ಜಿಲ್ಲೆ ರಂಗಭೂಮಿಯ ತವರು ಮನೆ


Team Udayavani, Mar 29, 2021, 12:39 PM IST

ಜಿಲ್ಲೆ ರಂಗಭೂಮಿಯ ತವರು ಮನೆ

ಚಾಮರಾಜನಗರ: ಜಿಲ್ಲೆಯು ರಂಗಭೂಮಿಯ ತವರು ಮನೆ ಆಗಿದ್ದು,ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಡಾ.ರಾಜಕುಮಾರ್‌ರಂತಹ ಮಹಾನ್‌ನಟರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆಎಂದು ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಹೆಮ್ಮೆ ವ್ಯಕ್ತಪಡಿಸಿದರು.

ನಗರದ ರೋಟರಿ ಭವನದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗವಾಹಿನಿ, ಚೇತನಕಲಾವಾಹಿನಿ, ಜಿಲ್ಲಾ ರಂಗಭೂಮಿಕಲಾವಿದರ ಸಂಘ, ಉಮ್ಮತ್ತೂರು ಗೆಳೆಯರಬಳಗದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಂಗಸಂಗೀತೋತ್ಸವ ಹಾಗೂ ರಂಗ ದೃಶ್ಯಾವಳಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ನಾಡಿನ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು,ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಮಾಧ್ಯಮವಾಗಿದೆ. ನಾಟಕಗಳಿಂದ ಉತ್ತಮ ಅಭಿರುಚಿಯನ್ನು ಬೆಳೆಸಬಹುದು. ಜೀವನ ಮೌಲ್ಯಗಳನ್ನುವೃದ್ಧಿಸಿಕೊಳ್ಳಬಹುದು. ಇಂಥರಂಗಭೂಮಿಗೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ನಮ್ಮಚಾಮರಾಜನಗರ ಜಿಲ್ಲೆಯದ್ದಾಗಿದೆ. ರಂಗಭೂಮಿಯಿಂದ ಬಂದ ಪ್ರತಿಭೆ ರಾಜ್‌ಕುಮಾರ್‌ ಅವರು ಇಡೀ ದೇಶವೇಮೆಚ್ಚುವಂಥ ನಟರಾಗಿ ಬೆಳೆದರು ಎಂದು ಶ್ಲಾಘಿಸಿದರು.

ಕಾಮಗಾರಿ ವಿಳಂಬಕ್ಕೆ ಬೇಸರ: ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರ ಕಲಾಪ್ರದರ್ಶನಕ್ಕೆ ರಂಗಮಂದಿರ ನಿರ್ಮಾಣ ಕಾರ್ಯವು ವಿಳಂಬವಾಗಿ ನಡೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಮಹೇಶ್‌, ಜಿಲ್ಲಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆದಷ್ಟು ಬೇಗ ರಂಗಮಂದಿರನಿರ್ಮಾಣ ಕಾಮಗಾರಿಯನ್ನು ಮುಗಿಸಿಕಲಾವಿದರ ಕಲಾ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.

ಕಲಾವಿದರಿಗೆ ನೆರವು ನೀಡಲಿ: ರಂಗಭೂಮಿಯ ವೇದಿಕೆಯ ಮೇಲೆರಾಜನಾಗಿದ್ದ ಕಲಾವಿದರು, ನಿಜಜೀವನದಲ್ಲಿ ಕಡುಬಡತನದಲ್ಲಿ ಜೀವನಸಾಗಿಸುತ್ತಿರುತ್ತಾರೆ. ಅವರ ಕೊನೆಗಾಲದಲ್ಲಿಆರೋಗ್ಯ ಹದಗೆಟ್ಟು ತುಂಬಾ ಕಷ rಅನುಭವಿಸುತ್ತಾರೆ. ಇಂತಹ ಕಲಾವಿದರಿಗೆಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದು ಹೇಳಿದರು.

ಸುಭದ್ರಮ್ಮ ಮನ್ಸೂರ್‌ ರಂಗ ಪ್ರಶಸ್ತಿ: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಬ್ರಿಟನ್‌ ರಂಗನಿರ್ದೇಶಕಿ ಹೆಲೆನ್‌ ಮಿರೇನ್‌ ಅವರು ರವಾನಿಸಿದ್ದ ರಂಗ ಸಂದೇಶವನ್ನುಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಓದಿದರು. ನಾಟಕಶಿಕ್ಷಕಿಯಾಗಿ ರಂಗ ನಿರ್ದೇಶಕಿಯಾಗಿ, ನಟಿಯಾಗಿ ಸಾಧನೆಗೈದ ಚಿತ್ರಾವೆಂಕಟರಾಜುಗೆ ನಾಡೋಜ ಸುಭದ್ರಮ್ಮ ಮನ್ಸೂರ್‌ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಂಗ ವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ,ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಅಧ್ಯಕ್ಷ ಘಟಂ ಕೃಷ್ಣ, ರೋಟರಿ ಸಂಸ್ಥೆ ಅಧ್ಯಕ್ಷಪ್ರಕಾಶ್‌, ಜಿಪಂ ಸದಸ್ಯ ಬಾಲರಾಜ್‌ ಭಾಗವಹಿಸಿದ್ದರು. ರಾಜ್ಯ ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣಸ್ವಾಮಿ ( ಪಾಪು) ಅಧ್ಯಕ್ಷತೆ ವಹಿಸಿದ್ದರು.

ಸಂತೆಮರಹಳ್ಳಿ ಎಂಪಿ ರಾಜು, ಬಿಎಂ ಮಹದೇವಯ್ಯ ಆರ್‌.ಎಂ. ನಾಗರಾಜು,ಅರುಣ್‌ಕುಮಾರ್‌ ಮಾಂಬಳ್ಳಿ, ವಿಮಹದೇವಯ್ಯ( ಆಪು), ಬಾಗಳಿರಾಜಶೇಖರ್‌, ಉಮ್ಮತ್ತೂರು ಬಸವಣ್ಣ,

ಎಂ. ಎನ್‌.ಮಹಾದೇವ, ಶಿವನಂಜಯ್ಯರಾಮಸಮುದ್ರ, ಕಿರಣಗಿರ್ಗಿ ಭಾಗವಹಿಸಿದ್ದರು. ರಂಗ ದೃಶ್ಯಾವಳಿಯಲ್ಲಿ ಉಮ್ಮತ್ತೂರು ಬಸವರಾಜು ದಕ್ಷ ನಾಗಿ, ಈಶ್ವರನಾಗಿ ಸೂರ್ಯಮೂರ್ತಿ, ನಾರದನಾಗಿ ವೆಂಕಟರಮಣಸ್ವಾಮಿ, ಭೃಗುವಾಗಿ ಹಳ್ಳಿಕೆರೆಹುಂಡಿ ಗುರು ಜಾಲ ಬ್ರಹ್ಮನಾಗಿಪಿ.ಲಿಂಗಯ್ಯ, ಸತಿ ಪಾತ್ರದಲ್ಲಿ ಮಂಡ್ಯದಪವಿತ್ರ ಅವರು ಮನೋಜ್ಞ ಅಭಿನಯ ನೀಡಿ ಕಲಾಭಿಮಾನಿಗಳ ಗಮನ ಸೆಳೆದರು.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.