ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಯದುವೀರ್ ಭೇಟಿ
Team Udayavani, Feb 9, 2021, 1:30 PM IST
ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮೈಸೂರು ರಾಜ ವಂಶಸ್ಥರಾದ ಯದುವೀರ ದಂಪತಿ ಮತ್ತು ಪುತ್ರನ ಸಮೇತ ಭೇಟಿ ನೀಡಿ ವೇಣುಗೋಪಾಲಸ್ವಾಮಿ ದರ್ಶನ ಪಡೆದರು.
ಪ್ರತಿ ವರ್ಷದಂತೆ ಈ ಬಾರಿಯೂ ಬೆಟ್ಟಕ್ಕೆ ಆಗಮಿಸಿದ ಯದುವೀರ್ ಮತ್ತು ಪತ್ನಿ ತ್ರಿಷಿಕಾ, ಪುತ್ರ ಆದ್ಯವೀರ್ ಹಾಗೂ ಕುಟುಂಬಸ್ಥರನ್ನು ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಮತ್ತು ತಂಡ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಇದನ್ನೂ ಓದಿ :ವಿರೋಧಪಕ್ಷ ವೇ ಡಕೋಟಾ: ಸಚಿವ
ನಂತರ ದೇವಾಲಯಕ್ಕೆ ತೆರಳಿದ ಯದುವೀರ್ ಮತ್ತು ಕುಟುಂಬಸ್ಥರು ಹಿಮವದ್ ವೇಣು ಪಾಲಸ್ವಾಮಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ ನಂತರ ಮೈಸೂರಿಗೆ ತೆರಳಿದರು. ಈ ವೇಳೆ ಡಿವೈಎಸ್‌ಪಿ ಪ್ರಿಯದರ್ಶಿನಿ, ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್, ಆರ್‌ಎಫ್ಒ ಎನ್.ಪಿ. ನವೀನ್ ಕುಮಾರ್ ಸೇರಿದಂತೆ ಹಲವರು ಇದ್ದರು.