯರು ಆಗಮಿಸಿದ್ದರಿಂದ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಸಮಸ್ಯೆಗಳು ಕಾಡಿದವು.
ವೈದ್ಯರ ಪರದಾಟ: ಅಲ್ಲದೆ ಇಲ್ಲಿ ಕೇವಲ 4 ಜನ ವೈದ್ಯರ ತಂಡ ಮಾತ್ರ ಇದೆ. ಇದರಲ್ಲಿ ಒಬ್ಬ ಶಸ್ತ್ರ ಚಿಕಿತ್ಸಕರು, ಮತ್ತೂಬ್ಬರು ಅರೆವಳಿಕೆ ತಜ್ಞರು, ಒಬ್ಬರು ಪ್ರಸೂತಿ ತಜ್ಞರು ಇದ್ದು ಈ ಮೂವರೂ ಕೂಡ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲೆ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೊಬ್ಬ ವೈದ್ಯರು ಮಕ್ಕಳ ತಜ್ಞರಾಗಿದ್ದು ಹೊರ ರೋಗಿಗಳ ಸಂಖ್ಯೆಯೂ ಅಧಿಕವಾಗಿದ್ದರಿಂದ ಚಿಕಿತ್ಸೆ ನೀಡಲು ಹಾಗೂ ಪಡೆದುಕೊಳ್ಳಲು ವೈದ್ಯರು ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಆಸ್ಪತ್ರೆ ಮೇಲ್ದರ್ಜೆಗೇರಲಿ: ಯಳಂದೂರು ಸಾರ್ವಜನಿಕ ಆಸ್ಪತ್ರೆ ಮೇಲ್ದಜೇìಗೇರಿಸಲು ಅನೇಕ ವರ್ಷಗಳಿಂದಲೂ ಬೇಡಿಕೆ ಸಲ್ಲಿಸಲಾಗುತ್ತಿದೆ. ಇದನ್ನು 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಾಗಿ ಮಾರ್ಪಡಿಸಿದ್ದಲ್ಲಿ ಇಲ್ಲಿ ನುರಿತ ತಜ್ಞರೂ ಸೇರಿದಂತೆ 12 ಜನ ವೈದ್ಯರ ತಂಡ ಇರುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸುಲಭವಾಗುತ್ತದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಇದನ್ನು ಮೇಲ್ದಜೇìಗೇರಿಸಲು ಕ್ರಮ ವಹಿಸುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳಾದ ಆರ್. ಗೋಪಾಲಕೃಷ್ಣ, ಸುಹೇಲ್‌ಖಾನ್ ದೂರಿದರು.
ಬೇರೆ ತಾಲೂಕಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಒಂದು ದಿನದಲ್ಲಿ ಕೇವಲ 30 ಮಹಿಳೆಯರಿಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿದೆ. ಹಾಗಾಗಿ ಎಲ್ಲರ ಹೆಸರನ್ನೂ ನೋಂದಾಯಿಸಿಕೊಳ್ಳಲಾಗಿದೆ. ಉಳಿದವರಿಗೆ ಮುಂದಿನ ದಿನಾಂಕವನ್ನು ನಿಗಧಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ವಹಿಸಲಾಗುವುದು.
-ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ
* ಫೈರೋಜ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್ ನಿಲ್ದಾಣ
Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ
Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
S. Jayanna: ಕೊಳ್ಳೇಗಾಲ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ ನಿಧನ
Kollegala; ಮೆಕ್ಕೆಜೋಳ ತಿಂದು ಗಂಡಾನೆ ಹೊಲದಲ್ಲೇ ಸಾ*ವು
MUST WATCH
ಹೊಸ ಸೇರ್ಪಡೆ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.