ಯಳಂದೂರು ಪಟ್ಟಣ ಪಂಚಾಯಿ : ಅಧ್ಯಕ್ಷೆ ಸ್ಥಾನಕ್ಕೆ ನಾಲ್ವರು ಮಹಿಳೆಯರ ಮಧ್ಯೆ ಪೈಪೋಟಿ
Team Udayavani, Oct 11, 2020, 2:46 PM IST
ಯಳಂದೂರು: ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡು ಮಹಿಳೆಯರಿಗೆ ಮೀಸಲಾಗಿದ್ದು, ಆಕಾಂಕ್ಷಿಗಳ ನಡುವೆ ಪೈಪೋಟಿ ಎದುರಾಗಿದೆ.
11 ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಪಡೆದಿತ್ತು. ಪಪಂನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದೆ. ಈ ಬಾರಿ ಅಧ್ಯಕ್ಷ ಸ್ಥಾನವು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಗೆ ಮೀಸಲಾಗಿದೆ. 11 ಸದಸ್ಯರಲ್ಲಿ ಐವರು ಮಹಿಳಾ ಸದಸ್ಯರಿದ್ದು,ಈಪೈಕಿ ನಾಲ್ವರು ಕಾಂಗ್ರೆಸ್ ಹಾಗೂ ಒಬ್ಬರು ಬಿಜೆಪಿಯವರಾಗಿದ್ದಾರೆ.
ಆಯ್ಕೆಯಾದ ಸದಸ್ಯರು: 1ನೇ ವಾಡ್-ಮಹೇಶ್, 2ನೇ ವಾರ್ಡ್-ವೈ.ಜಿ. ರಂಗನಾಥ, 3ನೇ ವಾರ್ಡ್-ಮಹಾದೇವನಾಯಕ, 5ನೇ ವಾರ್ಡ್- ಕೆ. ಮಲ್ಲಯ್ಯ, 6ನೇ ವಾರ್ಡ್-ಮಂಜು, 8ನೇ ವಾರ್ಡ್ -ಬಿ.ರವಿ, ನೇ ವಾರ್ಡ್-ಪ್ರಭಾವತಿ, 9 ನೇ ವಾರ್ಡ್- ಸುಶೀಲಾ, 10ನೇ ವಾರ್ಡ್- ಲಕ್ಷ್ಮೀ, 11ನೇ ವಾರ್ಡ್‌ನಿಂದ ಶಾಂತಮ್ಮ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. 4ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಸವಿತಾ ಬಿಜೆಪಿಯ ಏಕೈಕ ಸದಸ್ಯರಾಗಿದ್ದಾರೆ.
ಅಧ್ಯಕ್ಷೆ ಸ್ಥಾನ: =ಪಪಂಗೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ನಾಲ್ವರು ಮಹಿಳೆಯರು ತೆರೆಮರೆಯಲ್ಲಿ ಕ ಸರತ್ತು ನಡೆಸುತ್ತಿದ್ದಾರೆ. ಪಕ್ಷದ ಪ್ರಭಾವಿ ನಾಯಕರ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಉಪಾಧ್ಯಕ್ಷೆ ಸ್ಥಾನ: ಉಪಾಧ್ಯಕ್ಷೆ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದೆ. 11ನೇ ವಾರ್ಡ್‌ನ ಶಾಂತಮ್ಮ ಹಾಗೂ 10ನೇ ವಾರ್ಡ್‌ನ ಲಕ್ಷ್ಮೀ ಆಕಾಂಕ್ಷಿಗಳಾಗಿದ್ದು, ಇಬ್ಬರ ನಡುವೆ ಪೈಪೋಟಿ ಇದೆ.
ಯಾರಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ಥಾನ? : ಪಪಂಅಧ್ಯಕ್ಷೆಸ್ಥಾನಕ್ಕೆಪ್ರಭಾವತಿ, ಸುಶೀಲಾ,ಲಕ್ಷ್ಮೀ,ಶಾಂತಮ್ಮಆಕಾಂಕ್ಷಿಗಳಾಗಿದ್ದು, ಈ ನಾಲ್ವರು ಸದಸ್ಯರಲ್ಲಿಅಧಿಕಾರದಹಂಚಿಕೆ ಸೂತ್ರಕ್ಕೂಅವಕಾಶವಿದೆ. ಉಪಾಧ್ಯಕ್ಷೆ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ ಇರುವುದರಿಂದ ಇದರಲ್ಲೂ ಅಧಿಕಾರಹಂಚಿಕೊಳ್ಳಬಹುದಾಗಿದೆ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿರುವ ಮಾಜಿ ಸಂಸದ ಆರ್. ಧ್ರುವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿಶಾಸಕರಾದ ಎಸ್. ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜುಸೇರಿದಂತೆ ಪಕ್ಷದ ಸ್ಥಳೀಯ ನಾಯಕರ ಕೃಪಾ ಕಟಾಕ್ಷಕ್ಕಾಗಿ ಆಕಾಂಕ್ಷಿಗಳು ಕಾಯುತ್ತಿದ್ದು, ಯಾರಿಗೆ ಗದ್ದುಗೆ ಒಲಿಯುತ್ತದೆಯೋಕಾದು ನೋಡಬೇಕಿದೆ.
-ಫೈರೋಜ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.