Museum: ಯಳಂದೂರಲ್ಲಿ ಸೊರಗಿದ ವಸ್ತುಸಂಗ್ರಹಾಲಯ!
Team Udayavani, Oct 2, 2023, 10:28 AM IST
ಯಳಂದೂರು: ಹಲವಾರು ಐತಿಹಾಸಿಕ ದಾಖಲೆಗಳನ್ನು ತನ್ನ ಬಗಲಿನಲ್ಲಿಟ್ಟುಕೊಂಡಿರುವ ಚಾಮರಾಜನಗರ ಜಿಲ್ಲೆಯ ಪುಟ್ಟ ತಾಲೂಕು ಯಳಂದೂರು. ಷಡಕ್ಷರದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ ಸಾಹಿತ್ಯದ ಮೇರು ಪರ್ವತಗಳು. ಪೂರ್ವ ಘಟ್ಟಗಳಲ್ಲಿ ನೆಲಸಿರುವ ಬಿಳಿಗಿರಿರಂಗ, ಬಿದ್ದಾಂಜನೇಯ ಆರಾಧ್ಯ ದೇವರು, ವಿಶ್ವಪ್ರ ಸಿದ್ಧ ಬಳೇಮಂಟಪ ಇಲ್ಲಿನ ಕಲಾ ನೈಪುಣ್ಯಕ್ಕೆ ಮತ್ತೂಂದು ಸಾಕ್ಷಿ.
ಸೋತಿದೆ: ಪಟ್ಟಣದ ಜಹಗೀರಾªರ್ ಬಂಗಲೆ ಎಂದು ಕರೆಯಿಸಿಕೊಳ್ಳುತ್ತಿದ್ದ ಬಂಗಲೆಯನ್ನು 2014ರಲ್ಲಿ ಜಿಲ್ಲೆಯಲ್ಲೇ ಪ್ರಥಮ ವಸ್ತು ಸಂಗ್ರಹಾಲಯ ಮಾಡಲು ನವೀಕರಣಕ್ಕಾಗಿಯೇ ಕೋಟ್ಯಂತರ ರೂ.,ವೆಚ್ಚದಲ್ಲಿ ನಡೆ ಸಿ ಉದ್ಘಾಟಿಸಲಾಗಿದೆ. ಇದಕ್ಕೆ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ ಎಂದೂ ನಾಮಕರಣ ಮಾಡಲಾಗಿದೆ. ಆದರೆ, ನಿರ್ವಹಣೆಯಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ ಸೋತಿದ್ದು ವಸ್ತು ಸಂಗ್ರಹಾಲಯ ಸೊರಗಿದೆ.
ಕೇವಲ ಗ್ಯಾಲರಿಗೆ ಸೀಮಿತ: ಒಳ ಹೊಕ್ಕರೆ ಮೈಸೂರು ಮಹಾರಾಜರ ಕಾಲದ ಫೋಟೋ ಗ್ಯಾಲರಿ, ಇಲ್ಲೇ ಸಿಕ್ಕ ಕೆಲವು ಕಲ್ಲಿನ ಶಿಲೆ, ಬಂಗಲೆ ನವೀಕರಣದ ಚಿತ್ರ ಹೊರತುಪಡಿಸಿದರೆ ಇನ್ನೇನು ನೋಡಲು ಸಾಧ್ಯವಾಗಲ್ಲ. ಉದ್ಘಾಟನೆಗೊಂಡು 9 ವರ್ಷವಾದರೂ ಹೊಸ ರೂಪ ನೀಡುವಲ್ಲಿ ಇಲಾಖೆ ಸೋತಿದೆ. ನಿರ್ವಹಣೆಗೆ 4 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಚಾರದ ಕೊರತೆಯಿಂದ ಇನ್ನೂ ಗೌಣವಾಗಿಯೇ ಉಳಿದಿದೆ. ಈ ಕಟ್ಟಡದ ಮುಂಭಾಗದ ಖಾಲಿ ಜಾಗದ ವಿಚಾರಣೆ ನ್ಯಾಯಾಲಯದಲ್ಲಿದೆ.
ಮಧ್ಯಾಹ್ನದಿಂದಲೇ ಗೋಬಿ, ಪಾನೀಪುರಿ, ಮೀನು, ಕೋಳಿ ಮಾಂಸದ ಕಬಾಬ್ ಮಾರಾ ಟ ಹಲವು ಗಾಡಿಗಳು ನಿಲ್ಲುತ್ತವೆ. ಹೀಗಾಗಿ ಈ ಸ್ಥಳವೆಲ್ಲಾ ದುರ್ನಾತ ಬೀರುತ್ತದೆ. ಈ ಸ್ಥಳವನ್ನು ಉದ್ಯಾನವನ ಮಾಡುವ ಅವಕಾಶವಿದ್ದು ಶೀಘ್ರ ಸಂಬಂಧಪಟ್ಟ ಶಾಸಕರು ಕಾಳಜಿ ವಹಿಸಿ ಸೂಕ್ತ ಕ್ರಮ ವಹಿಸಬೇಕು ಎಂಬುದು ಗೋಪಾಲ, ವಿವೇಕ ಹಲವರ ಆಗ್ರಹವಾಗಿದೆ.
ಮಾಜಿ ಸಂಸದ ದಿ.ಆರ್ .ಧ್ರುವನಾರಾಯಣ ಅವರ ಪರಿಶ್ರಮದ ಫಲವಾಗಿ ವಸ್ತುಸಂಗ್ರಹಾಲಯವಾಗಿ ರೂಪಿಸಲಾಗಿದೆ. ಆದರೆ, ಅವರು ಅಂದು ಅಪರೂಪದ ಐತಿಹಾಸಿಕ ವಸ್ತು ಸಂಗ್ರಹಿಸಿ ಇಡಬೇಕೆಂದು ಸೂಚನೆ ನೀಡಿದ್ದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. –ಗೋಪಾಲ, ಸ್ಥಳೀಯರು .
–ಫೈರೋಜ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.